;

ಸಿಂಧನೂರು ಪೌರ ಕಾರ್ಮಿಕರ ದಿನಾಚರಣೆ ಮತ್ತು ಸನ್ಮಾನ …!!!

 

ಸಿಂಧನೂರು ಪೌರ ಕಾರ್ಮಿಕರ ದಿನಾಚರಣೆ ಮತ್ತು ಸನ್ಮಾನ .

ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ಅಣ್ಣ ತಮ್ಮಂದಿರು ದೂರ ನಿಲ್ಲುವಾಗ ಜನರ ಆರೋಗ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ದುಡಿಯುತ್ತಿರುವ ಪೌರ ಕಾರ್ಮಿಕರ ಪ್ರಧಾನ ಪಾತ್ರ ವಹಿಸಿದ್ದಾರೆ.ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ, ನಗರಸಭೆ ಸದಸ್ಯರಾದ ಹನುಮೇಶ ಕುರಕುಂದಿ ಮಾತನಾಡಿದರು.
ನಗರಸಭೆಯಲ್ಲಿ ಇಂದು ಪೌರಕಾರ್ಮಿಕರ ದಿನಾಚರಣೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಪಾಟೀಲ್ ನಗರಸಭೆ ಅಧ್ಯಕ್ಷರು ವಹಿಸಿದ್ದರು.
ಮುರ್ತುಜಾ ಹುಸೇನ್ ನಗರಸಭೆ ಉಪಾಧ್ಯಕ್ಷರು, ಉಮಾ ಸುರೇಶ್ ಜಾದವ್ ಸ್ಥಾಯಿ ಸಮಿತಿ ಅಧ್ಯಕ್ಷರು ನಗರಸಭೆ, ವಿರೂಪಾಕ್ಷ ಮೂರ್ತಿ ಪೌರಾಯುಕ್ತರು ಮತ್ತು ನಗರಸಭೆಯ ಸರ್ವ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು

ನಂತರ ಮಾತನಾಡಿದ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಪ್ರತಿ ದಿನ ಬೆಳಗ್ಗೆ ಬೇಗ ಎದ್ದು ಮಾಸಿದ ಬಟ್ಟೆ ತೊಟ್ಟು ಕೈಯಲ್ಲಿ ಪೊರಕೆ ಹಿಡಿದು ಪಟ್ಟಣವನ್ನು ಸ್ವಚ್ಛಗೊಳಿಸುವವರು ಪೌರ ಕಾರ್ಮಿಕರು ಎಂದು ಮಾತನಾಡಿದರು .

ಇಂದು ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರು ಸಂಭ್ರಮ, ಸಂತಸ ಹಂಚಿಕೊಂಡರು.

ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟನೆಯ ಸಂದರ್ಭದಲ್ಲಿ ಎಲ್ಲಾ ಪೌರ ಕಾರ್ಮಿಕರಿಗೆ ಮಾಲೆ, ಶಾಲು,ಹಣ್ಣಿನ ಬುಟ್ಟಿಗಳನ್ನು ನೀಡುವ ಮೂಲಕ ಸನ್ಮಾನಿಸಲಾಯಿತು

ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಕ್ರಿಕೆಟ್, ವಾಲಿಬಾಲ್, ಮ್ಯೂಸಿಕಲ್ ಚೇರ್, ಗುಂಡು ಎಸೆತ ,ನಿಂಬೆಹಣ್ಣು ಮತ್ತು ಚಮಚದ ಆಟ, ಬಕೆಟ್ ಬಾಲ್, ಓಟದ ಸ್ಪರ್ಧೆಗಳಲ್ಲಿ ವಿಜೇತರಾದ ಪೌರಕಾರ್ಮಿಕ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಪತ್ರ ನೀಡಿ ಪಾರಿತೋಷಕ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ದುರುಗಪ್ಪ ಹಸ್ಮಕಲ್, ಶಾಂತಕುಮಾರ್, ಮಾರುತಿ ಎಂ, ನಗರಸಭೆ ಸದಸ್ಯರು ನಗರಸಭೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;