ಕೊಪ್ಪಳ ಜಿಲ್ಲಾ, ಕೊಪ್ಪಳ ತಾಲೂಕಿನ ಗಿಣಿಗೇರಿ ವಲಯ ಮುನಿರಬಾದ್(RS) ಹೊಸಲಿಂಗಾಪುರ ಗ್ರಾಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ಶಿಕ್ಷಕಿಯರಿಂದ ಅದ್ದೂರಿ “ಪೋಷಣ ಮಾಸಾಚಾರಣೆ” ಕಾರ್ಯಕ್ರಮ. ಇದರ ಜೊತೆಗೆ “ಕೋವಿಡ್19 ಉಚಿತ ಲಸಿಕೆ ಜನಜಾಗ್ರತಿ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು. ಸೆಪ್ಟೆಂಬರ್ 23 ಗುರುವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಲ್ಲಿನ ಹಾಗೂ ಸುತ್ತಮುತ್ತಲಿನ ಗ್ರಾಮದ ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಶೋಭಾನಾಗರಾಜ್, ಸುಮಂಗಳ, ಮಹಾಲಕ್ಷ್ಮೀ, ಮಂಗಳ,ಭಾರತಿ,ಲಲಿತ ಮುಂತಾದವರು ಹಾಗೂ ಸಹಪಾಠಿಗಳು ಆಯೋಜಿಸಿದ್ದ ಈ ಕಾರ್ಯಕ್ರಮ ತುಂಬಾ ಅಮೋಗವಾಗಿತ್ತು. ಇದಕ್ಕೆ ಮುಖ್ಯ ಅತಿಥಿಗಳಾಗಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀಮತಿ ಅಕ್ಕಮಹಾದೇವಿ, ಸಿಡಿಪಿಒ ರೋಹಿಣಿ ಮೇಡಂ, ಶ್ರೀಮತಿ ಗಂಗಮ್ಮ BHEO ಕೊಪ್ಪಳ ಹಾಗೂ ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜಮ್ಮ, ಉಪಾಧ್ಯಕ್ಷರು ಸುರೇಶ್ ಚಲುವಾದಿ,ಅಂಗನವಾಡಿ ಮೇಲ್ವಿಚಾರಕರಾದ ಮಂಜುಳ ಕೆ ಮೇಡಂ, ಹಿರಿಯ ಹಾಗೂ ಮಾಜಿ ಅಧ್ಯಕ್ಷರಾದ ಖಾಜಾವಲಿ ಕಿನ್ನಾಳ, ಇನ್ನಿತರ ಹೊಸಳ್ಳಿಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹುಲುಗಪ್ಪ,ಮೊಹಮ್ಮದ್ ಅಜೀಮ್(ಆಮ್ ಆದ್ಮಿಪಾರ್ಟಿ ಮುಖಂಡರು), ಚಾಂದ್ ಭಾಷಾ, ಮುಂತಾದವರು ಉಪಸ್ಥಿತರಿದ್ದರು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ರೋಹಿಣಿ ಸಿಡಿಪಿಒ ರವರು ಈ ಸಭೆಯಲ್ಲಿ ನೆರೆದ್ದಿದ್ದ ಗರ್ಭಿಣಿ ಸ್ತ್ರೀಯರಿಗೆ ತಮ್ಮ ಆರೋಗ್ಯದ ಬಗ್ಗೆ ಹೇಗೆ ಜಾಗ್ರತಿ ವಹಿಸಬೇಕುಹಾಗೂ ಯಾವ ಪೋಸ್ಟಿಕ ಆಹಾರಗಳನ್ನು ಸೇವಿಸಬೇಕು ಮತ್ತು ಇನ್ನಿತರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಆಲೋಚಿಸಿ ಮಾತನಾಡಿದರು. ಕೆಲವು ಅನಕ್ಷರಸ್ಥ ಸ್ತ್ರೀಯರಿಗೆ ಶಿಶು ಅಭಿವೃದ್ಧಿ ಕುರಿತು ಅವರ ಮನಮುಟ್ಟುವ ಹಾಗೆ ತಿಳುವಳಿಕೆ ಮುಡಿಸುವದರ ಮುಖಾಂತರ ಅಲ್ಲಿ ನೆರೆದ್ದಿದ್ದ ಆಶಾ ಕಾರ್ಯಕರ್ತರಾದ ಶಮಿಮ್ ಕೆ, ಸುಹಾಸಿನಿ,ಚಿಟ್ಟಮ್ಮ, ಇನ್ನಿತರರಿಗೆ ಅವರ ಮನೆ ಮನೆಗಳಿಗೆ ತೆರಳಿ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ತಪಾಸಣೆ ಮಾಡುವುದಾಗಿ ಈ ಸಭೆಯಲ್ಲಿ ಮಾತನಾಡಿದರು. ಇದರ ಜೊತೆ ಜೊತೆಗೆ”ಕೋವಿಡ್19 ಉಚಿತ ಲಸಿಕೆ ಜನಜಾಗ್ರತಿ ಕಾರ್ಯಕ್ರಮ” ವನ್ನು ಈ ಭಾಗದ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ರು,ಹಾಗೂ ಸದಸ್ಯರುಗಳು ಮತ್ತುಆರೋಗ್ಯ ಕೇಂದ್ರ ಸಿಬ್ಬಂದಿಗಳಾದ ಶ್ರೀಮತಿ ಮಂಜುಶ CHO, ನಾಗರಾಜ್ HIO, ಆಶಾ ಕಾರ್ಯಕರ್ತರು,ಊರಿನ ಗುರು ಹಿರಿಯರು ಪಾದನೆಡಿಗೆಯ ಮೂಲಕ ಜನರಿಗೆ ಕೋವಿಡ್19 ರೋಗದ ಲಕ್ಷಣಗಳು ಹಾಗೂ ಅದಕ್ಕೆ ಪರಿಹಾರ ಯಾವ ರೀತಿ ಮಾಡಿಕೊಳ್ಳಬೇಕು ಮತ್ತು ಕೋವಿಡ್19 ಪ್ರಥಮ,ದ್ವಿತೀಯ ಉಪಯೋಗವನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು…

ವರದಿ.ಉಮೇಶ್, ಕಂಪ್ಲಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
