ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಅನುದಾನರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ವಿಶೇಷ ಪ್ಯಾಕೇಜ್ ಇದುವರೆಗೂ ತಲುಪಿಲ್ಲ. ಪಟ್ಟಣ ಸೇರಿದಂತೆ ತಾಲೂಕಿನ ಕೆಕೆಪುರ, ಅಶೋಕ ಸಿದ್ದಾಪುರ, ರಾಂಪುರ, ಕರಡಿಹಳ್ಳಿ, ಅಮಕುಂದಿ, ಕೊಂಡ್ಲಹಳ್ಳಿ ಸೇರಿದಂತೆ ಪ್ರಾರ್ಥಮಿಕ ಹಾಗೂ ಪ್ರೌಢಶಾಲೆಳಿಂದ ಒಟ್ಟು 183 ಶಿಕ್ಷಕರು ಹಾಗೂ 55 ಜನ ಬೋಧಕೇತರ ಸಿಬ್ಬಂದಿ ಪರಿಹಾರದ ವಿಶೇಷ ಪ್ಯಾಕೇಜ್ ಪಡೆಯಲು ಅರ್ಹರಾಗಿದ್ದಾರೆ. ಸ್ಥಳೀಯ ಬಿಇಓ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಿಂದ ಕೆಲ ತಿಂಗಳ ಹಿಂದೆ ತಾಲೂಕಿನಲ್ಲಿ ಅನುದಾನರಹಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಹಾಗೂ ಬೋಧಕೇತರ ಪಟ್ಟಿ ತಯಾರಿಸಿ ಅರ್ಹರಿಂದ ಬ್ಯಾಂಕ್ ಖಾತೆ ಸಂಖ್ಯೆ ಐ.ಎಸ್.ಎಫ್.ಸಿ ಕೋಡ್, ಆಧಾರ್ ಸಂಖ್ಯೆಯ ಮಾಹಿತಿಯನ್ನು ಅಪ್ಡೇಟ್ಷ ಮಾಡಿದರು ಅರ್ಹ ಶಿಕ್ಷಕರಿಗೆ ಇದುವರೆಗೂ ವಿಶೇಷ ಪ್ಯಾಕೇಜ್ ಹಣ ಮುಟ್ಟ ದಂತಾಗಿದೆ. ಈ ಸಂಬಂಧ ಶಿಕ್ಷಕರ ಮಾಹಿತಿಯನ್ನು ಘರಾವ್ ಅತಿ ತುರ್ತಾಗಿ ಪಡೆದಿದ್ದ ಸ್ಥಳೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರಿಗೆ ಪರಿಹಾರದ ಬಗ್ಗೆ ಮಾಹಿತಿ ನಮಗೆ ಮಾಹಿತಿ ವಿಚಾರಿಸಬೇಕು ಎನ್ನುತ್ತಾರೆ ಹಣದ ಅವಶ್ಯಕತೆ ಇದ್ದು ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ನಮ್ಮ ಸಮಸ್ಯೆಯಾರು ಹತ್ತಿರ ಹೇಳಿಕೊಳ್ಳಬೇಕು ಅರ್ಥವಾಗುತ್ತಿಲ್ಲ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
