;

ರಾಂಪುರ: ಕೋವಿಡ್ ಕೇಂದ್ರಕ್ಕೆ 2 ಆಕ್ಸಿಜನ್ ಸಿಲಿಂಡರ್ ನೀಡಿದ: ಎನ್.ವೈ ಚೇತನ್.!!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಮಹಾಮಾರಿ ತಾಂಡವಾಡುತ್ತಿರುವುದು ನಮ್ಮೆಲ್ಲರ ದುರದೃಷ್ಟಕರ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬಂದ ಶ್ರೀ ಎನ್.ವೈ ಚೇತನ್ ರವರು ಈಗ ಸುಮಾರು ಕೆಲವು ದಿನಗಳಿಂದ ರೋಗಿಗಳಿಗೆ, ಕೋವಿಡ್ ವಾರಿಯರ್ಸ್ ಗೆ ಊಟದ ವ್ಯವಸ್ಥೆ ಮಾಡುವ ಜೊತೆಗೆ ರಾಂಪುರ ಕೋವಿಡ್ ಕೇಂದ್ರಕ್ಕೆ ಅತ್ಯವಶ್ಯಕವಿರುವ ಎರಡು ಆಮ್ಲಜನಕ ಆಕ್ಸಿಜನ್ ಸಿಲಿಂಡರ್ ಗಳನ್ನು, ಮೂರು ಮಂಚದ ಬೆಡ್ ಗಳು ಸಂಬಂಧ ಪಟ್ಟ ವೈದ್ಯರಿಗೆ ಹಸ್ತಾಂತರಿಸಿದರು. ಜೊತೆಗೆ ಅವರ ತಂದೆಯವರಾದ ಶ್ರಿ ಎನ್.ವೈ.ಪಿ.ಸ್ವಾಮಿ ರವರು ಫೋನ್ ಮೂಲಕ ವೈದ್ಯರ ಜೊತೆ ಮಾತನಾಡಿ ಸರ್ಕಾರ ಕ್ಕೆ ಕೋವಿಡ್ ಕೇಂದ್ರದ ಅವಶ್ಯಕತೆ ಬಿದ್ದಲ್ಲಿ ಧಾರಾಳವಾಗಿ ನಮಗೆ ಸಂಬಂಧ ಪಟ್ಟ ಸಮುದಾಯ ಭವನ (ರಾಂಪುರ) ಮತ್ತು ಎರಡು ದೊಡ್ಡ ಶೆಡ್ ಗಳಿವೆ ಅವುಗಳನ್ನು ಬಳಸಿಕೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ವರಪ್ಪ, ಸದಸ್ಯರಾದ ಸಿದ್ದನಗೌಡ, ರಹಮಾತುಲ್ಲಾ, ಮಹಮ್ಮದ್, ಶಿವಪ್ಪ, ತಿಪ್ಪೇಸ್ವಾಮಿ, ವೈದ್ಯರಾದ ಜಾಫರ್,ಮತ್ತು ಪ್ರವೀನ್, ಲೋಹಿತ್, ಶಫಿ ಮತ್ತಿತರರು ಹಾಜರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;