;

ಕೋವಿಡ್ ಕೇರ್ ಸೆಂಟರ್ ನಲ್ಲಿ ಧಾಖಲಾಗಿದ್ದ ಇಬ್ಬರು ಯುವತಿಯರು ಪರಾರಿ…!!!

ದಾವಣಗೆರೆ: ಕೋವಿಡ್‌ ಕೇರ್ ಸೆಂಟರ್‌ ನಲ್ಲಿ ದಾಖಲಾಗಿದ್ದ ಕೊರೋನಾ ಸೋಂಕಿತ ಇಬ್ಬರು ಯುವತಿಯರು ಪರಾರಿಯಾಗಿದ್ದಾರೆ.

ಕೋವಿಡ್ ಸೋಂಕು ಪತ್ತೆಯಾಗಿ ದಾವಣಗೆರೆ ಜೆ.ಎಚ್‌. ಪಟೇಲ್‌ ಬಡಾವಣೆಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇವರನ್ನು ಇರಿಸಲಾಗಿತ್ತು.

ರಾತ್ರಿ ವಾಚ್‌ಮನ್‌ ಊಟಕ್ಕೆ ಹೋಗಿದ್ದ ಸಮಯದಲ್ಲಿ ಪರಾರಿಯಾಗಿದ್ದಾರೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇವರು ರಾಜ್ಯ ಮಹಿಳಾ ನಿಲಯ ನಿವಾಸಿಗಳಾಗಿದ್ದ 21 ಮತ್ತು 19 ವರ್ಷದ ಯುವತಿಯರು. ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಅಂತರ್‌ಧರ್ಮೀಯ ಯುವಕನನ್ನು ಒಬ್ಬರು ಮದುವೆಯಾಗಿದ್ದರು. ಆದರೆ, ಆಗ 18 ವರ್ಷ ತುಂಬದೇ ಇದ್ದ ಕಾರಣ ಪ್ರಕರಣ ದಾಖಲಿಸಿ ಯುವಕನನ್ನು ಜೈಲಿಗೆ ಕಳುಹಿಸಲಾಗಿತ್ತು. ಯುವತಿ ಹೆತ್ತವರ ಮನೆಗೆ ಹೋಗಲು ಒಪ್ಪಿರಲಿಲ್ಲ.

ಅದೇ ರೀತಿ ಮತ್ತೊಬ್ಬರು 2020ರಲ್ಲಿ ತನ್ನ ಸಂಬಂಧಿ ಯುವಕನನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ದರು. ಅವರಿಗೂ ಆಗ 18 ತುಂಬಿರಲಿಲ್ಲ. ಮದುವೆಯನ್ನು ತಡೆಯಲಾಗಿತ್ತು. ಆಕೆಯೂ ತಾಯಿ ಜತೆ ಹೋಗಲು ಒಪ್ಪಿರಲಿಲ್ಲ. ಹಾಗಾಗಿ ಇಬ್ಬರೂ ಸ್ಟೇಹೋಂನಲ್ಲಿದ್ದರು.

ಯುವತಿಯರು ಪ್ರೇಮಿಸಿದ್ದ ಯುವಕರ ಜತೆಗೆ ಪರಾರಿಯಾಗಿರಬೇಕು ಎಂದು ಶಂಕಿಸಲಾಗಿದೆ.

ವರದಿ. ರೇಖಾ, ಆರ್, ದಾವಣಗೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;