;

ಮೊಳಕಾಲ್ಮುರು: ನೇಕಾರ ಮಂಚಿ ಮಾರುತಿಯವರ ಉಚಿತ ಊಟ ನೀಡುವ ಕಾರ್ಯಕ್ರಮ.!!

ಚಿತ್ರದುರ್ಗ: ಮೊಳಕಾಲ್ಮುರು: * ನೇಕಾರ ಮಂಚಿ ಮಾರುತಿಯವರ ಉಚಿತ ಊಟ ನೀಡುವ ಕಾರ್ಯಕ್ರಮವನ್ನು ಶ್ಲಾಘಿಸಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಭಿನವ್.*
ಮೊಳಕಾಲ್ಮುರು ರೇಷ್ಮೆ ಸೀರೆ ನೇಕಾರ ಮಂಚಿ ಮಾರುತಿ ನೇತೃತ್ವದ ತಂಡ ಪಟ್ಟಣದಲ್ಲಿ ದಾಖಲಾಗಿರುವ ಕೊರೋನಾ ಸೋಂಕಿತರಿಗೆ ನಿತ್ಯವೂ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ತಿಲಕ್ ನಗರದ ಗೆಳೆಯರ ಬಳಗದ 20 ಕ್ಕೂ ಹೆಚ್ಚಿನ ಯುವಕರೊಟ್ಟಿಗೆ ಆಹಾರ ತಯಾರಿಸಿ ಕೊರೋನಾ ಸೋಂಕಿತರಿಗೆ ವಿತರಿಸುತ್ತಿದ್ದಾರೆ. ಜತೆಗೆ ಹಣ್ಣು, ಮೊಟ್ಟೆ ಸೇರಿ ಪೌಷ್ಟಿಕ ಯುಕ್ತ ಆಹಾರ ಪಟ್ಟಣಗಳನ್ನು ನೀಡುತ್ತಿದ್ದಾರೆ. ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿಯೂ ಇದೇ ಯುವಕರ ತಂಡ ಪಟ್ಟಣದಲ್ಲಿ ಸಾವಿರಾರು ಜನರಿಗೆ ಆಹಾರ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;