ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಪೋಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದ ಜತೆಗೆ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಸೇರಿ ಹಸಿದವರಿಗೆ ಅನ್ನ ನೀಡುವ ಮೂಲಕ ಬಡವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಮುಖ್ಯಮಂತ್ರಿಗಳ ಪದಕಕ್ಕೆ ಭಾಜರಾಗಿರುವ ತಾಲೂಕಿನ ರಾಂಪುರ ಪಿಎಸ್ಐ ಗುಡ್ಡಪ್ಪ ಹಾಗು ಸಿಪಿಐ ಉಮೇಶ ಕುಮಾರ್, ಪಿಎಸ್ಐ ಎಂ.ಕೆ.ಬಸವರಾಜ ಕಳೆದೊಂದು ವಾರದಿಂದ ಜಾರಿಯಾಗಿರುವ ಕೊರೋನಾ ಸೆಮಿ ಲಾಕ್ ಡೌನ್ ನಲ್ಲಿ ಬಡವರಿಗೆ ಸಂಕಷ್ಟಕ್ಕೆ ಮಿಡಿಯುವ ಜತೆಗೆ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಆಕ್ಸಿಜನ್ ಒದಗಿಸಿ ಪೋಲೀಸ್ ಕರ್ತವ್ಯದ ಜತೆಗೆ ಸಾರ್ವಜನಿಕ ಸೇವೆಗೂ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರ ಸೇರಿ ಇತರರಿಂದ ಸಂಗ್ರಹಿಸಿ ರಾಂಪುರ ಆಸ್ಪತ್ರೆ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 15ಕ್ಕೂ ಹೆಚ್ಚಿನ ಆಕ್ಸಿಜನ್ ಜಂಬೋ ಸಿಲೆಂಡರುಗಳನ್ನು ಪೂರೈಕೆ ಮಾಡಿ ಸರ್ಕಾರದ ಜತೆಗೆ ಕೊರೋನಾ ಸೋಂಕಿತರಿಗೆ ಅಳಿಲು ಸೇವೆ ಮಾಡಿದ್ದಾರೆ. ಜತೆಗೆ ಹಳ್ಳಿಗಳಲ್ಲಿ ಲಾಕ್ ಡೌನ್ ಬಿಗಿಗೊಳಿಸಿ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
