ಚಿತ್ರದುರ್ಗ: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಭೇಟಿ ನೀಡಿ ವೈದ್ಯದಿಕಾರಿಗಳ ಜೂತೆ ಕೋರೋನಾ ರೋಗಿಗಳ ವಾರ್ಡ್, ಆಕ್ಸಿಜನ್, ಬೆಡ್, ಔಷಧಿಗಳ ವಿಚಾರವಾಗಿ ಚರ್ಚಿಸಿದರು, ಹಾಗೆಯೆ ಬಿ.ಜಿ.ಕೆರೆ, ಹಿರೇಕೆರೆಹಳ್ಳಿ, ನಾಗ ಸಮುದ್ರ, ಕೂಂಡ್ಲಹಳ್ಳಿ, ತಳಕು, ದೂಡ್ಡ ಉಳ್ಳರ್ತಿ,ಓಬಳಾಪುರ, ಮಹದೇವಪುರದಲ್ಲಿ ಕೋವಿಡ್ ಆಸ್ಪತ್ರೆಯ ಸೌಕರ್ಯ ಗಳನ್ನು ಒದಗಿಸುವಂತೆ ಆಗ್ರಹಿಸಿದರು, ಮೊಳಕಾಲ್ಮೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರು ಇಲ್ಲದ ಕಾರಣ ವೆಂಟಿಲೇಟರ್ ಚಿಕಿತ್ಸೆ ಲಭ್ಯವಿಲ್ಲ, ಜಿಲ್ಲೆಗೆ ಪ್ರಕೃತಿ ವಿಕೋಪ ಅನುದಾನದಲ್ಲಿ 20 ಕೋಟಿ, ಮತ್ತು
ಗಣಿ ಸಂತ್ರಸ್ತರ ಅನುದಾನದಲ್ಲಿ 25 ಕೋಟಿ ಲಭ್ಯವಿದ್ದು ಇದನ್ನು ಕೋವಿಡ್ ಸೌಲಭ್ಯಕ್ಕೆ ಬಳಸಿಕೊಳ್ಳುಬೇಕು ಎಂದು ಮನವಿ ಮಾಡಿದರು, ರಾಂಪುರ ಕೋವಿಡ್ ಕೇಂದ್ರದಲ್ಲಿ ತಕ್ಷಣ ಆಮ್ಲಜನಕ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ನಬೀಲ್, ಯುವ ಕಾಂಗ್ರೆಸ್ ಮುಖಂಡರಾದ ಶರತ್, ತುಮಕೂರ್ಲಹಳ್ಳಿ ಶ್ರೀನಿವಾಸ್, ಮುಂತಾದ ಮುಖಂಡರು ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
