ವರದಿ. ಶಶಿಕುಮಾರ್ ಚಳ್ಳಕೆರೆ

ಚಳ್ಳಕೆರೆ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಅಗ್ರಹ.
ಮರಳು ಗಣಿಗಾರಿಕೆ ನಿಲ್ಲಿಸಲು ಆಗ್ರಹಿಸಿ ಕಳೆದ ಮಾರ್ಚ್ ತಿಂಗಳಿನಲ್ಲಿ ವೇದಾವತಿ ನದಿ ಪಾತ್ರದಲ್ಲಿ ರೈತರೊಂದಿಗೆ ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆಗೆ ಮಣಿದು ವೇದಾವತಿ ನದಿಯಲ್ಲಿ ಮರಳು ತೆಗೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಮರಳು ಗಣಿಗಾರಿಕೆಗೆ ಅನುಮತಿ ನೀಡಿರುವುದು ಈ ಭಾಗದ ರೈತರಿಗೆ ಅನ್ಯಾಯವಾಗುತ್ತದೆ.
ರೈತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ, ಮರಳು ಗಣಿಗಾರಿಕೆ ನಿಲ್ಲಿಸುವವರೆಗೂ ಡಿ.ಸಿ ಕಚೇರಿ ಮುಂದೆ, ವೇದಾವತಿ ನದಿ ಪಾತ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು. ಈಗಾಗಲೆ ಮರಳು ಗಣಿಗಾರಿಕೆಯಿಂದ ನದಿಯುದ್ದಕ್ಕೂ ದೊಡ್ಡ-ದೊಡ್ಡ ಗುಂಡಿಗಳಾಗಿವೆ. ಈಗ ವಿ.ವಿ ಸಾಗರದಿಂದ ಬಿಡಲಾಗುತ್ತಿರುವ ನೀರು ಸರಾಗವಾಗಿ ಹರಿಯದೆ, ನೀರೆಲ್ಲಾ ಈ ಗುಂಡಿಗಳಲ್ಲಿ ಉಳಿಯುತ್ತಿದೆ. ನೀರು ಮುಂದೆ ಹರಿದು ಹೋಗದೆ ಇರುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ.
ಈಗಾಗಲೆ ವೇದಾವತಿ ನದಿಯಲ್ಲಿ ಜನರ ಅನುಕೂಲಕ್ಕಾಗಿ ಸುಮಾರು ಐದು ಕಡೆ ಬ್ಯಾರೇಜ್ ನಿರ್ಮಿಸಲಾಗಿದೆ. ಇನ್ನೂ ಮೂರು ಕಡೆ ಬ್ಯಾರೇಜ್ ನಿರ್ಮಾಣ ಕಾರ್ಯವಾಗಬೇಕಿದೆ.
ಪರಿಸ್ಥಿತಿ ಹೀಗಿರುವಾಗ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸುವುದು ಸರಿಯಲ್ಲ. ಹೀಗಿದ್ದೂ ಯಾರಾದರೂ ಮರಳು ತೆಗೆಯಲು ಮುಂದಾದರೆ ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ಮಾಡಲಾಗುವುದು. ವೇದವತಿ ನದಿ ಪಾತ್ರದಲ್ಲೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
