;

ಮೊಳಕಾಲ್ಮೂರು: ಜಗತ್ತು ಜೀವಂತವಾಗಿರುವವರೆಗೂ ಅಂಬೇಡ್ಕರ್ ವಿಚಾರಧಾರೆಗಳು ಶಾಶ್ವತ: ಪ್ರೊ. ಸಿ.ಕೆ ಮಹೇಶ್..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್‌ರವರ 130ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ರವರ 114ನೇ ಜಯಂತಿ ಕಾಠ್ಯಕ್ರಮದಲ್ಲಿ ಅವರು ಮಾತನಾಡಿದರು. ಜ್ಞಾನದ ಮೂಲಕ ಜಗತ್ತಿನಲ್ಲಿಯೇ ಮೇರು ಶಿಖರವನ್ನೇರಿದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಸಾಧನೆ ಸ್ಮರಣೀಯ ಎಂದು ಕಾಲೇಜು ಶಿಕ್ಷಣ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ| ಸಿ.ಕೆ. ಮಹೇಶ್ ಹೇಳಿದರು. ಡಾ| ಬಿ.ಆರ್. ಅಂಬೇಡ್ಕರ್ ಪರಿವರ್ತನಾ ಚಳವಳಿಗಾರರಾಗಿದ್ದಾರೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಜಗತ್ತಿನಾದ್ಯಂತ ಪಸರಿಸಿವೆ. ಸಮಾಜದಲ್ಲಿ ಅತ್ಯಂತ ಕಡು ಬಡತನದ ಶೋಷಿತ ಸಮಾಜದಲ್ಲಿ ಜನಿಸಿದ ಇವರು ಜಾತೀಯತೆಯ ನಿರ್ಮೂಲನೆಗಾಗಿ ಹೋರಾಡಿದ ಮಹಾಚೇತನರಾಗಿದ್ದಾರೆ ಎಂದರು. ಮೀಸಲಾತಿ ನೀಡದಿದ್ದಲ್ಲಿ ಶೋಷಿತ ಸಮುದಾಯಗಳ ಬದುಕಿಗೆ ಮಾರಕವಾಗಲಿವೆ. ಭೂಕಾಯ್ದೆಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಬಾರದು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡಲ್ಲಿ ಸರ್ವರೂ ಬದುಕಲು ಸಾಧ್ಯ. ದೇಶದಲ್ಲಿ ನೀಡಿರುವ ಮತದಾನದ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ದರಾಗಬೇಕಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಿದ್ದಯ್ಯನ ಕೋಟೆ ಮಠದ ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ತಾಸಿಲ್ದಾರ್ ಟಿ ಸುರೇಶ್ ಕುಮಾರ್ ಅವರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬೋರಮ್ಮು, ಪಪಂ.ಅಧ್ಯಕ್ಷ ಪಿ.ಲಕ್ಷ್ಮಣ, ಉಪಾಧ್ಯಕ್ಷೆ ಶುಭ, ತಾ.ಪಂ. ಇ.ಓ. ಪ್ರಕಾಶ್, ವೃತ್ತ ನಿರೀಕ್ಷಕ ಜಿ.ಬಿ.ಉಮೇಶ, ಪಿ.ಎಸ್.ಐ ಎಂ.ಕೆ.ಬಸವರಾಜ, ಬಿಜೆಪಿ ಮಂಡಲ ಅಧ್ಯಕ್ಷ ಡಾ ಪಿ ಎಂ ಮಂಜುನಾಥ್, ಪ.ಪಂ.ಮುಖ್ಯಾಧಿಕಾರಿ ಕಾಂತರಾಜ್, ತಾಲ್ಲೂಕು ಸಮಾಜಕಲ್ಯಾಣಧಿಕಾರಿ ಪ್ರೇಮನಾಥ, ಸಿ.ಡಿ.ಪಿಓ, ಸವಿತ, ಟಿ.ಎಚ್.ಓ, ಸುಧಾ, ಬಿ.ಇ.ಓ ಯುವರಾಜ ನಾಯಕ, ಸಹಾಯಕ ಕೃಷಿ ನಿರ್ದೇಶಕ ಉಮೇಶ, ಸ್ಥಾಯಿ ಸಮಿತಿ ಅಧ್ಯಕ್ಷ ರೇಷ್ಮೆ ವೀರೇಶ್, ದ.ಸಂ.ಸ. ಸಂಚಾಲಕರಾದ ಕೊಂಡಾಪುರ ಪರಮೇಶ್ವರಪ್ಪ, ನಾಗಭೂಷಣ, ಮುಖಂಡರಾದ ಮೊಗಲಹಳ್ಳಿ ಜಯಣ್ಣ, ಡಿ.ಹೆಚ್, ನಾಗರಾಜಕಟ್ಟೆ, ಜಿ.ಪ್ರಕಾಶ, ಯದ್ದೇನಹಳ್ಳಿ ನಾಗರಾಜ, ನೇರಹಳ್ಳಿ ಹನುಮಂತಪ್ಪ, ಪಟ್ಟಣದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;