;

ಕರೋನ ವ್ಯಾಕ್ಸೀನ್ ಚುಚ್ಚುಮದ್ದು ಲಸಿಕೆ ಮುಂಜಾಗ್ರತಾ ಕಾರ್ಯಕ್ರಮ…!!!

 

 

ದಿನಾಂಕ.5.4.2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ

ಕರೋನ ವ್ಯಾಕ್ಸೀನ್ ಚುಚ್ಚುಮದ್ದು ಲಸಿಕೆ ಮುಂಜಾಗ್ರತಾ ಕಾರ್ಯಕ್ರಮ
ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯರಿಂದ ಕೊರೋನೋ ಎರಡನೇ ಅಲೆ ವ್ಯಾಪಕವಾಗಿ ರಾಜ್ಯದಲ್ಲಿ ಹರಡುವುದರಿಂದ ಕಾನ ಹೊಸಹಳ್ಳಿ ಗ್ರಾಮದಲ್ಲಿ ನಾಡಕಚೇರಿಗೆ ವಿವಿಧ ಕೆಲಸಗಳ ನಿಮಿತ್ಯ ಬರುವ ಸಾರ್ವಜನಿಕರಿಗೆ. ನಾಡಕಚೇರಿಯ ಕಂಪ್ಯೂಟರ್ ಆಪರೇಟರ್ ಗಳಿಗೆ. ವ್ಯಾಕ್ಸಿನ್ ಲಸಿಕೆಯ ಬಗ್ಗೆ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದರು. ನಂತರ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ವಸತಿಗೃಹಗಳಿಗೆ ತೆರಳಿ ಪೊಲೀಸ್ ಇಲಾಖೆ ಸಿಬ್ಬಂದಿ ಕುಟುಂಬದವರಿಗೆ ವ್ಯಾಕ್ಸಿನ್ ಲಸಿಕೆ ಬಗ್ಗೆ ಮಾಹಿತಿ ನೀಡಿದ್ದರು. ಆಟೋ ಚಾಲಕರಿಗೆ ಬಸ್ ನಿಲ್ದಾಣದಲ್ಲಿ ಬೋರುವ ಸಾರ್ವಜನಿಕರಿಗೆ ಕೊರೋಣವೈರಸ್ ವೈರಸ್ ಎರಡನೆಯ ವ್ಯಾಪಕವಾಗಿ ಹರಡುವುದರಿಂದ ಪ್ರತಿಯೊಬ್ಬ ಪ್ರಯಾಣಿಕರು ಮಾಸ್ಕನ್ನು ಧರಿಸಬೇಕು ಸ್ಯಾನಿಟೈಜರ್ ಅನ್ನು ಬಳಸಿ 45 ವರ್ಷದ ಮೇಲ್ಪಟ್ಟ ವರೆಲ್ಲರೂ ವ್ಯಾಕ್ಸಿನ್ ಲಸಿಕೆ ಚುಚ್ಚುಮದ್ದನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ ಎಂದು ಮಾಹಿತಿ ನೀಡಿದರು. ಕಾನಹೊಸಹಳ್ಳಿ ಯ ಆಶಾ ಕಾರ್ಯಕರ್ತರಾದ ಮಂಗಳಮ್ಮ ಶಶಿಕಲಾ ಮಂಜುಳಾ ಚನ್ನಮ್ಮ ಅನ್ನಪೂರ್ಣಮ್ಮ ಕೆ ಕವಿತಾಇವರುಗಳು ಗ್ರಾಮದಲ್ಲಿ ಮನೆಮನೆಗೆ ತೆರಳಿ ಪ್ರತಿಯೊಬ್ಬರೂ ಸಾರ್ವಜನಿಕರ ಮನವೊಲಿಸಿ ಸುಮಾರು 500ಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನ್ ಚುಚ್ಚುಮದ್ದನ್ನು ಹಾಕಿಸಿ ರುತ್ತಾರೆ. ಈ ಸಂದರ್ಭದಲ್ಲಿ ಕಾನಹೊಸಹಳ್ಳಿ ಯ ಆಶಾ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

 

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;