ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ದೇವಸಮುದ್ರ ಹೋಬಳಿ ಕೋನಾಪುರ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಗಡದಲ್ಲಿ 20ಕ್ಕೂ ಹೆಚ್ಚಿನ ಮೇವಿನ ಬಣವೆಗಳು ಅಗ್ನಿಗೆ ಆಹುತಿಯಾಗಿದ್ದು ಅಪಾರ ನಷ್ಟ ಸಂಬವಿಸಿದೆ. ಮೇಗಳ ಕಣಿವೆ ರಸ್ತೆಯಲ್ಲಿರುವ ಹುಲ್ಲು ಹಟ್ಟಿಗಳಲ್ಲಿ ದನಕರುಗಳಿಗೆ ಸಂಗ್ರಹಿಸಿಡಲಾಗಿದ್ದ ಮೇವಿನ ಬಣವೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಗ್ರಾಮದ ಲಿಂಗರಾಜು, ಮಾರಣ್ಣ, ಮಾರಯ್ಯ, ರಾಮಯ್ಯ, ಆಂಜನೇಯ, ಸಣ್ಣಮಾರಣ್ಣ ಕೆ.ಮಾರಣ್ಣ ದನಂಜಯ, ಪೂಜಾರಿ ಮಾರಣ್ಣ, ಹೊಲದಾಗಳ ಸಣ್ಣ ನಿಂಗಪ್ಪ, ಚಿನ್ನಮನಹಟ್ಟಿ ಮಾರಣ್ಣ ಎಂಬುವರಿಗೆ ಸೇರಿದ 50ಕ್ಕೂಷಹೆಚ್ಚಿನ ಟ್ರಾಕ್ಟರ್ ಲೋಡು ಮೇವು ಸುಟ್ಟಿದೆ ಎನ್ನಲಾಗಿದೆ. ಅಗ್ನಿ ಶಾಮಕದಳದ ಅಧಿಕಾರಿಗಳು ಬೆಂಕಿ ನಂದಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
