
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯತಿಯಲ್ಲಿ ಇಂದು ಸೋಮವಾರ ಏಪ್ರಿಲ್ 2021 ಇಂದು ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಸ್ವಾಮಿ, ಹಾಗೂ ಇಂಜಿನಿಯರ್ ಅವರ ನೇತೃತ್ವದಲ್ಲಿ BFT ಪ್ರಸನ್ನಕುಮಾರ್ ಕಾಮಗಾರಿ ಪರಿಶೀಲನೆ ಮಾಡಿದರು. ಭೇಟಿ ವೇಳೆ ಫಲಾನುಭವಿಗಳಿಗೆ ಉದ್ದೇಶಿಸಿ ಮಾತನಾಡಿದ ಅವರು ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಕೂಲಿಕಾರರಿಗೆ ಇದೊಂದು ಒಳ್ಳೆಯ ಯೋಜನೆಯಾಗಿದೆ.
ವೈಯಕ್ತಿಕ ಕಾಮಗಾರಿ ಹಾಗೂ ಸಾಮೂಹಿಕ ಕಾಮಗಾರಿಗಳಲ್ಲಿ ತೊಡಗಿಸಿಕೊಂಡು ಯೋಜನೆಯ ಲಾಭವನ್ನು ಪಡೆಯಬೇಕು ಹಾಗೂ ಕೋವಿಡ್ ಎರಡನೇ ಹಲೆ ಹೆಚ್ಚಾಗಿರುವುದರಿಂದ ಸಂದರ್ಭದಲ್ಲಿ ನಾವೆಲ್ಲರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ನಿರ್ದೇಶನಗಳನ್ನು ಪಾಲನೆ ಮಾಡಿ ನಮ್ಮ ಹಾಗೂ ಕುಟುಂಬದ ಮತ್ತು ಸಾರ್ವಜನಿಕರ ಜೀವವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಹೂಡೇಂ ಗ್ರಾ.ಪಂ ಹಾಗೂ ಹೊಸೂರು ಗ್ರಾಮದಲ್ಲಿ ಒಟ್ಟು ತಾಲೂಕಿನಲ್ಲಿ ಒಟ್ಟು1432 ಜಾಬ್ ಕಾರ್ಡಗಳನ್ನು ನೀಡಲಾಗಿದ್ದು ಇದರಲ್ಲಿ ಹುಡೇಂ ಹಾಗೂ ಹೊಸೂರು ಗ್ರಾಮದಲ್ಲಿರುವ ಒಟ್ಟು 500 ಕೂಲಿಗಾರು ಜಾಬ್ ಕಾರ್ಡ್ ಫ್ರೀಡ್ಸ್ ಆಗಿದ್ದು ಇದರಲ್ಲಿ 400 ಕ್ಕೂ ಹೆಚ್ಚು ಕೂಲಿಕಾರರು ಕೆಲಸವನ್ನು ನಿರ್ವಹಿಸುತ್ತಿದ್ದಾರು. ಕೋವಿಡ್ 2ನೇ ಅಲೆ ಹೆಚ್ಚಾಗಿರುವುದರಿಂದ ಜನಗಳು ಅಲಮಾರಿ ಹೋಗಬಾರದೆಂದು ಹಳ್ಳಿಯಲ್ಲಿ ಕೆಲಸ ಮಾಡಲಿ ಎಂದು ಸರ್ಕಾರ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡುತ್ತದೆ 275 ನೀಡಲಾಗುತ್ತಿದ್ದು ಈಗ ಕೋವಿಡ್ 2ನೇ ಹೆಚ್ಚಾಗಿರುವುದರಿಂದ ಹಾಗೂ ಬೇಸಿಗೆ ಇರುವ ಕಾರಣದಿಂದ ಕೂಲಿಯನ್ನು ಹೆಚ್ಚಳ 30 ಪರ್ಸೆಂಟ್ ಹೆಚ್ಚಿಗೆ ಮೊತ್ತ 295 ಹೆಚ್ಚಳ ಮಾಡಲಾಗಿದೆ ಎಂದು ಕೂಲಿಕಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಬಿ ರಾಮಚಂದ್ರಪ್ಪ ಸದಸ್ಯರು ಹುಡೇಂ, ಸುಂದರಮ್ಮ ಮಲ್ಲಿಕಾರ್ಜುನ್ ಸದಸ್ಯರು, ನಾಗಮ್ಮ ಗದ್ದಿಗ ಸ್ವಾಮಿ ಸದಸ್ಯರು, ಶಶಿಕಲಾ ಜಯಣ್ಣ ಸದಸ್ಯರು, ಕುರಿ ಪಾಲಯ್ಯ ಸದಸ್ಯರು, ಎಲ್ಲಪ್ಪ ಸದಸ್ಯರು, ಹಾಗೂ ಮೇಟಿ ನಾಗರಾಜ್, ಗೋವಿಂದಪ್ಪ, ಸಿದ್ದೇಶ, ಹಾಗೂ ಮಂಜುನಾಥ್ ಹೆಚ್ ಹೂಡೇಂ ಎಚ್ಚರಿಕೆ ಪತ್ರಕತ್ರರು, ಗ್ರಾ.ಪಂ ಸಿಬ್ಬಂದಿ ವರ್ಗದವರು, ಊರಿನ ಎಲ್ಲಾ ಕೂಲಿಕಾರ್ಮಿಕರು ಉಪಸ್ಥಿತರು.
*ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
