ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ದಿನಾಂಕ 04:04. 2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಎಂಬಿ ಅಯ್ಯನಹಳ್ಳಿ
ಕ್ಲಸ್ಟರ್ ಮಟ್ಟದ ಬೀಳ್ಕೊಡುಗೆ ಸಮಾರಂಭ.:-@- ತಾಲೂಕಿನ ಎಂಬಿ ಅಯ್ಯನಹಳ್ಳಿ ಸಹಿಪ್ರಾ ಶಾಲೆ ಯಲ್ಲಿ ಶಿಕ್ಷಕರಿಗೆ ಕ್ಲಸ್ಟರ್ ಮಟ್ಟದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಎಂಬಿ ಅಯ್ಯನಹಳ್ಳಿ ಕ್ಲಸ್ಟರ್ ನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಯಾಗಿರುವ ಬಡ್ತಿ ಪಡೆದು ಬೇರೆ ಶಾಲೆಗೆ ಹೋಗಿರುವ ಹಾಗೂ ದಿನಾಂಕ 31 .3.2021 ರಂದು 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಶಿಕ್ಷಕರಿಗೂ ಕೂಡ ಬೀಳ್ಕೊಡಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿ ಉಮೇಶ್ ಶಿಕ್ಷಕರು. ಮಂಜುನಾಥ ರಾಜಣ್ಣ ರಾಮಣ್ಣ ವಿದ್ಯಾಧರ ಸೇರಿದಂತೆ ಹದಿನಾಲ್ಕು ಜನ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು ಒಟ್ಟು 15 ಜನ ಶಿಕ್ಷಕರಿಗೆ ಸನ್ಮಾನ ಮಾಡಬೇಕಿತ್ತು ಕಾರಣಾಂತರದಿಂದ ನಾಲ್ಕು ಜನ ಶಿಕ್ಷಕರು ಬಾರದಿದ್ದ ಕಾರಣ ಹನ್ನೊಂದು ಜನ ಶಿಕ್ಷಕರಿಗೆ ಮಾತ್ರ ಸನ್ಮಾನ ಮಾಡಲಾಯಿತು. ಈ ಸಮಾರಂಭದಲ್ಲಿ ಕೆ ನಾಗರಾಜ್ ಶಿಕ್ಷಕರು ಬಸವರಾಜ ಶಿಕ್ಷಕರು ಮಲ್ಲೇಶ್ ನಾಯಕ್ ಸಿಆರ್ಪಿ ಬಸವರಾಜ ಮುಖ್ಯಗುರುಗಳು ಗೀತಾ ಕಲಾವತಿ ಸಾವಿತ್ರಿ ಶಿಕ್ಷಕಿಯರು ದುರ್ಗಪ್ಪ ದೈಹಿಕ ಶಿಕ್ಷಕರು ಇವರುಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಪ್ರವೀಣ್ ಉತ್ತಂಗಿ ಶಿಕ್ಷಕರು ಈ ಸಮಾರಂಭದ ಜವಾಬ್ದಾರಿಯನ್ನು ನಿರ್ವಹಿಸಿದರು ಈ ಸಂದರ್ಭದಲ್ಲಿ ಕ್ಲಾಸ್ಟರ್ ಶಾಲೆಯ ಮುಖ್ಯಗುರುಗಳು ಸ. ಹಿ. ಪ್ರಾ.ಶಾಲೆಯ ಮುಖ್ಯಗುರುಗಳು ಸಹಶಿಕ್ಷಕರು ಸಿಬ್ಬಂದಿವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
