;

ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ವಿವಿಧ(ITI)ವೃತ್ತಗಳಿಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಕರೆಯಲಾಗಿದೆ…!!!

ರಾಜ್ಯದಲ್ಲಿ SSLC ಹಾಗೂ PUC ಫಲಿತಾಂಶ ಹೊರಬೀಳುತ್ತೀದ್ದಂತೆ, ವೃತ್ತಿಪರ ಕೋರ್ಸ್ ಗೆ ಮಣೆಹಾಕುವ, ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ “ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಿಂದ ಅರ್ಜಿಗಳನ್ನು ಕರೆಯಲಾಗಿದೆ.ಎನ್.ಸಿ.ವಿ.ಟಿ. ಸಂಯೋಜನೆ ಪಡೆದ ವೃತ್ತಿ ಘಟಕಗಳಾದ ಒಂದು ವರ್ಷದ ವೆಲ್ಡರ್ ಹಾಗೂ ಕಾರ್ಪೇಂಟರ್ ವೃತ್ತಿಗಳಿಗೆ ಪ್ರವೇಶ ಪಡೆಯಲು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಒಂದು ವರ್ಷದ ಕೋಪಾ, ಮೆಕ್ಯಾನಿಕ್ ಡಿಸೇಲ್ ವೃತ್ತಿಗಳಿಗೆ ಹಾಗೂ ಎರಡು ವರ್ಷದ ಫಿಟ್ಟರ್, ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಮಶಿನಿಸ್ಟ್, ಎಂ.ಎಂ.ವಿ., ಎಂ.ಆರ್.ಎ/ಸಿ., ಟರ್ನರ್, ಐ.ಸಿ.ಐ.ಎಸ್.ಎಂ., ಆರ್ಕಿಟೆಕ್ಚರಲ್ ಡ್ಯ್ರಾಫ್ಟ್ಮ್ಯಾನ್ ವೃತ್ತಿಗಳಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು.

ಇಚ್ಛೆಯುಳ್ಳ ಅಭ್ಯರ್ಥಿಗಳು http://cite.karnataka.gov.in ವೆಬ್ಸೈಟ್ ಆನ್ಲೈನ್ ಮೂಲಕ 2023ರ ಜೂನ್ 7 ರೊಳಗಾಗಿ ಅರ್ಜಿ ಸಲ್ಲಿಸಬೇಕು ಅಥವಾ ಕಲಬುರಗಿ (ಪುರುಷ) ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಹಾಗೂ ಸಂಸ್ಥೆಯ ಮೊಬೈಲ್ ಸಂಖ್ಯೆ 7259272146ಗೆ ಸಂಪರ್ಕಿಸಲು ಕೋರಲಾಗಿದೆ…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;