ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಕೂಡ್ಲಿಗಿ:ಪಪಂ 2ವಾರ್ಡ್ ಗಳ ಚುನಾವಣೆ,ಮಾ31ರಂದು ಎಣಿಕೆ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 2ವಾರ್ಡ್ ಗಳಿಗೆ ಚುನಾವಣೆ ಜರುಗಿತು,ಪಟ್ಟಣದ 2ವಾರ್ಡ್ ಗಳ ಸದಸ್ಯರು ಕೋವಿಡ್ ಸೋಂಕಿಗೆ ಮೃತಪಟ್ಟ ಹಿನ್ನಲೆಯಲ್ಲಿ. ಪಟ್ಟಣ ಪಂಚಾಯಿತಿಯ 1 ಮತ್ತು 12ನೇವಾರ್ಡ್ ನ ಸಫಸ್ಯ ಸ್ಥಾನಕ್ಕೆ ಚುನಾವಣೆ ಇಂದು ಜರುಗಿತು, ಪಟ್ಟಣದಲ್ಲಿ ಜರುಗಿರುವ ಎರೆಡೂ ಮತ ಕೇಂದ್ರದಲ್ಲಿ ಒಟ್ಟು ಶೇ 69.05%ರಷ್ಟು ಮತದಾನ ಜರುಗಿದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಾ 31ರಂದು ಕೂಡ್ಲಿಗಿ ಪಟ್ಟಣದ ಎಸ್ಎವಿಟಿ ಕಾಲೇಜ್ ನಲ್ಲಿ ಮತ ಎಣಿಕೆ ನಡೆಯಲಿದೆ.
ಚುನಾವಣಾ ಕೇಂದ್ರಗಳಲ್ಲಿ ಮತದಾನದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಗಿತ್ತು,
ಆಶಾಕಾರ್ಯಕರ್ತರು ಮತದಾನಿಗಳ ಟೆಂಪರೇಚರ್ ಟೆಸ್ಟಿಂಗ್ ಮಾಡಿದರು ಹಾಗೂ ಸ್ಯಾನಿಟೇಷನ್ ಸಿಂಪಡಿಸಿದರು,ಮಾಸ್ಕ್ ಧರಿಸುವುದು ಖಡ್ಡಾಯಗೊಳಸಲಾಗಿತ್ತು,
ಒಟ್ಟಾರೆಯಾಗಿ ಕೊರೋನಾ ಕುರಿತು ಮುಂ ಜಾಗ್ರತೆ ವಹಿಸಿ ನಿಯಮ ಪಾಲಿಸಲಾಯಿತು.
ಪೊಲೀಸ್ ಇಲಾಖಾಧಿಕಾರಿಗಳು ಅಗತ್ಯ ಬಿಗಿ ಬಂಧೋಬಸ್ತ್ ಎರ್ಪಡಿಸಿದ್ದರು,ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳು ಮತದಾರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಮನಿಸಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ನಡೆಯಲು ಆಗದಂತಹ ಕೆಲವು ವಿಕಲಚೇನರು ಹಾಗೂ ವೃದ್ಧರು,ನೆಡೆಯಲಾರದಂಥ ವ್ಯಕ್ತಿಗಳು ಗಾಲಿಕುರ್ಚಿಯ ಮೂಲಕ ಬಂದು ಮತವನ್ನು ಚಲಾಯಿಸಿ ದ್ದಾರೆ. ಕೂಡ್ಲಿಗಿ ಪಟ್ಟಣದ 2ವಾರ್ಡ್ ಗಳ ಮತದಾರರು ಮತವನ್ನು ಚಲಾಯಿಸಿದ್ದು,ದಿನಾಂಕ ಮಾ 31ರಂದು ಬರುವ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
