ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

*ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಸ್ವಾಮಿ ಹಳ್ಳಿ ಗ್ರಾಮ*
*ದಲಿತ ಮುಖಂಡರಿಂದ ಮಹಾ ನಾಯಕನಿಗೆ ಅಭಿನಂದನ ಕಾರ್ಯಕ್ರಮ. ಹಾಗೂ ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳ ಮರು ನೇಮಕ ಕಾರ್ಯಕ್ರಮ ಜರುಗಿತು.* ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಮಿಹಳ್ಳಿ ಶಾಖೆ ವತಿಯಿಂದ ದಿನಾಂಕ 28 3 2021ರಂದು ಸ್ವಾಮಿಹಳ್ಳಿ ಗ್ರಾಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಜೀವನ ಕುರಿತಾದ ಮಹಾನಾಯಕ ಧಾರವಾಹಿ ಬ್ಯಾನರ್. ಮತ್ತು ಡಿಎಸ್ಎಸ್ ನಾಮಫಲಕ ಉದ್ಘಾಟನೆ ಹಾಗೂ ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳ ಮರುನೇಮಕ ಹಾಗೂ “ರಕ್ತದಾನ ಶಿಬಿರ” ಕಾರ್ಯಕ್ರಮ ನೆರೆವರೆಯಿತು. ಬಾಬಾಸಾಹೇಬರ ಚಿತ್ರವನ್ನ ಬೆಳ್ಳಿ ರಥದಲ್ಲಿ ಅದ್ದೂರಿಯಾಗಿ ನೂರಾರು DSS ಕಾರ್ಯಕರ್ತರು ಹೆಣ್ಣುಮಕ್ಕಳು ಆರತಿ ಬೆಳಗುವುದರ ಮುಖಾಂತರ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು. ವಿಶೇಷವಾಗಿ ಸ್ವಾಮಿಹಳ್ಳಿ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ಬಳ್ಳಾರಿ ಸ್ವಾಮಿ ವಿವೇಕಾನಂದ ರಕ್ತ ಬಂಡಾರ ಸಂಸ್ಥೆಗೆ ಡಿಎಸ್ಎಸ್ ಕಾರ್ಯಕರ್ತರು 40 ಸದಸ್ಯರು ರಕ್ತದಾನ ಕೊಟ್ಟು ಮುಂದಿನ ಆರೋಗ್ಯದ ಬಗ್ಗೆ ತಿಳಿದುಕೊಂಡೆವು.
ಕಾರ್ಯಕ್ರಮದ ಅಧ್ಯಕ್ಷತೆ : ಸ್ವಾಮಿಹಳ್ಳಿ ಆರ್ ಕೆ ಹೆಗಡೆ ಡಿಎಸ್ಎಸ್ ತಾಲೂಕು ಸಂಚಾಲಕರು ಸಂಡೂರು
ಕಾರ್ಯಕ್ರಮದ ಉದ್ಘಾಟನೆ: ತಿಮ್ಮಣ್ಣ ಕೂಡ್ಲಿಗಿ ಪೊಲೀಸ್ ಠಾಣೆ ಪಿಎಸ್ಐ
ಡಿಎಸ್ಎಸ್ ನಾಮಫಲಕ ಉದ್ಘಾಟನೆ: N M D C ಪಂಪಾಪತಿ ತಾಲೂಕ ಖಜಾಂಚಿ
ಪ್ರಾಸ್ತವಿಕ ನುಡಿ: ಮಲ್ಲೇಶ್ ಕಮತುರು ಅವರು ಪ್ರಸ್ತುತ ವಾತಾವರಣದ ಬಗ್ಗೆ ಮಾತಾಡಿದರು.
ವಿಶೇಷ ಉಪನ್ಯಾಸಕರಾಗಿ: ರಮೇಶ್ ಸುಗ್ಗೆನಹಳ್ಳಿ ರವರು ಈ ದೇಶದಲ್ಲಿ ಎಲ್ಲಾ ಸಮಾಜ ಸುಧಾರಣೆಯ ಜಾತಿವ್ಯವಸ್ಥೆಯಿಂದ ಮರೆಯಾಗುತ್ತಿದ್ದಾರೆ ಬಾಬಾ ಸಾಹೇಬರು ಸಂವಿಧಾನ ಬರೆದಿದ್ದಾರೆ ಈಗಿನ OBC ಗೆ ಮೀಸಲಾತಿ ಸಿಗದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಚಹಾ ಮಾರುವ ಹುಡುಗ ಮೋದಿಜಿ ಪ್ರಧಾನ ಮಂತ್ರಿ ಆಗುತ್ತಿರಲಿಲ್ಲ. ಪೇಪರ್ ಮಾರುವ ಹುಡುಗ ಅಬ್ದುಲ್ ಕಲಾಂ ರಾಷ್ಟ್ರಪತಿ ಆಗುತ್ತಿರಲಿಲ್ಲ. ಈ ದೇಶಕ್ಕೆ ಮತದಾನದ ಹಕ್ಕನ್ನು ತಂದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ R B I ಬ್ಯಾಂಕನ್ನು ಸ್ಥಾಪಿಸಲಿಕ್ಕೆ ಕಾರಣರಾದವರು. ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿ ಯಲ್ಲಿ ಪಾಲು ಇದೆ ಎಂದು ಹೋರಾಡಿದವರು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲಾ ಜಾತಿಯವರು ಮೀಸಲಾತಿಯನ್ನ ಪಡೆಯುತ್ತಿದ್ದಾರೆ ಆದರೆ ದುರಂತ ಬಾಬಾಸಾಹೇಬರನ್ನ ಕೇವಲ ಎಸ್ಸಿಎಸ್ಟಿ ನಾಯಕರು ಎಂದು ಬಣ್ಣಿಸುತ್ತಿದ್ದಾರೆ ಎಂದು ರಮೇಶ ಸುಗ್ಗಿನಹಳ್ಳಿ ಅವರು ತುಂಬಾ ಅದ್ಭುತವಾಗಿ ಜನರಿಗೆ ಮನದಟ್ಟಾಗುವಂತೆ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳು: ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರು ತಾಯಪ್ಪ ಹೊಸಹಳ್ಳಿ ದುರುಗಪ್ಪ N M D C ಹೊಸಹಳ್ಳಿ ಹನುಮಂತಪ್ಪ ಲಕ್ಷ್ಮಿಪುರ. ನಾವುಲೂಟಿ ಅಣ್ಣಯ್ಯ . ತಾಲೂಕು ಸಂಘಟನೆ ಸಂಚಾಲಕರು ಗಳು . Y T G ಕುಮಾರಸ್ವಾಮಿ. ಸಣ್ಣ ಹೊನ್ನೂರಪ್ಪ ಸೋವೆನಹಳ್ಳಿ . ಅಂತಪುರ ಗಂಗಾಧರ. ಹೊಸಹಳ್ಳಿ ದೇವರಾಜ. ಹೋಬಳಿ ಸಂಚಾಲಕರು . ಬುಡ್ಡೇನಹಳ್ಳಿ ಹುಲುಗಪ್ಪ. ನಗರ ಘಟಕ ಸಂಚಾಲಕರು ಬಸವರಾಜ್ ಬ್ರುಸ್ಲಿ. ಮಹಿಳಾ ಒಕ್ಕೂಟದ ಕವಿತ V ರಾಜು. ಬಂಡ್ರಿ ರಮೇಶ. ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು : ದುರುಗೇಶ್ ಯಶವಂತನಗರ ವಿದ್ಯಾರ್ಥಿ ಒಕ್ಕೂಟ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು……
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
