;

ನಿಷೇಧದ ನಡುವೆಯೂ ಅದ್ದೂರಿಯಾಗಿ ನಡೆದ ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ರಥೋತ್ಸವ..!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಅತ್ಯಂತ ಸರಳ ಹಾಗೂ ಸಂಭ್ರಮದಿಂದ ಸೀಮಿತ ಭಕ್ತರ ಬುಡಕಟ್ಟು ಸಾಂಸ್ಕೃತಿಕ ವೈಭವ ಸಾರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಭಕ್ತರು ಸಮ್ಮುಖದಲ್ಲಿ ನೆರವೇರಿತು. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿಧಿಸಿದ್ದ ಕಟ್ಟಳೆಯಿಂದಾಗಿ ಸರಳ ಜಾತ್ರೆ ನಡೆಯಿತು. ನೆರೆಹೊರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಭಕ್ತರನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಪೊಲೀಸರು ನಾಯಕನಹಟ್ಟಿ ಪ್ರಮುಖ ರಸ್ತೆಗಳ ಚೆಕ್ ಪೋಸ್ಟ್‌ಗಳಲ್ಲಿ ಮೊಕ್ಕಾಂ ಹಾಕಿ ಯಾವುದೇ ವಾಹನ ಪಟ್ಟಣದೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ದೊಡ್ಡ ರಥ ಹಾಗೂ ಚಿಕ್ಕ ರಥವನ್ನು ಬಾವುಟ ಹಾಗೂ ಹೂವಿನಿಂದ ಸಿಂಗರಿಸಲಾಗಿತ್ತು. ಅದರಲ್ಲಿ ಏಳು ಬಣ್ಣಗಳ ಬಾವುಟಗಳಿಂದ ಅಲಕಾರಗೊಂಡ 5 ಚಕ್ರದ ದೊಡ್ಡ ರಥ ಪ್ರಮುಖವಾಗಿತ್ತು.

ಮಧ್ಯಾಹ್ನ ಸುಮಾರು 2 ಗಂಟೆಯಾದರೂ, ಯಾವ ರಥ ಎಳೆಯಬೇಕು ಎಂಬುದರ ಬಗ್ಗೆ ನಿರ್ಧಾರವಾಗಿರಲಿಲ್ಲ ಈವೇಳಜಿಲ್ಲಾಧಿಕಾರಿ ಕವಿತಾಎಸ್. ಮನ್ನಿಕೇರಿ ದೇವಾಲಯಕ್ಕೆ ಆಗಮಿಸಿಜಾತ್ರೆಗೆನಿಯೋಜಿಸಿದ್ದ ಅಧಿಕಾರಿ ಗಳೊಂದಿಗೆ ಸಮಾಲೋಚಿಸಿ ದೊಡ್ಡ ರಥ ಎಳೆಯಲು ಅನುವು ಮಾಡಿಕೊಟ್ಟರು. ನಂತರದೊಡ್ಡರಥೋತ್ಸವಕ್ಕೆ ಸಿದ್ಧತೆಗಳುಪ್ರಾರಂಭಿಸಿ, ಜಾನಪದ ಕಲಾಮೇಳಗಳೊಂದಿಗೆ ರಥಕ್ಕೆ ಅನ್ನಬಲಿ ಹಾಕಲಾಯಿತು. ಆ ನಂತರ ಮಧ್ಯಾಹ್ನ ಸುಮಾರು 3.30ಕ್ಕೆ ಅಲಂಕೃತಗೊಂಡ ಚಿನ್ನದ ಉತ್ಸವ ಮೂರ್ತಿಯನ್ನು ಒಳಮಠದ ದೇವಾಲಯದಿಂದ ವಿಶೇಷವಾಗಿ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ರಥದ ಮುಂಭಾಗಕ್ಕೆ ಜಾನಪದ ಕಲಾತಂಡಗಳೊಂದಿಗೆ ಕರೆತರಲಾಯಿತು. ಬಾಬ್ತುದಾರರರು ಶಾಸ್ರೋಕ್ತವಾಗಿ ರಥದ ಗಾಲಿಗೆ ಬಲಿ ಅನ್ನ ಸಮರ್ಪಿಸಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು. ಈ ವೇಳೆ ನಾಯಕನಹಟ್ಟಿ ಪ.ಪಂ ಸದಸ್ಯ ಎಸ್.ಉಮಾಪತಿ ಅವರು 21 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು ಪಡೆದರು. ಪೂಜಾ ವಿಧಿವಾಧನಗಳ ನಂತರ ಸಂಜೆ 4ಕ್ಕೆ ಬೃಹತ್ ರಥಕ್ಕೆ ಚಾಲನೆ ನೀಡಲಾಯಿತು. ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ದವನ, ಹೂವು, ಚೂರು ಬೆಲ್ಲವನ್ನು ತೂರಿದರು. ಕೊಬ್ಬರಿ ಸುಟ್ಟ ಭಕ್ತರು: ಒಳಮಠದ ಮುಂದೆ ಜಾತ್ರೆ ಸಂದರ್ಭದಲ್ಲಿ ಬೃಹತ್ತಾದ ಅಗ್ನಿಕುಂಡದಲ್ಲಿ ಒಣಕೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ಸಾಮಾನ್ಯ, ಈ ಸಾರಿ ಭಕ್ತರ ಕಡಿಮೆ ಸಂಖ್ಯೆಯಲ್ಲಿದ್ದರಿಂದ ಕಡಿಮೆ ಪ್ರಮಾಣದಲ್ಲಿ ಕೊಬ್ಬರಿ ಸುಡಲಾಯಿತು. ರಥೋತ್ಸವದಲ್ಲಿ ಮಾಜಿ ಸಚಿವ ಡಿ.ಸುಧಾಕರ್‌, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಜಿಪಂ ಅಧ್ಯಕ್ಷೆ ಶಶಿಕಲಾಸುರೇಶ್ ಬಾಬು, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ, ಕೊಲ್ಲೂರು ಮೂಕಾಂಬಿಕೆ ದೇವಾಲಯ ಇಒ ಎಸ್ ಪಿಬಿ ಮಹೇಶ್, ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಬಿ.ವಾಲಿ ಸುತ್ತಮುತ್ತಲಿನ ಜಿಲ್ಲೆಗಳ ಭಕ್ತರು ಉಪಸ್ಥಿತರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend