ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಇಂದು ಮಾರ್ಚ್/27/2021 ನೇ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂತರು, ಶರಣರು, ಸಾಹಿತಿಗಳು ಹುಟ್ಟಿದ ಕನ್ನಡ ನಾಡು, ನುಡಿ ಕನ್ನಡಿಗರಿಗೆ ಕನ್ನಡಿ ಇದ್ದಂತೆ. ಪ್ರತಿಯೊಬ್ಬರೂ ಭಾಷೆಯನ್ನು ಪ್ರೀತಿಸಿದರೆ ಕನ್ನಡ ಶ್ರೀಮಂತಿಕೆಗೆ ಇನ್ನಷ್ಟು ಮೆರುಗು ಬರಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಧೂಪಂ ಅಂಜಿನಪ್ಪ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ
ವಹಿಸಿ ಮಾತನಾಡಿದರು. ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಕನ್ನಡ ಭಾಷೆಯ ವ್ಯಾಮೋಹ ಹೆಚ್ಚಾಗಬೇಕು. ಕನ್ನಡ ನಾಡು ಕಲಾವಿದರು, ಸಾಹಿತಿಗಳಿಗೆ ಕನ್ನಡ ಭಾಷೆಯು ಬದುಕನ್ನು ತೋರಿಸಿಕೊಟ್ಟಿದೆ. ತೆಲುಗು ಭಾಷಿಕನಾಗಿದ್ದರೂ ಕನ್ನಡ ನೆಲದಲ್ಲಿ ಬದುಕುತ್ತಾ ಕಳೆದ ೭ ದಶಕದಿಂದ ಕಲಾವಿದನಾಗಿ ಬೆಳೆದಿದ್ದೇನೆ. ಸಂತರು, ಶರಣರು, ಸಾಹಿತಿಗಳು ಕನ್ನಡಕ್ಕೆ ತಮ್ಮದೆ ಕೊಡುಗೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೂ ಭಾಷಾ ಪ್ರೇಮ ಬೆಳೆಯಬೇಕು. ಕನ್ನಡ ಎಂಬುದು ಬರಿ ನುಡಿಯಲ್ಲಿ ಮುತ್ತಿನ ಮಣಿ ಸಾಲುಎನ್ನುವಕವಿವಾಣಿಯನ್ನು ಅರ್ಥೈಸಿಕೊಳ್ಳಬೇಕು. ಕನ್ನಡಿಗರಾದ ನಾವು ಕನ್ನಡವನ್ನು ಪ್ರೀತಿಸಿಗೌರವಿಸಿದರೆ ಕನ್ನಡ ಭಾಷೆಗೆ ಶ್ರೀಮಂತಿಕೆ ಇನ್ನಷ್ಟು ಹೆಚ್ಚಾಗಲಿದೆ. ಮಾನವ ಜನ್ಮ ದೊಡ್ಡದು ಈ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ ಕನ್ನಡ ಭಾಷೆ, ಕಲೆ, ಸಾಹಿತ್ಯ ನಮ್ಮ ಸಂಸ್ಕøತಿಗೆ ಮೊದಲು ಗೌರವವನ್ನು ಕೊಡಬೇಕು ಎಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಧೂಪಂ ಅಂಜಿನಪ್ಪ ತಿಳಿಸಿದರು. ಹಿಂದುಳಿದ ತಾಲ್ಲೂಕು ಎಂಬ ಹಣೆ ಪಟ್ಟಿ ಕಟ್ಟಿ ಕೊಂಡಿರುವ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ನಾಟಕ ಪ್ರದರ್ಶನಕ್ಕೇನು ಕಡಿಮೆ ಇಲ್ಲ. ಅಪ್ಪಟ ರೇಷ್ಮೇ ನಗರ ಎಂಬ ಹೆಸರಿಗೆ ಹೆಗ್ಗಳಿಕೆಯಾಗಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎಂಬ ನಾಣ್ನುಡಿಯಂತೆ ಕನ್ನಡ ಸರ್ವರಿಗೂ ನೆರಳಾಗುವಂತ ವೃಕ್ಷ. ಕನ್ನಡ ಭಾಷೆ ಅನಾದಿ ಕಾಲದಿಂದಲೂ ಬೆಳೆದು ಬಂದಿದೆ. ಕನ್ನಡಕ್ಕೆ ನಮ್ಮ ಬದ್ಧತೆ ಖಾಳಜಿ ವಹಿಸಬೇಕು. ವಚನಕಾರರು ಸಾಹಿತಿಗಳು, ಸಂತರು, ದಾಸರು, ಕವಿಗಳು, ಹುಟ್ಟಿದಂತ ನಾಡು ನಮ್ಮ ಕನ್ನಡ ನಾಡು. ನಮ್ಮ ತಾಲ್ಲೂಕಿನಲ್ಲಿ ಜಾನಪದ ಸಾಹಿತ್ಯ, ತತ್ವಪದ ಗಾಯನ, ಸಾಹಿತ್ಯ, ಕೃಷಿಯಲ್ಲಿ ಸಾಧನೆ ಮಾಡಿ ರಾಜ್ಯ ಪ್ರಶಸ್ತಿ ಪಡೆದುಕೊಂಡವರಿದ್ದಾರೆ ಎಂದು ತಿಳಿಸಿದರು. ನೆರೆ ಆಂಧ್ರ ಪ್ರದೇಶ ರಾಯದುರ್ಗ ಶಾಸಕ ಕಾಪು ರಾಮಚಂದ್ರರೆಡ್ಡಿ ಮಾತನಾಡಿ ಪಂಪ, ರನ್ನ, ಪೊನ್ನ, ಕುವೆಂಪು, ದ.ರಾ.ಬೇಂದ್ರೆ ಮುಂತಾದ ಕವಿ, ಸಾಹಿತಿಗಳು ಹುಟ್ಟದಂತನಾಡು ಕನ್ನಡ ನಾಡು. ಯಾವ ಭಾಷೆಗೂ ಸಿಗದಂತ ೮ ಜ್ಞಾನ ಪೀಠ ಪ್ರಶಸ್ತಿ ಕನ್ನಡ ಬಾಷೆಗೆ ದೊರೆತಿವೆ. ರಾಷ್ಟ್ರಕೂಟರು, ಹೊಯ್ಸಳರು, ಕದಂಬರು ಅನೇಕ ರಾಜರುಗಳು ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ. ಇಡೀ ದೇಶದಿಂದ ಜನರು ವಲಸೆ ಬಂದು ಕರ್ನಾಟಕ ರಾಜಧಾನಿಯಾದ ಬೆಂಗಳೂರಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತವರ ಬದುಕಿಗೆ ಕನ್ನಡ ತಾಯಿ ಆಶ್ರಯವಾಗಿದ್ದಾಳೆ. ಪ್ರಪಂಚದ ಎಲ್ಲಾ ಕಡೆ ವಾಸಿಸುವ ಕನ್ನಡಿಗರು ಕನ್ನಡಕ್ಕಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದು, ತಾಯಿ ಭಾಷೆ ಕನ್ನಡ ನಮ್ಮ ಹೃದಯದಲ್ಲಿರಬೇಕು ಎಂದು ತಿಳಿಸಿದರು. ತಾಲ್ಲೂಕು ಕಛೇರಿ ಆವರಣದಲ್ಲಿ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ, ನಾಡ ದ್ವಜಾರೋಹಣ ನೆರವೇರಿಸಿ ನಂತರ ಶ್ರೀ ನುಂಕೇಮಲೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಿಂದ ಜಾನಪದ ಕಲಾತಂಡಗಳೊಂದಿಗೆ ಪಟ್ಟಣ ರಾಜ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ನಂತರ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ.ಸಾ.ಪ. ತಾಲ್ಲೂಕು ಅಧ್ಯಕ್ಷ ಡಿ.ಓ.ಮುರಾರ್ಜಿ, ಕಾರ್ಯದರ್ಶಿಗಳಾದ ನೀಲರಾಜ, ಕೆ.ಓ.ಶಿವಣ್ಣ, ಕೋಶಾಧ್ಯಕ್ಷ ಶಾಂತವೀರಣ್ಣ, ಎಂ.ಡಿ.ಮಂಜುನಾಥ, ಸೂರಮ್ಮನಹಳ್ಳಿ ನಾಗರಾಜ, ಜಯಪ್ರಕಾಶ, ಕಾಪು ಭಾರತಿ, ತಿಪ್ಪಣ್ಣ ಮರಿಕುಂಟೆ, ಶುಭ, ರೂಪ, ರಾಜಶೇಖರ, ಭಟ್ರಹಳ್ಳಿ ಧನಂಜಯ, ಪರಮೇಶ, ಬಿ.ವಿಜಯ್, ಸಂಜೀವಪ್ಪ, ಬಿ.ಆರ್.ಸಿ.ಹನುಮಂತಪ್ಪ, ಎಸ್.ಎಸ್. ಪಾಟೀಲ್, ಹೊಸದುರ್ಗ ಮೈಲಾರಪ್ಪ, ಮರುಳಹಳ್ಳಿ ಪರಮೇಶ್, ಚಿಕ್ಕೆರೆಹಳ್ಳಿ ಮಹೇಶ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಕಲ್ಲೇಶಪ್ಪ, ಇನ್ನು ಮುಂತಾದವರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
