;

ಕೊರೋನಾ ಜಾಗೃತಿ ಜಾಥ ಕಾರ್ಯಕ್ರಮ…!!!

ವರದಿ. ದುಗ್ಗಪ್ಪ ಸಿಂದನೂರ್

ಸಿಂಧನೂರು ನಗರಸಭೆ ವತಿಯಿಂದ “ಕೋವಿಡ್ 19 ಲಸಿಕೆ” ಮತ್ತು “ಮಾಸ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ “ಎಂದು ನಗರಸಭೆಯಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ರಾಜ್ಯದ ಜನರನ್ನು ಕೋರೊನಾ ಸೋಂಕಿನಿಂದ ರಕ್ಷಿಸಲು ಸರಕಾರ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು,ಹಾಗೂ ಅನಗತ್ಯವಾಗಿ ಸಾರ್ವಜನಿಕರು ಮನೆಯಿಂದ ಹೊರಗಡೆ ಬರಬಾರದು, ಸರಕಾರದ ಇತರೆ ಸೂತ್ರಗಳನ್ನು ಪಾಲಿಸಬೇಕು, ರಾಜ್ಯಾದ್ಯಂತ ಕೋರೊನಾ ಎರಡನೇ ಅಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಿಲ್ಲೆಯ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಹಕರಿಸಬೇಕು ,ಮಾಸ್ಕ್ ಧರಿಸದೆ ಹೊರಬಂದಲ್ಲಿ 300 ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮಾಲಿಪಾಟೀಲ್ ,ಉಪಾಧ್ಯಕ್ಷರಾದ ಮುರ್ತುಜಾ ಹುಸೇನ್,ಹನುಮೇಶ ಕುರುಕುಂದಿ, ನಗರಸಭೆಯ ಪೌರಾಯುಕ್ತ ಆರ್ .ವಿರೂಪಾಕ್ಷ ಮೂರ್ತಿ ,ನಗರಸಭೆಯ ವಿವಿಧ ವಾರ್ಡಿನ ಸದಸ್ಯರುಗಳು, ಸಿಬ್ಬಂದಿಗಳು ,ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;