;

ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಮಂಡಲ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ.!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಮಂಡಲ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧ ನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವಂತ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಿದ್ದರಾಗ ಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾ ಕಾರ್ಯಕರ್ತರಿಂದ ಆಯೋಜಿಸಿದ್ದ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳಿಂದಾಗಿ ಬಿಜೆಪಿ ವಿಶ್ವದಲ್ಲಿ ಬಲಿಷ್ಟ ಪಕ್ಷ ಎಂಬ ಹೆಗ್ಗಳಿಕೆ ಹೊಂದಿದೆ. ಸಂಘಟನೆಗೆ ಮಾಡುವಂತ ಸಕ್ರಿಯ ಕಾರ್ಯಕರ್ತರಿಗೆ ಪಕ್ಷದಲ್ಲಿ ಉತ್ತಮ ಭವಿಷ್ಯ ಇದ್ದೇ ಇರುತ್ತದೆ. ಹಾಗಾಗಿ ಪಕ್ಷದಲ್ಲಿ ಹುದ್ದೆ ಪಡೆದರೆ ಸಾಲದು ಪಕ್ಷ ಸಂಘಟನೆಗೆ ಮುಂದಾಗ ಬೇಕು. ಪ್ರಧಾನಿ ಮೋದಿ ಅವರ ಜನಪರ ಇಡೀ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕು. ಜಿಲ್ಲಾ ಮತ್ತು ತಾಪಂ ಚುನಾವಣೆ ಹತ್ತಿರವಾಗುತ್ತಿದ್ದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಬೇಕೆಂದು ತಿಳಿಸಿದರು. ಜಿಲ್ಲಾ ಹಿಂದುಳಿದ ಮೋರ್ಚ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ತಾಲೂಕಿನಲ್ಲಿ ಬಿಜೆಪಿ ಬಲಿಷ್ಟವಾಗಿದೆ. ಪಕ್ಷವನ್ನು ಇನ್ನಷ್ಟು ಎತ್ತರಕ್ಕೇರಿಸುವಂತ ಕಾರ್ಯಕರ್ತರ ಪಡೆಯಿದೆ, ಹಿಂದುಳಿದ ಮೋರ್ಚಾ ಕಾರ್ಯಕರ್ತರು ತಾಲೂಕಿನಲ್ಲಿ ಹಿಂದುಳಿದ ಸಮುದಾಯಗಳನ್ನು ಬಿಜೆಪಿಗೆ ಕರೆತರುವ ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಡಾ. ಪಿ. ಎಂ. ಮಂಜುನಾಥ, ಒಬಿಸಿ. ಉಪಾದ್ಯಕ್ಷ ಗೋವಿಂದಪ್ಪ ಜಲ್ಲಾನಕಾರ ಪ್ರಕೊಡಾಕ, ಪ್ರವೀಣ್ ಕುಮಾರ್, ಮುರುಳಿ ರಾವ್, ಕಲ್ಲೇಶ್ ತಮ್ಮಣ್ಣ, ಸಂಚಾಲಕ ಶಾಂತರಾಮ್, ಸರ್ವಮಂಗಳ ಚಂದ್ರು, ಎನ್.ಪಿ. ಪ್ರಭಾಕರ್, ನಾಗರಾಜ, ಪ್ರಶಾಂತ್, ಸಿದ್ದಾರ್ಥ, ಕಿರಣ್ ಗಾಯಕವಾಡ್, ಭಾಗ್ಯಮ್ಮ ರಾಜ್, ನಂದಿನಿ, ಭಾರತಿ, ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;