;

ಮೊಳಕಾಲ್ಮುರು: ಸೂರಮ್ಮನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ: ತಹಶೀಲ್ದಾರ್‌ ಭಾಗಿ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಗಡಿ ಸೂರಮ್ಮನಹಳ್ಳಿಗೆ ಗ್ರಾಮಕ್ಕೆ ಶನಿವಾರ ಗ್ರಾಮವಾಸ್ತವ್ಯಕ್ಕೆ ಆಗಮಿಸಿದ ತಹಸೀಲ್ದಾರ್‌ ತಾಲೂಕು ಆಡಳಿತಕ್ಕೆ ಅದ್ದೂರಿ ಸ್ವಾಗತ ದೊರಕಿದ್ದು, ಗ್ರಾಮಸ್ಥರಿಂದ ಮನವಿಗಳ ಮಹಾಪೂರವೇ ಹರಿದು ಬಂದಿತು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ತಹಸೀಲ್ದಾರ್ ಕೆ.ಎಸ್.ಸುರೇಶ ಉದ್ಘಾಟಿಸಿದರು. ಈ ವೇಳೆ ಪ್ರಾಥಮಿಕ ಉಪಕೇಂದ್ರ, ಜಮೀನು ಪೌತಿ, ಸ್ಮಶಾನ, ಕುಡಿಯುವ ನೀರು, ಚರಂಡಿ, ಲೈಬ್ರರಿ, ಕಾಯಂ ಗೋಶಾಲೆ ಸೇರಿ ನೂರಾರು ಸಮಸ್ಯೆಗಳನ್ನು ಹಿಡಿದ ಸಾರ್ವಜನಿಕರು ಪರಿಹಾರಕ್ಕಾಗಿ ಅಧಿಕಾರಿಗಳ ಮುಂದೆ ಅಹವಾಲು ಸಲ್ಲಿಸಿದರು. ಸೂರಮ್ಮನಹಳ್ಳಿ ಗಡಿ ಗ್ರಾಮವಾಗಿದ್ದು, ಹತ್ತಾರು ಸಮಸ್ಯೆಗಳು ತಾಂಡವಾಡುತ್ತಿವೆ. ಆರೋಗ್ಯ ಸಮಸ್ಯೆ ಭಾದಿಸಿದರೆ ಹತ್ತಾರು ಕಿ.ಮಿ. ದೂರದ ಆಸ್ಪತ್ರೆಗಳ ಹೋಗಬೇಕಾಗುತ್ತದೆ. ಪ್ರಾಥಮಿಕ ಚಿಟ್ಟೆಗೆ ಎಂಬಂತೆ ಊರಿಗೆ ಪ್ರಾಥಮಿಕ ಉಪಕೇಂದ್ರ ಮುಂಜೂರು ಮಾಡಬೇಕು. ಪ್ರಾಥಮಿಕ ಶಾಲೆಯ ಹೆಸರಲ್ಲಿ 4 ಎಕರೆ ಜಾಗ ಇದ್ದರೂ, ಈವರೆಗೂ ಪಹಣಿ ಬರುತ್ತಿಲ್ಲ. ಇದರಿಂದ ಶಾಲಾ ಕಾಂಪೌಂಡ್ ನಿರ್ಮಿಸಲಾಗುತ್ತಿಲ್ಲ. ಗ್ರಾಮಕ್ಕೆ ಪ್ರೌಡ ಶಾಲೆ ಮುಂಜೂರು ಮಾಡಬೇಕೆಂದು ಸಭೆಯಲ್ಲಿ ಮಂಡಿಸಿದರು. ಇದೇ ವೇಳೆ ವೃದ್ಧಾಪ್ಯ ವೇತನ, ನಿರ್ಗತಿಕ, ಸಂಧ್ಯಾ ಸುರಕ್ಷಾ ಒಟ್ಟು 4 ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಸುಧಾರಿಂದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ನೆರವೇರಿಸ ಲಾಯಿತು. ಜತೆಗೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಯಿತು. ಕಂದಾಯ 34, ಪಂಚಾಯತ್ ರಾಜ್ ಇಲಾಖೆ 25, ಆರೋಗ್ಯ ಇಲಾಖೆ 2, ಬೆಸ್ಕಾಂ 2, ಕಾರ್ಮಿಕ 1, ಕೃಷಿ ಇಲಾಖೆ 1, ಪಶುಷವೈದ್ಯ 1, ಡಿಡಿಪಿಐ 2, ಸಮಾಜ ಕಲ್ಯಾಣ 6 ಸೇರಿ ಒಟ್ಟು 74 ಅರ್ಜಿಗಳು ಸ್ವೀಕೃತವಾದವು. ಜಿಪಂ ಸದಸ್ಯ ಡಾ.ಬಿ.ಯೋಗೇಶ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರಾಧಮ್ಮ ಎಂ.ಪಿ.ನಾಗರಾಜ, ಉಪಾಧ್ಯಕ್ಷ ಶಿವಾರೆಡ್ಡಿ, ಕೇಶವಮೂರ್ತಿ, ತಾಪಂ ಅಧ್ಯಕ್ಷೆ ಬೋರಮ್ಮ ಪಾಲಯ್ಯ, ತಾಪಂ ಇಒ ಪ್ರಕಾಶ, ಸದಸ್ಯರಾದ ಜಯಮ್ಮ ಪಾಲಯ್ಯ, ಜ್ಯೋತಿ ಸುರೇಶ, ಗೀತಮ್ಮ ಪಾಲಯ್ಯ, ಮಹೇಶ, ಪಾಲಮ್ಮ, ಜಿ.ಮಹೇಶ, ಎಸ್.ಜಯಣ್ಣ, ತಿಪ್ಪೇಸ್ವಾಮಿ, ಬೊಮ್ಮಣ್ಣ, ಪಿಡಿಒ ಮಲ್ಲಿಕಾರ್ಜುನ ಮತ್ತಿತರರಿದ್ದರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;