ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಚಿರತಗುಂಡು:ಆಯುಕ್ತರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ*
-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಹೋಬಳಿಯ ಚಿರತಗುಂಡು ಗ್ರಾಮದಲ್ಲಿ,ಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ ನಿರ್ಧೆಶನದಲ್ಲಿ ತಾಲೂಕಾಡಳಿತ ದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜರುಗಿತು,ಹೊಸಪೇಟೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ವರು ಶಾಲಾವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಈ ಸಂದರ್ಭದಲ್ಲಿ ವಿವಿದ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಅಹವಾಲುಗಳನ್ನ ಸ್ವೀಕರಿಸಲಾಯಿತು.ಸಾರ್ವಜನಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿದಲಾಗಿತ್ತು,ನಂತರ ಅಧಿಕಾರಿಗಳಿಂದ ಗಡ್ಡದ ಬೋರಯ್ಯನಹಟ್ಟಿ ಕಂದಾಯ ಗ್ರಾಮ ರಚನೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲಾಯಿತು. ಮುಖ್ಯವಾಗಿ
ಆಧಾರ್ ನೊಂದಾವಣೆ ಹಾಗೂ ನವೀಕರಣ ಮತ್ತು ಪಡಿತರ ಚೀಟಿ ನೋಂದಣಿ ಹಾಗೂ ನವೀಕರಣ ಪ್ರ್ರಕ್ರಿಯೆಗಳಿಗೆ ಚಾಲನೆ ನೀಡಲಾಯಿತು.
ಮದ್ಯಾಹ್ನದ ನಂತರ ಸಹಾಯಕ ಆಯುಕ್ತರು ಗ್ರಾಮವನ್ನ ಖದ್ದು ಸಂಚರಿಸುವ ಮೂಲಕ ಗ್ರಾಮಸ್ಥರಿಂದ ಅಹವಾಲು ಆಲಿಸಲಿದ್ದಾರೆ,ದಲಿತರ ಏರಿಯಾದಲ್ಲಿ ಚಹಾ ಕೂಟದೊಂದಿಗೆ ಕುಂದು ಕೊರತೆಗಳನ್ನ ಪರಿಶೀಲಿಸಲಿದ್ದಾರೆ.ಸಂಜೆ ಜರುಗುವ ಕಾರ್ಯಕ್ರಮದಲ್ಲಿ ವಿವಿದ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನ ಆಯುಕ್ತರು ವಿತರಿಸಲಿದ್ದಾರೆ.ಮೂಲಭೂತ ಸೌಕರ್ಯ ಹಾಗೂ ತುರ್ತು ಅಹವಾಲುಗಳಿಗೆ ಸಾಧ್ಯವಾದಲ್ಲಿ ಸ್ಥಳದಲ್ಲಿಯೇ ಸ್ಪಂಧಿಸಲಾಗುತ್ತದೆ, ಕಾಲಾವಕಾಶದ ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಮಯ ನೀಡಲಾಗುವುದು ಮತ್ತು ನಿಗದಿತ ಸಮಯಕ್ಕೆ ಕಡತ ವಿಲೇವಾರಿ ಮಾಡಲಾಗುವುದೆಂದು ತಾಲೂಕಾಡಳಿತ ಸ್ಪಷ್ಟಪಡಿಸಿದೆ.

ಇಂದು ಬೆಳಿಗ್ಗೆಯೇ ಪ್ರಾರಂಭವಾದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಸಿಬ್ಬಂದಿ ವರ್ಗ ಹಾಜರಿದ್ದು ಸಕ್ರೀಯವಾಗಿ ಪಾಲ್ಗೊಂಡಿದ್ದರು. ಜಿಪಂ,ತಾಪಂ,ಗ್ರಾಪಂ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು, ಹಾಗೂ ವಿವಿದ ಹಂತದ ಜನ್ರತಿನಿಧಿಗಳು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವಿವಿದ ಗ್ರಾಮಗಳ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
