;

ದೇಶದ ಬೆನ್ನೆಲುಬನ್ನು ಬೆಂಡು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳು…!!!

ವರದಿ.ಧನಂಜಯ್

 

ಹೂವಿನಹಡಗಲಿ GESCOM AEE ಭಾಸ್ಕರ್ ಹಾಗೂ ಲೈನ್ ಮ್ಯಾನ್ ಮಾರುತಿ ರೈತನಿಂದ ಟಿಸಿ ಹಾಕಲು 20 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ..

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಲಂಚಮುಕ್ತ ಕರ್ನಾಟಕ ವೇದಿಕೆ…
ರಾಜ್ಯದಲ್ಲಿ ರೈತರು ಹಲವು ಕಷ್ಟಗಳಿಂದ, ಕಣ್ಣೀರಿನಲ್ಲಿ ಕೈತೋಳೆಯುವ ಸಂದರ್ಭದಲ್ಲಿ, ಕೆಲವು ಭ್ರಷ್ಟ ಅಧಿಕಾರಿಗಳು ಮಾತ್ರ ತಮ್ಮ ಒಂದು ಲಂಚ ದಾಹವನ್ನು ತೀರಿಸಿಕೊಳ್ಳಲು ಹಲವು ಭ್ರಷ್ಟಾಚಾರದ ಆದಿಯನ್ನು ಇಡೀದಿರುವುದು ಮಾತ್ರ ನಮ್ಮ ಇಡೀ ದೇಶವೇ ತಲೆಯನ್ನು ತಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಮಾತ್ರ ಎಷ್ಟು ಸರಿ ಏಳಿ.
ರೈತ ದೇಶದ ಬೆನ್ನೆಲುಬು ಎನ್ನುವುದನ್ನು ಮಾತ್ರ
ಕೊರೊನವೆಂಬ ಮಹಾಮಾರಿಯ ಹೆಸರಲ್ಲಿ ಧನಿಕರು, ಧನಿಕರಗಿಯೇ ಮುಂದುವರೆಯುತ್ತಿದ್ದು ರಾಜ್ಯದಲ್ಲಿ ಮಾತ್ರ ಬಡವರು, ಬಡವರಾಗಿಯೇ ಮುಂದುವರೆಯುತ್ತಿರುವುದು ಎಷ್ಟು ಸರಿ ಹೇಳಿ.
ರೈತ ದೇಶದ ಬೆನ್ನಲಬು ಆದರೆ ಇಲ್ಲಿ ಮಾತ್ರ ಧನಿಕರು ಹಲವು ದಾರಿಯಲ್ಲಿ ಮುಂದುವರೆಯುತ್ತಿರುವುದು ಎಷ್ಟು ಸರಿ ಏಳಿ.
ಎಲ್ಲಾ ರಂಗದಲ್ಲಿ ಲಂಚ ಎನ್ನುವ ಭೂತ ರಾಜ್ಯದಲ್ಲಿ ತಾoಡಡವಾಡುತ್ತಿರುವುದು ಮಾತ್ರ ಇಡೀ ದೇಶವೇ ತಲೆಯನ್ನು ತಗ್ಗಿಸುವ ಒಂದು ದುರದೃಷ್ಟವೆಂದರೂ ತಪ್ಪಾಗಲಾರದು, ಅಂದರೆ ಈಗ ನಾವು ಹೇಳುತ್ತಿರುವ ವಿಷಯ, ವಿಜಯನಗರ ಜಿಲ್ಲೆಯ, ಹೂವಿನ ಹಡಗಲಿ ತಾಲೂಕಿನ ವಿಷಯದ ಬಗ್ಗೆ, ಇಲ್ಲಿ ಸುಮಾರು ಲಂಚಕೋರರು ರೈತರ ಮೇಲೆ ತಮ್ಮ ಒಂದು ದರ್ಪವನ್ನು ತೋರಿ ವಸೂಲಾತಿಗೆ ಇಳಿದಿರುವುದು ಮಾತ್ರ ತುಂಬಾ ವಿಷಾದನೀಯ ಸಂಗತಿಯಂದರು ತಪ್ಪಾಗಲಾರದು.
ಈ ಒಂದು ತಾಲೂಕಿನಲ್ಲಿ ಪ್ರತಿಯೊಬ್ಬ ಸಾರ್ವಜನಿಕ ತಮ್ಮ ಒಂದು ಸರ್ಕಾರದ ಸವಲತ್ತನ್ನು ಪಡೆಯಬೇಕೆಂದರೆ, ಲಂಚವೆಂಬ ದೇವರ ಬೆನ್ನತ್ತಲೇಬೇಕು ಅಂದರೆ ಎಲ್ಲಾ ವರ್ಗದ ಅಧಿಕಾರಿಗಳು ತಮ್ಮ ಒಂದು ಹಣದ ಧಾಹವನ್ನು ತೀರಿಸಿಕೊಳ್ಳಲು ಬಡ ರೈತರ ಹಾಗೂ ಕೂಲಿಕಾರ್ಮಿಕರ ಒಂದು ಬಡ ಜೀವವನ್ನು ಹಿಂಡಿ, ತಮ್ಮ ಒಂದು ಸುಖವನ್ನು ಪಡೆಯುತ್ತಾರೆ ಎನ್ನುವ ಒಂದು ವದಂತಿಗಳು ಇಡೀ ತಾಲೂಕಿನ ಸಾರ್ವಜನಿಕರ ಒಂದು ಮಾತಲ್ಲಿ ಅರಿದಾಡುತ್ತಿವೆ ಏಕೆಂದರೆ ಇಲ್ಲಿರುವ.

ಕೃಷಿ ಅಧಿಕಾರಿಗಳಿಂದ ಇಡಿದು ಪಂಚಾಯ್ತಿ ಅಭಿವೃದ್ಧಿಅಧಿಕಾರಿಗಳ ಒಂದು ಲಂಚತನದ ಒಂದು ಕಿರುಕುಳಕ್ಕೆ ಅಲ್ಲಿರುವ ಸಾರ್ವಜನಿಕರೂ ಬೇಸತ್ತು ಹೋಗಿದ್ದಾರೆ, ಹಾಗೂ, ಇದು ಇಲ್ಲಿಗೆ ನಿಲ್ಲಬಹುದು ಎಂದುಕೊಂಡರೆ ಈಗ ವಿದ್ಯುತ್ ಲೈನ್ಮ್ಯಾನ್ ತನಕ ಮುಂದುವರೆದಿರುವುದು ಎಷ್ಟು ಸರಿ ಹೇಳಿ. ನಾವು ನಮ್ಮ ಒಂದು ಪತ್ರಿಕೆಯಲ್ಲಿ ಹಲವು ಬಾರಿ ಸುದ್ದಿಯನ್ನು ಬಿತ್ತರಿಸಿದರು ಸಹ ಈ ಒಂದು ತಾಲೂಕಿನ ಶಾಸಕರು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಇರುವುದು ಮಾತ್ರ ತುಂಬಾ ವಿಷಾದನೀಯ ಸಂಗತಿ, ನಾವು ಸುಮಾರು ದಿನಗಳಿಂದ ಈ ಒಂದು ತಾಲೂಕಿನಿಂದ ದೂರಹೋಗಿ ಬೇರೆ ಬೇರೆ ತಾಲೂಕಿನ ಸುದ್ದಿಗಳನ್ನು ಬಿತ್ತರಿಸುತ್ತ ಇಲ್ಲಿಸುಧಾರಿಸಲಿ ಎನ್ನುವ ಒಂದು ಉದ್ದೇಶದಿಂದ ದೂರ ಉಳಿದರು ಯಾವಯೊಂದು ಪ್ರಯೋಜನವಾಗಿಲ್ಲ ಆದ್ದರಿಂದ ನಮ್ಮ ಒಂದು ವರದಿಗಾರರ ಸಹಯೋಗದಲ್ಲಿ ಇಂದು.
ವಿದ್ಯುತ್ ಇಲಾಖೆಯ ಒಂದು ಲಂಚವತರದ ಒಂದು ತುಣುಕನ್ನು ಇಡೀ ರಾಜ್ಯದ ಜನತೆಯ ಮುಂದೆ ಬಿಚ್ಚಿಡಲು ಮುಂದಾಗಿದ್ದು ಮಾತ್ರ ತುಂಬಾ ದುಃಖ್ಖದ ಸಂಗತಿ, ಇದೆ ತರನಾಗಿ ಗ್ರಾಮಪಂಚಾಯಿತಿಗಳಲ್ಲಿಯು ಸಹ ತುಂಬಾ ಭ್ರಷ್ಟಚಾರಗಳು ನಡೆಯಿತ್ತಿವೆ ಎನ್ನುವ ವದಂತಿಗಳು ತಾಲೂಕಿನದ್ಯಾoತ
ಸುದ್ದಿಗಳು ಅರಿದಾಡುತ್ತಿವೆ ಇನ್ನಾದರೂ ಇಲ್ಲಿ ನಡೆಯುವ ಭ್ರಷ್ಟತನದ ಬಗ್ಗೆ ಜಿಲ್ಲಾಧಿಕಾರಿಗಳು ಗಮನವನ್ನು ಹರಿಸಿ ಸಾರ್ವಜನಿಕರಿಗೆ ನ್ಯಾಯವನ್ನು ದೊರಕಿಸಿಕೊಡಲಿ ಎಂಬುದು ನಮ್ಮ ಒಂದು ಆಶಯ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;