ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ಮೊಳಕಾಲ್ಮುರು ಇಂದು ಪಟ್ಟಣದ ಸಾರ್ವಜನಿಕ ಸಂತೆ ಸ್ಥಳವನ್ನು ಮಂಜೂರು ಮಾಡದಾ ಹೊರತು ಸಂತೆ ಹರಾಜು ಹಾಕದಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಾರ್ವಜನಿಕ ಸಂತೆಗೆ ಸೂಕ್ತ ಸ್ಥಳ ಇಲ್ಲದ ಕಾರಣ ತರಕಾರಿ ವ್ಯಾಪಾರಸ್ಥರು ರಸ್ತೆ ಅಕ್ಕ ಪಕ್ಕದಲ್ಲಿ ವ್ಯಾಪಾರ ಮಾಡುವಂತ ಅನಿವಾರ್ಯತೆ ಇದೆ. ವಾಹನ ಓಡಾಟದ ನಡುವೆಯೂ ಸಾರ್ವಜನಿಕರು ರಸ್ತೆಯ ಬದಿಯಲ್ಲಿ ತರಕಾರಿಗಳನ್ನು ಕೊಳ್ಳುತ್ತಿದ್ದಾರೆ. ಪ್ರತಿ ದಿನ ಸಂತೆಯಲ್ಲಿ ವಾಹನ ಸಂಚಾರದಿಂದಾಗಿ ಜನರು ಭಯದಲ್ಲಿ ಸಂತೆಗೆ ಆಗಮಿ ಸುವಂತಾಗಿದೆ. ಸಂತೆಗೆ ಪ್ರತ್ಯೇಕ ಜಾಗ ನೀಡಬೇಕೆಂಬುದು ಬಹುದಿನ ಬೇಡಿಕೆ ಇದ್ದರೂ, ಪಟ್ಟಣ ಪಂಚಾಯಿತಿಯವರು ಸಾರ್ವಜನಿಕರ ಬೇಡಿಕೆ ಯನ್ನು ಪರಿಗಣಿಸದೆ ಪ್ರತಿ ವರ್ಷ ಸಂತೆ ಹರಾಜು ಹಾಕಿ ಅಕ್ರಮ ಕರ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂತೆಗೆ ಪ್ರತ್ಯೇಕವಾಗಿ ಸ್ಥಳ ಕಾಯ್ದಿರಿಸುವಂತೆ ಕಳೆದೊಂದು ದಶಕದಿಂದಅನೇಕ ಬಾರಿಮನಏನೀಡಿದರೂ ಪ್ರಯೋಜನವಾಗಿಲ್ಲ, ಪಟ್ಟಣಪಂಚಾಯಿತಿ ಅಧಿಕಾರಿಗಳು ಸಾರ್ವಜನಿಕ ಸಂತೆಗೆ ಪ್ರತ್ಯೇಕ ಸ್ಥಳ ನೀಡದೆ ಹರಾಜು ಮಾಡಬಾರದು ಪ.ಪಂ ಮುಖ್ಯಾಧಿಕಾರಿ ಪಿ. ಬಸಣ್ಣ ಮಾತನಾಡಿ, ಪಟ್ಟಣದಲ್ಲಿ ಸಂತೆ ಮಾರುಕಟ್ಟೆ ಇಲ್ಲದಿರುವುದನ್ನು ಗಮನಿಸಿ ನೂತನ ಮಿನಿ ವಿಧಾನಸೌಧದ ಬಳಿ 3 ಎಕರೆ ಜಾಗದಲ್ಲಿ ಮೂರು ತಿಂಗಳಲ್ಲಿ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಪಪಂ ಅಧ್ಯಕ್ಷ ಪಿ. ಲಕ್ಷ್ಮಣ ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್ ಹಾಗೂ ಸದಸ್ಯರಾದ ಎಂ. ಬಸವರಾಜ್, ಮಂಜಣ್ಣ ಮೊದಲಾದವರು ಶೀಘ್ರ ಸಂತೆ ಮಾರುಕಟ್ಟೆ ನಿರ್ಮಿಸಲು ಸಹಮತ ವ್ಯಕ್ತಪಡಿಸಿದರು. ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಪದಾಧಿಕಾರಿಗಳಾದ ಕನಕ ಶಿವಮೂರ್ತಿ, ಡಿ.ಬಿ. ಕೃಷ್ಣಪ್ಪ ಕೆ. ಚಂದ್ರಣ್ಣ ದಾನಸೂರ ನಾಯಕ, ಮಂಜಣ್ಣ, ಈರಣ್ಣ ತಮ್ಮಣ್ಣ ಗೋಪಾಲ, ಗಂಗಣ್ಣ ನೀಲಪ್ಪ ತಿಮ್ಮಣ್ಣ ಮಲ್ಲಯ್ಯ, ಬಸವರಾಜ್, ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
