
ಒಪಿಡಿ ಸೇರಿಸಲು ಬಾಯಿ ತೆರೆದ ಚರಂಡಿ.
ಬಳ್ಳಾರಿ.ನಗರದ ಗ್ರಹಮ್ ರಸ್ತೆಯು ,ಚಿಕ್ಕ ಮಾರ್ಕೆಟ್
ಹೋಗುವ ರಸ್ತೆ ಇದಾಗಿದ್ದು.ವಡ್ಡ್ರಬಂಡ ದಿಂದ
ಬೆಂಗಳೂರ್ ರಸ್ತೆಗೆ ಹೋಗುವ ದಾರಿಯಲ್ಲಿ,
ರಾಧಾಕೃಷ್ಣ ಒಯಿಲ್ ಹೋಲ್ ಸೆಲ್ ಅಂಗಡಿಯ
ಎದುರಿಗೆ ಗ್ರಹಮ್ ರಸ್ತೆ ಚಿಕ್ಕ ಮಾರ್ಕೆಟ್ ಗೆ ಹೋಗುತ್ತದೆ,ಈ ರಸ್ತೆಯಲ್ಲಿ ಸುಮಾರು ಎರಡು ವರ್ಷ
ದಿಂದ ರಸ್ತೆಯ ಮಧ್ಯ ಭಾಗದಲ್ಲಿ ಸರಿಯಾಗಿ ಗುಂಡಿ ,ಬಿದ್ದಿದ್ದು ಆ ಗುಂಡಿಯಮೇಲೆ ಕಲ್ಲು ಬಂಡೆಯ
ನ್ನು ಮುಚ್ಚಿದ್ದರು, ಆದರೆ ಆ ಬಂಡೆ ತುಂಡಾಗಿ
ಗುಂಡಿ ಬಾಯಿ ತೆರೆದುಕೊಂಡಿದೆ.
ಈ ರಸ್ತೆಯ ಸವಾರರು ಸ್ವಲ್ಪ ಹ್ಯಾಮಾರಿದರೆ,ಗುಂಡಿಗೆ ಬಿದ್ದು ಪ್ರಾಣ ಕಳೆದು ಕೊಳ್ಳುವುದು ಖಚಿತ.
ಈ ವಿಡಿಯೋದಲ್ಲಿ ನೀವು ಸವಾರರನ್ನು ನೋಡ
ಬಹುದು ,ಅವರು ಒಂದು ವೇಳೆ ಗುಂಡಿಯನ್ನ ನೋಡದೆ ಹೋದರೆ ಖಂಡಿತ ಸಾವು ಕಟ್ಟಿಟ್ಟ ಬುತ್ತಿ.
ಈ ಗ್ರಹಮ್ ರಸ್ತೆ ಯಲ್ಲಿ ಅನೇಕ ಕಿರಾಣಿ ಅಂಗಡಿಗಳು ಇದ್ದು,ಅಂಗಡಿಗಳಿಗೆ ಸರಕು ಸಾಗಿಸುವಾಗ ,ಭಾರವನ್ನು ಹೊತ್ತ ಲಾರಿಗಳು ಈ
ರಸ್ತೆ ಇಂದ ಚಲಿಸಬೇಕಾಗಿರುತ್ತದೆ.ಚರಂಡಿಯ ಮೇಲೆ ಕಾಂಕ್ಟ್ರಿಟ್ ಹಾಕಿ ಕಟ್ಟಿದ್ದರೂ ರಸ್ತೆಯ
ಮಧ್ಯೆ ಗೊಂಡಿ ಬಿಟ್ಟಿರುವುದು ,ಈ ಎಲ್ಲಾ ಅಪಘಾತಗಳಿಗೆ ಕಾರಣ ವಾಗಿದ್ದು,ಲೋಕೋ
ಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆ
ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯ ಮೂಲಕ ಹಾದು ಹೋದರೂ ಈ ಗುಂಡಿಯ ಬಗ್ಗೆ ಗಮನವನ್ನು ಹರಿಸಿಲ್ಲ.
ಇನ್ನುಮುಂದೆ ಯಾದರೂ ಅಪಘಾತ ಸಂಭವಿಸ
ದಂತೆ ಸದರಿ ಗುಂಡಿಯನ್ನು ಮುಚ್ಚಿಸಿ,ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ, ಅನುಕೂಲ ಮಾಡಿಕೊಡುತ್ತಾರೆನೋ,ಕಾದು
ನೋಡಬೇಕಿದೆ ಎಂದು ಜನರ ಕೂಗು.
ವರದಿಗಾರರು.ಎಂ ಎಲ್.ವೆಂಕಟೇಶ್.ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
