;

ಕೂಡ್ಲಿಗಿ ಪಪಂ 2ವಾರ್ಡಗಳ ಚುನಾವಣೆ:ಪತ್ರಕರ್ತ ಸೇರಿದಂತೆ 7ಅಭ್ಯರ್ಥಿಗಳು ಕಣದಲ್ಲಿ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ ಪಪಂ 2ವಾರ್ಡಗಳ ಚುನಾವಣೆ:ಪತ್ರಕರ್ತ ಸೇರಿದಂತೆ 7ಅಭ್ಯರ್ಥಿಗಳು ಕಣದಲ್ಲಿ*-
ವಿಜಯನಗರ ಜಿಲ್ಲೆ ಕೂಡ್ಲಿಗಿ: ಸ್ಥಳೀಯ ಪಟ್ಟಣ ಪಂಚಾಯ್ತಿಯ 1 ಮತ್ತು 12ನೇ ವಾರ್ಡುಗಳಿಗೆ ಇದೇ 29ರಂದು ನಡೆಯಲಿರುವ ಉಪ ಚುನಾವಣೆಗೆ ಬುಧವಾರ ಒಟ್ಟು 7 ನಾಮ ಪತ್ರಗಳು ಸಲ್ಲಿಕೆಯಾಗಿವೆ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ 1ನೇ ವಾರ್ಡಿಗೆ 3 ನಾಮ ಪತ್ರ ಸಲ್ಲಿಕೆಯಾಗಿದ್ದು, ಕೆ. ಲಿಲಾವತಿ(ಕಾಂಗ್ರೆಸ್), ಎಂ.ವಿ. ಪ್ರಕಾಶ(ಬಿಜೆಪಿ), ಬಿ. ನಾಗರಾಜ(ಜೆಡಿಎಸ್) ನಾಮ ಪತ್ರ ಸಲ್ಲಿಸಿದ್ದಾರೆ.
ಸಮಾನ್ಯ ಮಹಿಳೆಗೆ ಮೀಸಲಾಗಿರುವ 12ನೇ ವಾರ್ಡ್‍ಗೆ ಒಟ್ಟು 4 ನಾಮ ಪತ್ರ ಸಲ್ಲಿಕೆಯಾಗಿದ್ದು, ಬಿ. ಸರಸ್ವತಿ(ಜೆಡಿಎಸ್), ಕೆ. ಮಲ್ಲಮ್ಮ(ಬಿಜೆಪಿ), ಎ. ರೂಪಾ( ಕಾಂಗ್ರೆಸ್) ಹಾಗೂ ಪಕ್ಷೇತರ ಅಭ್ಯಾರ್ಥಿಯಾಗಿ ಕೆ. ವಾಣಿ ನಾಮ ಪತ್ರ ಸಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ವಾಮದೇವ ಕೊಳ್ಳಿ ತಿಳಿಸಿದ್ದಾರೆ.
ಪತ್ರಕರ್ತ ಬಿ.ನಾಗರಾಜ ಕಣದಲ್ಲಿ: ಪ್ರಮುಖ ದಿನ ಪತ್ರಿಕೆಯ ವರದಿಗಾರ ಬಿ. ನಾಗರಾಜ ಜೆಡಿಎಸ್ ನಿಂದ 1ನೇ ವಾರ್ಡಿಗೆ ನಾಮ ಪತ್ರ ಸಲ್ಲಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ನಿನ್ನೆ ರಾತ್ರಿಯವರೆಗೂ ಇವರ ಹೆಸರು ಪ್ರಾಸ್ತಾವನೆಯಲ್ಲಿ ಇಲ್ಲದೆ ಇದ್ದರೂ ಬೆಳಿಗ್ಗೆ ಏಕಾ ಏಕಿ ನಾಮ ಪತ್ರ ಸಲ್ಲಿಕೆಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.
ಈ ಸಂದರ್ಭದಲ್ಲಿ ಪತ್ರಕರ್ತ ನಾಗರಾಜ ಮಾತನಾಡಿದರು,ನನ್ನ ಜನಸೇವೆ ನೋಡಿ ಹಾಗೂ ಪತ್ರಕರ್ತರೊಬ್ಬರು ಜನ ಪ್ರತಿನಿಧಿಯಾಗಲಿ ಎಂದು ಜೆಡಿಎಸ್ ಪಕ್ಷದಿಂದ ನನಗೆ ಅವಕಾಶ ನೀಡಲಾಗಿದ್ದು,ಗೆದ್ದರು, ಸೋತರು ಜನ ಸೇವೆ ಮುಂದುವರೆಯುತ್ತೇನೆಂದು ಪತ್ರಕರ್ತ ಬಿ. ನಾಗರಾಜ ನುಡಿದಿದ್ದಾರೆ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;