ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ .8. 3. 2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.:—– ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ ಮತ್ತು ಮಕ್ಕಳ ಸ್ನೇಹಿ ಹಾಗೂ ಓದುವ ಬೆಳಕು ಗ್ರಾಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು* > ಓದುವ ಬೆಳಕು ಮತ್ತು ಮಕ್ಕಳ ಸ್ನೇಹಿ ಹಾಗೂ ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ ಆಚರಣೆ ಮಾಡಲಾಯಿತು. ನಂತರ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು. ಸ.ಹಿ.ಪ್ರಾ .ಶಾಲೆಯ ಮುಖ್ಯ ಶಿಕ್ಷಕರಾದ ಸೋಮಶೇಖರಪ್ಪ ಇವರು ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಮಾತನಾಡಿ ಕೋವಿಡ್ ಭೀತಿಯಿಂದಾಗಿ ಶಾಲೆಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ “ಮಕ್ಕಳ ಸ್ನೇಹಿ ಗ್ರಾಪಂ’ ಅಭಿಯಾನದಡಿ ಓದುವ ಬೆಳಕು ಯೋಜನೆ ಜಾರಿ ಮಾಡಲಾಗಿದ್ದು.ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಣ್ಣುಮಕ್ಕಳು 80 ರಿಂದ 100 ಹಾಗೂ ಗಂಡುಮಕ್ಕಳು 70ರಿಂದ 90 ಮಕ್ಕಳು ಇದ್ದು ಶಾಲೆಯಲ್ಲಿ ಯಾವುದೇ ತರಹದ ಆಟದ ಮೈದಾನ ಇಲ್ಲ, ಮಕ್ಕಳಿಗೆ ಗ್ರಂಥಾಲಯ ವ್ಯವಸ್ಥೆ ಇಲ್ಲ, ಸೈನ್ಸ್ ಪ್ರಾಜೆಕ್ಟ್ ಸಾಮಗ್ರಿಗಳು ಇಲ್ಲ, ಶೌಚಾಲಯ ನಿರ್ಮಾಣವಾಗಿಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ,ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದರು. ಮಕ್ಕಳ ಮಾನಸಿಕ, ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಓದುವ ಬೆಳಕು ಕಾರ್ಯಕ್ರಮವನ್ನು ರೂಪಿಸಿದೆ ಪ್ರತಿ ವಿದ್ಯಾರ್ಥಿ ಸಾಧನೆಯ ದೊಡ್ಡ ಕನಸು ಮತ್ತು ಗುರಿಯನ್ನು ಹೊಂದಿರಬೇಕು ಇದನ್ನು ಸಾರ್ಥಕಗೊಳಿಸಲು ಸತತ ಪರಿಶ್ರಮ ನಿರಂತರ ಓದು ಮಕ್ಕಳದಾಗಬೇಕು ಮಕ್ಕಳು ಕೇವಲ ಸರಕಾರಿ ಕೆಲಸ,ಪರಿಕ್ಷೆಯ ಅಂಕಗಳಿಗೆ
ಓದಬಾರದು ಜ್ಞಾನ, ಸಂಸ್ಕಾರ, ಸಮಾಜದ ಅರಿವಿಗಾಗಿ ನಮ್ಮನ್ನು ನಾವು ತಿಳಿದುಕೊಳ್ಳಲು ಓದಬೇಕು. ಓದುವ ಬೆಳಕು ಮತ್ತು ಮಕ್ಕಳ ಸ್ನೇಹಿ ಹಾಗೂ ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಹೇಳಿದರು. ಹೆಣ್ಣು ಎಂಬುದು ಶಕ್ತಿ… ಹೆಣ್ಣು ಇಲ್ಲದೆ ಈ ಜಗವೇ ಇಲ್ಲ..ಹೀಗೆ ತಮ್ಮ ದಣಿವರಿಯದೆ ಕೆಲಸ, ನಿಸ್ವಾರ್ಥ ಪ್ರೀತಿ, ಕಾಳಜಿಯ ಕಾರಣದಿಂದ ಎಲ್ಲರ ಬದುಕಿಗೂ ಸ್ಫೂರ್ತಿಯಾದ ಮಹಿಳೆಗೆ ಧನ್ಯವಾದ ಹೇಳುವ ದಿನವೇ ಮಾರ್ಚ್ 8. ಈ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ. ಅಭಿವೃದ್ಧಿ ಅಧಿಕಾರಿಗಳು ಮಂಹಾತೇಶ್, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕರಿಬಸಮ್ಮ ದುರ್ಗಪ್ಪ, ಉಪಾಧ್ಯಕ್ಷರು ರಘು, ಗ್ರಾಮ ಪಂಚಾಯತಿ ಸದಸ್ಯರುಗಳು ಅಜ್ಜಣ್ಣ, ಸುಂದರಮ್ಮ ಮಲ್ಲಿಕಾರ್ಜುನ್, ಪುಟ್ಟಮ್ಮ ಮಲ್ಲಿಕಾರ್ಜುನ್, ನಾಗಮ್ಮ, ಕಾಟಯ್ಯ, ಎಲ್ಲಾ ಸದಸ್ಯರು ಉಪಸ್ಥಿತರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ನರಸಿಂಹ ರೆಡ್ಡಿ, ಮಚ್ಚೇಂದ್ರಪ್ಪ, ಮಂಜುಳಮ್ಮ, ಎಸ್ಡಿಎಂಸಿ ಅನ್ನಪೂರ್ಣಮ್ಮ, ಗೋವಿಂದಪ್ಪ, ಮಹಾಂತೇಶ್, ಶಾಂತಮ್ಮ, ರವಿಕುಮಾರ್, ಕಂಪಳ ರಂಗ ಸ್ವಾಮಿ ಪ್ರೌಢಶಾಲೆ ಮುಖ್ಯಗುರುಗಳು ಅಜ್ಜಪ್ಪ, ಕಾರ್ಯದರ್ಶಿ ಚಂದ್ರಪ್ಪ , ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ ಹಾಗೂ ಸಿಬ್ಬಂದಿ ವರ್ಗದವರು, ಗ್ರಂಥಾಲಯ ಮೇಲ್ವಿಚಾರಕರು ತುಡುಮ ಗುರುರಾಜ್, ಎಸ್ಡಿಎಂಸಿ ಅಧ್ಯಕ್ಷರು ಚೀನಯ್ಯ, ಎಸ್ಡಿಎಂಸಿ ಸದಸ್ಯರು ಟಿಕೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಎಚ್ಚರಿಕೆ ಪತ್ರಿಕಾ ವರದಿಗಾರ ಮಂಜುನಾಥ ಹೂಡೇಂ, ವಿ,ರಾಮಚಂದ್ರಪ್ಪ ಸದಸ್ಯರು ಹೂಡೇಂ,.ಆರ್.ಡಬ್ಲ್ಯೂ ಕುಮಾರಿ ಸಲ್ಮಾ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಆರು ಹಳ್ಳಿಯ ಶಾಲಾ ಮಕ್ಕಳು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರು ಹಾಗೂ ತಾಲೂಕ್ ಪಂಚಾಯಿತಿ ಸದಸ್ಯರು ಪಾಪನಾಯಕ ಹೂಡೇಂ ಕ್ಷೇತ್ರ. ಇವರು ಕೂಡ ಭಾಗವಹಿಸಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
