ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಳಿಗೆ ಅಯವ್ಯಯದಲ್ಲಿ ಪ್ರಾಶಸ್ತ್ರ ನೀಡಿ ವಿವಿಧ ಕಾಮಗಾರಿಗಳ ಮೂಲಕ ಶ್ರಮಿಸಲಾಗುವುದು ಪ.ಪಂ.ಅಧ್ಯಕ್ಷ ಲಕ್ಷ್ಮಣ ತಿಜಿಸಿದರು. ವ್ಯಾಪ್ತಿಯ ವ್ಯಾಪಾರ ಮಳಿಗೆಗಳ ಬಾಡಿಗೆಯ ಬಾಕಿ 16.65 ಲಕ್ಷ ರೂ. ಸೇರಿದಂತೆ ಇನ್ನಿತರ ಆದಾಯ ಮೂಲಗಳು ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಸಮಗ್ರ ಅಭಿವೃದ್ಧಿ ಶ್ರಮಿಸಲಾಗುವುದು ಎಂದು ಪಪಂ ಅಧ್ಯಕ್ಷ ಪಿ. ಲಕ್ಷ್ಮಣ ಭರವಸೆ ನೀಡಿದರು. ಪಟ್ಟಣದ ಪಂಚಾಯಿತಿ ಸಭಾಂಗಣದಲ್ಲಿ 2021-12ನೇ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ವಿಪಂನ ವ್ಯಾಪಾರ ಮಳಿಗೆಗಳ ಕೆಲ ಬಾಡಿಗೆದಾರರು ಸಕಾಲಕ್ಕೆ ಬಾಡಿಗೆ ಕಟ್ಟದೆ. ಹೆಚ್ಚಿನ ಬಾಡಿಗೆಯನ್ನು ಉಳಿಸಿಕೊಂಡಿದ್ದು ಬಾಕಿ ಬಾಡಿಗೆ ಹಣವನ್ನು ಕೂಡಲೇ ವಸೂಲಾತಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದೆಂದು ತಿಳಿಸಿದರು. ನವಂನ ಮುಖ್ಯಾಧಿಕಾರಿ ಪಿ.ಬಸಣ್ಣ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪಪಂನ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಮುಖ್ಯ ಅಂಶಗಳನ್ನು ಪರಿಗಣಿಸಿ ಆಯವ್ಯಯ ಮಂಡನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಕಂದಾಯ ಮೂಲಗಳಿಂದ ಬರುವ 5.75 ಕೋಟಿ.ರೂ, ರಾಜ್ಯ ಸರ್ಕಾರದಿಂದ ಬರುವ ಬಂಡವಾಳ 2 ಲಕ್ಷ ರೂ. ಹಾಗೂ ತೆರಿಗೆ ವಿಧಿಸಲಾಗುತ್ತದೆ, ವಾಣಿಜ್ಯ ಮಳಿಗೆಗಳು, ಸೇರಿದಂತೆ ನಿಯಮಾನುಸಾರ ಕೆಲವು ಬಗೆಗಳ ವಸೂಲಾತಿಯನ್ನು ಗಮನದಲ್ಲಿಟ್ಟುಕೊಂಡು 1.20 ಕೋಟಿ ತೆರಿಗೆ ನಿರೀಕ್ಷೆಯೊಂದಿಗೆ ಮುಂದಿನ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ ತುಂಗಾ ಹಿನ್ನೀರು, ಕೋತಲಾಗೊಂದಿ ಕೆರೆ ಇತರ ಕುಡಿಯುವ ನೀರನ್ನು ಶೇಖಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಸದಸ್ಯ ಟಿ.ಟಿ.ರವಿಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಹೊಸ ಕಟ್ಟಡ ಹಾಗೂ ವ್ಯಾಪಾರ ಮಳಿಗೆಗಳು ಸೇರಿದಂತೆ ಕಂದಾಯ ಜಾಸ್ತಿಯಾಗುತ್ತದೆ. ಸರ್ಕಾರದಿಂದ ವತಿಯಿಂದ ಹೆಚ್ಚಿನ ಅನುದಾನ ಪಡೆದು ಪ್ರಗತಿಗೊಳಿಸಬೇಕಾಗಿದೆ ಎಂದು ತಿಳಿಸಿದರು, ಇದಕ್ಕೆ ಸದಸ್ಯ ಎಂ. ಅಬ್ದುಲ್ಲಾ ರವರು ಸಹಮತ ವ್ಯಕ್ತಪಡಿಸಿದರು. ಸದಸ್ಯೆ ರೂಪಾ ಮಾತನಾಡಿ, ಪಟ್ಟಣದಲ್ಲಿ 4ನೇ ವಾರ್ಡ್ ನಲ್ಲಿ ಅಂಗನವಾಡಿ ಶಾಲೆ ಸೌಲಭ್ಯ ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷೆ ಶುಭ ಡಿಶ್ರಾಜ್, ಸದಸ್ಯರಾದ ಟಿ.ಟಿ.ರವಿಕುಮಾರ್, ಖಾನ್, ಎಂ.ಆಲ್ಲಾ ನಬಿಲ್ ಅನ್ಸಾರ್, ಕೆ.ತಿಪ್ಪೇಸ್ವಾಮಿ, ಮಂಜಣ್ಣ ಲೀಲಾವತಿ, ಚಿತ್ತಮ್ಮ, ಪದ್ದಾವತಿ, ಲಕ್ಷ್ಮೀದೇವಿ, ಕೃಷ್ಣಮೂರ್ತಿ, ಎನ್.ದೇವೇಂದ್ರಪ್ಪ ಕೃಷ್ಣಮೂರ್ತಿ, ರವಿ ರೂಪ, ವಿಜಯಲಕ್ಷ್ಮಿ, ಪಪಂನ ಅಭಿಯಂತರ ರೇವಣಸಿದ್ದಪ್ಪ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಬಸಣ್ಣ ನೇತ್ರಾವತಿ, ವನ್ನೋಬಳಿ, , ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
