;

2ಎ ಮೀಸಲಾತಿ ಹೋರಾಟಗಾರರಿಗೆ, “ಕೂಡ್ಲಿಗಿ ಐಬಿಯಲ್ಲಿ ಧರಣಿಗಾಗಿ ಗರಡಿ”

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಮಾ4ರ 2ಎ ಮೀಸಲಾತಿ ಹೋರಾಟಗಾರರಿಗೆ, “ಕೂಡ್ಲಿಗಿ ಐಬಿಯಲ್ಲಿ ಧರಣಿಗಾಗಿ ಗರಡಿ”*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ,ಬೆಂಗಳೂರಲ್ಲಿ ಪಂಚಮ ಸಾಲಿ ಜಗದ್ಗುರುಗಳ ನೇತೃತ್ವದಲ್ಲಿ 2ಎ ಮೀಸಲಾತಿ ಹೋರಾಟದಲ್ಲಿ.ಮಾ 4 ಪಂಚಮಸಾಲಿ ಸಮಾಜದ ಧರಣಿ ಸತ್ಯಾಗ್ರಹದಲ್ಲಿ,ಸ್ವಯಂ ಪ್ರೇರಣೆಯಿಂದ ಭಾಗವಹಿಸಲಿಚ್ಚಿಸುವ ಯುವ ಉತ್ಸಾಯಿ ಹೋರಾಟಗಾರರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆ ಕಾಯ್ದುಕೊಂಡು,ಧರಣಿ ಸತ್ಯಾಗ್ರಹ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ತಾಲೂಕಿನ ಮುಖಂಡರು ಪ್ರಾಮಣಿಕ ಪ್ರಯತ್ನ ಮಾಡಿದ್ದಾರೆ. ಪ್ರಯತ್ನಿಸಲಾಗಿದೆ.ಆಸಕ್ತ ಉತ್ಸಾಹಿಗಳ ಸಹಭಾಗಿತ್ವಕ್ಕಾಗಿ ಸೆಳವಯುವ ಅಗತ್ಯ ಯೋಜನೆಗಳನ್ನ ಹಾಕಿಕೊಂಡು, ಗರಡಿ ಮನೆಯೋಪಾದಿಯಲ್ಲಿ ಕಟ್ಟಾಳುಗಳನ್ನ ತಯಾರಿ ಮಾಡಲು ಮುಖಂಡರಾದ ಗುಂಡುಮುಣುಗು ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಮಾಜದ ಮುಖಂಡರು ಅಗತ್ಯ ಪೂರ್ವ ತಯಾರಿಯನ್ನ ಗರಡಿ ಮನೆಯೋಪಾದಿಯಲ್ಲಿ ನಡೆಸಿದರು.ಬೆಂಗಳೂರಲ್ಲಿ ಜರುಗುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು,ಮುಂಚಿತವಾಗಿ ಮಾಹಿತಿ ನೀಡಿದ್ದಲ್ಲಿ ಅಗತ್ಯ ವಾಹನ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು.ತಾಲೂಕು ಪಂಚಮಸಾಲಿ ಹಿರಿಯ ಮುಖಂಡರಾದ ಗುಂಡುಮುಣುಗು ತಿಪ್ಪೇಸ್ವಾಮಿ ಸಭೆಗೆ ತಿಳಿಸಿದರು.
*ಅಂಚೆ ಪತ್ರದ ಮೂಲಕ ಹಕ್ಕೊತ್ತಾಯ ಚಳುವಳಿ*-ಮೀಸಲ‍ಾತಿ ಹೋರಾಟದ ಅಂಗವಾಗಿ ಪತ್ರ ಚಳುವಳಿಗೆ ಚಾಲನೆ ನೀಡಲ‍ಾಗುವುದು,ಅದಕ್ಕಾಗಿ ಅಂಚೆ ಪತ್ರಗಳನ್ನ ಸ್ಥಳೀಯ ಅಥವಾ ಹತ್ತಿರದ ಅಂಚೆ ಕೇಂದ್ರಗಳಿಗೆ ತೆರಳಿ.ಸಾಮರ್ಥ್ಯಕ್ಕನುಗುಣವಾಗಿ ಅಂಚೆ ಕಾರ್ಡ್ ಖರೀದಿ ಮಾಡಬೇಕು,ಅದರಲ್ಲಿ ಸರ್ಕಾರಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ. ಪತ್ರ ಬರೆದು ಪೋಸ್ಟ್ ಗೆ ಹಾಕಬೇಕು.ಅದರಲ್ಲಿ ಅಗತ್ಯವಿರುವ ಅಂಶಗಳನ್ನು ಉಲ್ಲೇಖಿಸಿ ಪತ್ರ ಬರೆಯಬೇಕಿದೆ,ನೇರವಾಗಿ ಮುಖ್ಯಮಂತ್ರಿಗಳ ಕಚೇರಿ ವಿಧಾನ ಸೌಧದ ವಿಳಾಸಕ್ಕೆ ವಿಧಾನ ಪತ್ರಚಳುವಳಿ ಸಾಮೂಹಿಕವಾಗಿ ಪ್ರಯತ್ನಿದರೆ ಯಶಸ್ಸು ಸಾಧ್ಯ ಎಂದು
ಗುಂಡು ಮುಣುಗು ತಿಪ್ಪೇಸ್ವಾಮಿ ಸಭೆಗೆ ಮನವರಿಕೆ ಮಾಡಿಕೊಟ್ಥರು.ಟಿ.ಜಿ.ಮಲ್ಲಿಕಾರ್ಜುನಗೌಡ,ಗುಳಿಗಿ ವೀರೇಂದ್ರ ಕುಮಾರ,ತರಕಾರಿ ರೇವಣ್ಣ,ಮರುಳಸಿದ್ದಪ್ಪ,ಕಕುಪ್ಪಿ ರಜನಿಕಾಂತ್,ನಂದಿ ಬಸವರಾಜಪ್ಪ,ಸುನೀಲ್ ಗೌಡ,ಚನ್ನಬಸಪ್ಪ,ರೇವಣಸಿದ್ದಪ್ಪ,ವೀರಭದ್ರಪ್ಪ,ಕರಿಬಸಪ್ಪ,ಸಿದ್ಲಿಂಗಪ್ಪ,ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ವಿವಿದ ಭಾಗದಿಂದ ಆಗಮಿಸಿದ್ದ,ಪಂಚಮಸಾಲಿ ಸಮಾಜದ ಮುಖಂಡರು ಬಾಂಧವರು ಪೂರ್ವ ಭಾವಿ ಸಭೆಯಲ್ಲಿ ಭಾಗಿಯಾಗಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;