ವರದಿ. ಧನಂಜಯ್

*ಸಾಮಾಜಿಕ ಭದ್ರತಾ ಮಾಸಾಶನ 300ಸಾವಿರಕ್ಕೆ ಹೆಚ್ಚಿಸಿ-ಹೋರಾಟಗಾರ್ತಿ ಜಿ.ಸರೋಜ ಆಗ್ರಹ*-ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ:
ಲಾಕ್ ಡೌನ್ ನಿಂದಾಗಿ ಹಾಗೂ ಬೆಲೆ ಏರಿಕೆಯಿಂದಾಗಿ ಜೀವನ ದುಸ್ಥರವಾಗಿದೆ,ಕಾರಣ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ನೀಡುವ ಮಾಸಾಶನ್ನು.ಮಾಸಿಕ ತಲಾ 300ರೂಗೆ ಹೆಚ್ಚಿಸಬೇಕೆಂದು ಜನವಾದಿ ಮುಖಂಡರಾದ ಹೋರಾಟಗಾರ್ತಿ ಜಿ.ಸರೋಜಾ ಆಗ್ರಹಿಸಿದ್ದಾರೆ,
ವೃದ್ಧರು,ವಿಕಲಾಂಗರು,ವಿಧವೆಯರು,ಸಾಮಾಜಿಕ ಭದ್ರತೆಯ ಹಣದಲ್ಲೇ ಬದುಕುವಂತಹ ಜೀವಗಳಿಗೆ.ಸರ್ಕಾರ ನೀಡುತ್ತಿರುವ ಹಣ ಸಾಲದು ಕಾರಣ ದಿನೇ ದಿನೇ ಗಗನಕ್ಕೇರುತ್ತುರುವ ಅಗತ್ಯ ವಸ್ಥುಗಳ ಬೆಲೆ ಏರಿಕೆಯಾಗಿದೆ. ಕಾರಣ ಶೀಘ್ರವೇ ಹಣದ ಮೊತ್ತವನ್ನು ಮಾಸಿಕ 300ರೂಗೆ ಹೆಚ್ಚಿಸಬೇಕಿದೆ.ನಿರ್ಲಕ್ಷ್ಯ ತೋರಿದ್ದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಈ ಮೂಲಕ ಹಗರಿಬೊಮ್ಮನಹಳ್ಳಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿಯಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದೆ.
ಜನವಾದಿ ಮಹಿಳಾ ಮುಖಂಡರು ಉಪ ತಹಶಿಲ್ದಾರರಾದ ಶ್ವೇತಾರವರಿಗೆ ಮನವಿ ನೀಡಿದರು.ಹೋರಾಟಗಾರರಾದ ಕೆ.ಪಾಯಲ್ ಬಾನು,ಜಲಜಾಕ್ಷಿ, ಬಿ.ಪೆದ್ದಮ್ಮ, ಹುಲಿಗೆಮ್ಮ, ಚನ್ನಬಸಮ್ಮ, ಕೆ.ಫಾತೀಮಾ ಬೇಹಲಗಮ್ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
