ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಆಸಕ್ತಿ,ಗುರಿ,ಶ್ರಮ,ಛಲ,ಸಾಧನೆಗೆ ಸಾಧನಗಳು-IPS ರವಿ.ಡಿ ಚನ್ನಣ್ಣನವರ್*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮೇನ್ ಬಾಯ್ಸ್ ಸ್ಕೂಲ್ ಆವರಣದಲ್ಲಿ, ಫೆ27ರಂದು ಜರುಗಿದ ಹಿರಿಯ ಪತ್ರಕರ್ತ ಲೇಖಕರಾದ ಹಿ.ಮ.ಬಸವರಾಜ ರವರ “ಉರಿಲಿಂಗಪೆದ್ದಿ”ಕೃತಿಯನ್ನು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣನವರ್ ಲೋಕಾರ್ಪಣೆ ಮಾಡಿದರು.ಅವರು ನೆರೆದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಮುಖ್ಯ ಜೊತೆಗೆ ಗುರಿಯನ್ನ ಹೊಂದಿರಬೇಕು,ಶ್ರಮದೊಂದಿಗೆ ಛಲ ಜೊತೆಗಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. *ಜಂಗಮಸೋವೆನಹಳ್ಳಿಯ ನಂದಿ ಪ್ರಕಾಶನ ಆಯೋಜಿಸಿದ್ದ ಲೇಖಕ ಹಿ.ಮ.ಬಸವರಾಜ ಅವರ “ಉರಿಲಿಂಗಪೆದ್ದಿ”ಕೃತಿ ಲೋಕಾರ್ಪಣೆಗೊಳಿಸಿ ನಂತರ ಮಾತನಾಡಿದರು*-ವಿದ್ಯಾರ್ಥಿಗಳು 25 ವರ್ಷ ಯೋಜನೆ ಹಾಕಿಕೊಂಡು ಗುಣಮಟ್ಟದ ಶಿಕ್ಷಣ ಪಡೆದರೆ ಮುಂದಿನ 75 ವರ್ಷಗಳು ಉತ್ತಮ ಜೀವನ ನಡೆಸಬಹುದು ಎಂಬ ಛಲದಿಂದ ಸಾಧನೆ ಮಾಡಬೇಕು ಆಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿರಲು ಸಾಧ್ಯ ಎಂದರು. ಇಂದು ಜಗತ್ತನ್ನು ಜ್ಞಾನ ಆಳುತ್ತದೆ ಹೊರತೂ ಖಡ್ಗದಿಂದ ಆಳಲು ಸಾಧ್ಯವಿಲ್ಲ. ಹಿಂದೆ ರಾಜರು ತಮ್ಮ ತೋಳ್ಬಲ, ಖಡ್ಗದಿಂದ ಜಗತ್ತನ್ನು ಗೆದ್ದು ಸೋತ ರಾಜರನ್ನು ಸಾಮಂತರನ್ನಾಗಿ ಮಾಡಿಕೊಂಡು ಕಪ್ಪಕಾಣಿಕೆ ಪಡೆಯುತ್ತಿದ್ದರು ಆದರೆ ಇಂದು ಶಿಕ್ಷಣ ಮಾತ್ರ ಎಲ್ಲ ಸಮಸ್ಯೆಗೆ ಪರಿಹಾರ ಮತ್ತು ಬಿಡುಗಡೆಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣನವರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ದಲಿತರಿಗೆ, ಶೋಷಿತರಿಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ದೊರೆತಿದೆ ಇನ್ನೂ ಆರ್ಥಿಕ, ರಾಜಕೀಯ, ಸಾಮಾಜಿಕ ಸ್ವಾತಂತ್ರ್ಯ ದೊರೆತಿಲ್ಲ ಈಗಾಗಿಯೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಎಲ್ಲಿಯವರೆಗೂ ದಲಿತರಿಗೆ ಆರ್ಥಿಕ, ಸಾಮಾಜಿಕ ಸಾಂಸ್ಕ್ರುತಿಕ ಸ್ವಾತಂತ್ರ್ಯ ಸಿಗುವುದಿಲ್ಲವೋ ಅಲ್ಲಿಯವರೆಗೂ ದಲಿತರ ಉದ್ದಾರ ಅಸಾಧ್ಯ ಎಂದು ತಿಳಿಸಿದ್ದರು ಇಂದು ಸಮಾಜದಲ್ಲಿ ಶಿಕ್ಷಣದ ಮೂಲಕ ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು. ಹಂಪಿ ವಿಶ್ವವಿದ್ಯಾಲಯದ ಡಾ. ನಂದೀಶ್ವರ ದಂಡೆ ಮಾತನಾಡಿ 12ನೇ ಶತಮಾನದ ಕಳ್ಳತನ ಮಾಡುತ್ತಿದ್ದ,ವ್ಯಕ್ತಿಯೊಬ್ಬ ತನ್ನ ಅದಮ್ಯ ಭಕ್ತಿಯಿಂದ ಶರಣನಾಗಿದ್ದ ಉರಿಲಿಂಗಪೆದ್ದಿ ಅಪರೂಪದ ಶರಣನಾಗಿದ್ದು
.ಜ್ಯೋತಿರ್ಲಿಂಗಪದ ಪರ್ಯಾಯವಾಗಿ ಉರಿಲಿಂಗ ಎಂಬ ಸಂಸ್ಕ್ರುತಿ ಹುಟ್ಟಿಕೊಂಡಿದ್ದು ಈ ಮೂಲಕ 12ನೇ ಶತಮಾನದಲ್ಲಿ ಸಾಮಾಜಿಕ ಚಳುವಳಿಯನ್ನೇ ಮಾಡಿದರು,ಅಲಕ್ಷಿತ ಶರಣನ ಬಗ್ಗೆ ಹಿ.ಮ.ಬಸವರಾಜ ಕೃತಿ ರಚಿಸಿರುವುದು ಶ್ಲಾಘನೀಯವಾದದ್ದು ಎಂದರು. ಕಾರ್ಯಕ್ರಮದಲ್ಲಿ ಕೂಡ್ಲಿಗಿ ಹಿರೇಮಠ ಶ್ರೀ ಪ್ರಶಾಂತಸಾಗರ ಶಿವಾರ್ಯರು ಸಾನಿಧ್ಯವಹಿಸಿದ್ದರು. ಸಂಡೂರಿನ ಶ್ರೀಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ನಂದಿ ಪ್ರಕಾಶನದ ನಂದಿ ಬಸವರಾಜ, ಚಲನಚಿತ್ರ ನಟ ಬಂಗಾರು ಹನುಮಂತು, ದ.ಸಂ.ಸಮಿತಿ ವಿಜಯನಗರ ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ವಾಲ್ಕೀಕಿ ಮಹಾಸಭಾದ ತಾಲೂಕ ಅಧ್ಯಕ್ಷ ಸುರೇಶ್ ವಿಕ್ಟರಿ,ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ,ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಟಿ.ಜಿ.ನಾಗರಾಜಗೌಡ, ಪಂಚಮಸಾಲಿ ಸಮಾಜದ ಅಧ್ಯಕ್ಷ ಹೆಚ್.ರೇವಣ್ಣ,ಗುಂಡುಮುಣಗು ಪ್ರಕಾಶ್,ತಾ.ಪಂ.ಸದಸ್ಯ ಹೂಡೇಂ ಪಾಪನಾಯಕ,ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ನಾಗರಾಜ,ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಂ.ರವಿಕುಮಾರ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ,ತಳವಾರ ಶರಣಪ್ಪ, ವಿ.ಗೀತಾ,ಎ.ಎಂ.ವೀರಯ್ಯ,ಗೌಡ್ರ ಕೊಟ್ರೇಶ್,ಕೆ.ಎಸ್.ವೀರೇಶ್ ಮುಂತಾದವರು ಉಪಸ್ಥಿತರಿದ್ದರು. ಲೇಖಕ ಹಿ.ಮ.ಬಸವರಾಜ ಪ್ರಾಸ್ತವಿಕವಾಗಿ ಮಾತನಾಡಿದರು. ತಿಂದಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜಗದೀಶ್ಚಂದ್ರ ಬೋಸ್ ನಿರೂಪಿಸಿದರು,ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
