ಮಲ್ಲೂರಹಳ್ಳಿ: ನಮ್ಮ ನಡೆ ತ್ಯಾಜ್ಯ ಮುಕ್ತ ಕಡೆಗೆ ಎನ್ನುವ ಕಾರ್ಯಕ್ರಮದಲ್ಲಿ: ರಂಗೋಲಿ ಸ್ಪರ್ಧೆ.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಇಂದು ಫೆ-8-2021 ರ ನಡೆದ ನಮ್ಮ ನಡೆ ತ್ಯಾಜ್ಯ ಮುಕ್ತ ಕಡೆಗೆ ಎನ್ನುವ ಕಾರ್ಯಕ್ರಮದಲ್ಲಿ ವಿವಿಧ ಬಣ್ಣಗಳ ಬೆಳಕಿನಿಂದ ಕಂಗೊಳಿಸುತ್ತದೆ. ಪಂಚಾಯಿತಿ ಆವರಣದಲ್ಲಿ ಅಂಗಣವೆಲ್ಲ ವರ್ಣಮಯವಾಗಿತ್ತು. ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಮೂಡಿದವು. ರಂಗೋಲಿ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಮೊದಲನೆ ಬಹುಮಾನ 300, ಎರಡನೇ ಬಹುಮಾನ 200, ಮೂರನೇ ಬಹುಮಾನ 200 ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಹೊನ್ನೂರಪ್ಪ ಎಂ, ಕಾರ್ಯದರ್ಶಿ ನೇತ್ರಾವತಿ, ಬಿಲ್ ಕಲೆಕ್ಟರ್ ಪರ್ವತಯ್ಯ, ಮಲ್ಲೂರಹಳ್ಳಿ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು, ಕನಕ, ಪಾಲಾಕ್ಷಮ್ಮ ಸನತ, ಸುಜಾತ, ಮಲ್ಲಮ್ಮ, ಊರಿನ ಮಕ್ಕಳು ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು. ರಂಗೋಲಿ ಸ್ಪರ್ಧೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend