ವರದಿ. ವಿರೇಶ್, ಸಿರಿಗುಪ್ಪ

*ಹಳೇಕೋಟೆ ಗ್ರಾಮ ಪಂಚಾಯಿತಿ ಸಾಮ್ಯಾನ ಸಭೆ . ಸಿರುಗುಪ್ಪ ತಾಲೂಕಿನ ನಂ 64 ಹಳೇಕೋಟೆ ಗ್ರಾಮ ಪಂಚಾಯಿತಿಯಲ್ಲಿ. 08/2/2021 ರಂದು ನಡೆದ ಸಾಮ್ಯಾನ ಸಭೆಯಲ್ಲಿ ನೂತನ ಅಧ್ಯಕ್ಷರ ಹಾಗೂ ಪಿ.ಡಿ.ಓ ಅವರ ನೇತೃತ್ವದಲ್ಲಿ ನಡೆಯಿತು. 2021-22 ರ ಸಾಲಿನ ನೂತನ ಸರ್ವ ಸದಸ್ಯರೊಟ್ಟಿಗೆ ಮೊದಲ ಸಾಮಾನ್ಯ ಸಭೆ ಆರಂಭಿಸಿದರು.ಮೊದಲಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ.ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸನ್ಮಾನ ಮಾಡಿದರು.ಉಪಾಧ್ಯಕ್ಷ ನರಸಮ್ಮರಿಂದ್ದ ಅಧ್ಯಕ್ಷ ಮಾರೇಮ್ಮರಿಗೆ ಶಾಲು ಹೂವಿನಹಾರ ಹಾಕಿದರು ಅದೇ ರಿತಿ ಅಧ್ಯಕ್ಷರಿಂದ್ದ ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಲಾಯಿತು. ನಂತರ ಸಭೆಯಲ್ಲಿ ಗ್ರಾಮ ಪಂಚಾಯಿತಿಗೆ ಒಳಪಡುವ ವಿಷಯದ ಚರ್ಚೆ ಆರಂಭಿಸಿದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಪ್ಪರವರು ಸರ್ಕಾರದ ಯೋಜನೆ ಹಾಗೂ ಸ್ಥಾಯಿ ಸಮಿತಿ ಬಗ್ಗೆ ಸದಸ್ಯರಿಗೆ ತಿಳಿಸಿದರು.ಈ ವಿಷಯದ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ ಎಂದು ಉತ್ತರಿಸಿದರು.

*ಸಭೆಯಲ್ಲಿ ಚರ್ಚಿಸಿದ ವಿಷಯಗಳು* *ಕಲ್ಲು ಗಣಿಗಾರಿಕೆಗೆ ಪರವಾನಿಗೆ ನಿಡಬೇಕೆಂದು ಮನವಿಯ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರಿಸೋಣಂದರು * ಗ್ರಂಥಾಲಯದ ಮೇಲ್ವಿಚಾರಕರಿಲ್ಲ ಗ್ರಂಥಾಲಯದ ಉಪನಿರ್ದೇಶಕರಿಗೆ ಪತ್ರ ಬರೆದಿದ್ದವೆ.ಗ್ರಂಥಪಾಲಕರ ಹುದ್ದೆ ಅರ್ಜಿ ಕರೆಯುತ್ತಾರೆಂದು ಪಿ.ಡಿ.ಓ. ರಾಮಪ್ಪರವರು ಸಭೆಗೆ ವಿವರಿಸಿದರು.
*ಸರ್ಕಾರಿ ಪ್ರಾಥಮಿಕ ಶಾಲೆಗೆ ಆಟ ಸಾಮಾಗ್ರಿಗಳನ್ನು ನಿಡಬೇಕೆಂಬ ಮನವಿಗೆ. ತೆರಿಗೆ ಅನುದಾನದಲ್ಲಿ ಶೇ.2 ರಷ್ಟು ಮಿಸಲಿಡಲು ಒಪ್ಪಿದರು * 3 ಮತ್ತು 5 ನೇ ವಾರ್ಡನಲ್ಲಿ ಒಳಚರಂಡಿ ಹಾಗೂ 4 ನೇ ವಾರ್ಡನಲ್ಲಿ ಚರಂಡಿ ದುರಸ್ತಿ ಮಾಡಬೇಕೆಂದು ಚರ್ಚಿಸಿದರು * ಸಿದ್ದಪ್ಪನಗರದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಮತ್ತು ದೇವಾಲಪುರದಲ್ಲಿ ಶಾಲೆಯ ಹತ್ತಿರ ವಿದ್ಯುತ್ ಕಂಬ ಅಳವಡಿಸಬೇಕೆಂದು ಸದಸ್ಯರ ಮನವಿಗೆ ಒಪ್ಪಿಗೆ ಸೂಚಿಸಿದ್ದರು * ಸದಸ್ಯರೊಬ್ಬರು 15 ಹಣಕಾಸು ಎಷ್ಟು ಬಂದಿದೆ ಎಂದು ಕೇಳಿದಾಗ ಪಿ.ಡಿ.ಓ.ರವರು 60ಲಕ್ಷ ರೂಪಾಯಿ ಕಾಮಗಾರಿ ಕಳಿಸಿದ್ದಿವಿ ಸದ್ಯಕ್ಕೆ 30 ಲಕ್ಷ ಬಂದಿದೆ ಎಂದು ಹೇಳಿದರು. * 14ನೇ ಹಣಕಾಸಿನಲ್ಲಿ ಸಿದ್ದಪಡಿಸಿದ ಕಾಮಗಾರಿ ಮತ್ತು ಅದಕ್ಕೆ ಮಿಸಲಿಟ್ಟ ಹಣದ ಬಗ್ಗೆ ಕೂಡ ಚರ್ಚೆ ಮಾಡಿದರು . 2019-20 ನೇ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಗೆ 50000 ರೂಪಾಯಿ. ದೇವಾಲಪುರ ಸರ್ಕಾರಿ ಶಾಲೆಗೆ ಮುಖ್ಯದ್ವಾರಕ್ಕೆ 3ಅಡಿ ಪೈಪುಗಳು ಅಳವಡಿಸಿಲು 35000.ಹಳೇಕೋಟೆಯ 2ನೇ ವಾರ್ಡ ಸಣ್ಣ ಸುಭಾನ ಮನೆಯಿಂದ ಕಾರದಪುಡಿ ಗಂಗಮ್ಮ ಮನೆವರಿಗೆ ಪೈಪ್ ಲೈನ್ 50000. ಹಳೇಕೋಟೆ ಕೆರೆ ಹತ್ತಿರ ಕಾವಲುಗಾರ ಕೊಠಡಿಗೆ 85000.ಇನ್ನೂ ಕಾಮಗಾರಿಗಳಿವೆ .ಈ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶಂಕ್ರಪ್ಪ ಹಾಜರಿದ್ದರು ತಮ್ಮ ಅನುದಾನದಲ್ಲಿ ಬರುವ ಕಾಮಗಾರಿಯ ಬಗ್ಗೆ ಚರ್ಚಿಸಿದ್ದರು.ಏನೇ ಅಗಲಿ ಗ್ರಾಮದ ಅಭಿವೃದ್ದಿ ಅದರೆ ಸಾಕು ಎನ್ನುವುದೇ ಎಲ್ಲರ ಆಶಯ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
