ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ

*ದಿ*ನಾಂಕ .28.1.2021.ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ* *ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ವಿಕಲಚೇತನ ಅಂಗವಿಕಲರಿಗೆ ವಿಲ್ ಚೇರ್ ವಿತರಣೆ*
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಬಿ.ಸಿ.ಟ್ರಸ್ಟ್(ರಿ) ಕೂಡ್ಲಿಗಿ ಇವರ ಸಹಯೋಗದಡಿಯಲ್ಲಿ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವಿಲ್ ಚೇರ್ ವಿತರಿಸಲಾಯಿತು.
ಜನಮಂಗಲ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾದಿಕಾರಿಗಳಾದ ಪರಮ ಪೂಜ್ಯ ಶ್ರೀ ವಿರೇಂದ್ರ ಹೆಗ್ಗಡೆ ರವರು 2018 ರ ಬಾಹುಬಲಿಯ ಮಹಾ ಮಸ್ಥಾಭಿಷೇಕದ ಪ್ರಯುಕ್ತ ಜನಮಂಗಳ ಕಾರ್ಯಕ್ರಮವು ಜಾರಿಗೆ ತಂದರು ರಾಜ್ಯದ ಎಲ್ಲಾ ಸಮಾಜದ ಬಡವರು ಅಂಗವಿಕಲರು ಆಶಕ್ತರಿಗೆ ನೆಡೆಯಲಾರದಂತಸ ವಯಸ್ಸಾದವರಿಗೆ ವಿವಿಧ ರೀತಿಯ ಸಲಕರಣೆಗಳನ್ನು ನೇರವಾಗಿ ಪೂಜ್ಯರ ಅನುಗ್ರಹದೋಂದಿಗೆ ಕೂಡ್ಲಿಗಿ ತಾಲೂಕಿನಲ್ಲಿ ಸುಮಾರು 110 ವಿಲ್ ಚೇರ್ .ವಾಟರ್ ಬೇಡ್ .ಉರುಗೋಲು ಮುಂತಾದವುಗಳನ್ನು ಈಗಾಗಲೆ ವಿತರಣೆ ಮಾಡಲಾಗಿದೆ ತಾಲೂಕಿನ ಜನತೆ ಜನಮಂಗಲ ಕಾರ್ಯಕ್ರಮದ ಯೋಜನೆಯನ್ನು ಸದುಪಯೋಗ ಪಡೆಯಬೆಕೆಂದು ತಾಲೂಕಿನ ಯೋಜನಾಧಿಕಾರಿ ಮಂಜುನಾಥ್ ರವರು ತಾಲೂಕಿನ ಜನತೆಯ ಪರವಾಗಿ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಗುಡೇಕೋಟೆ ವಲಯದ ಮೆಲ್ವಿಚಾರಕರಾದ ಕೆ.ಕರಿಯಪ್ಪ .ಸೇವಾ ಪ್ರತಿನಿಧಿ ದುರುಗೇಶ್ ನಾಗರ ಹುಣಸೆ.ಗ್ರಾಮದ ರಾಮಾಂಜಿನಿ ಸುಮಿಯಾಬಾನು.ಇತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
