ವರದಿ, ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ರಾಯಾಪುರ ಗ್ರಾಮದ ಕೋಟೆ ಗುಡ್ಡದ ಮಾರಮ್ಮ ದೇವಿಯ ಸಿಡಿ ಉತ್ತವ ಗುರುವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಇಲ್ಲಿನ ದೇವಸ್ಥಾನ ಆವರಣದಲ್ಲಿ ಜರುಗಿದ ಸಿಡಿ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಭಾಗದ ಆರಾಧ್ಯ ದೈವ ಕೋಟೆ ಗುಡ್ಡ ಮಾರೇಶ್ವರಿ ತಾಲೂಕು ಅಲ್ಲದೆ ಪಕ್ಕದ ಆಂದ್ರದ ನಾನಾ ಕಡೆಗಳ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ನಾಲ್ಕು ದಿನಗಳ ಜಾತ್ರಾ ಮಹೋತ್ಸವದಲ್ಲಿ ಉತ್ಸವ ಪ್ರಮುಖವಾಗಿದೆ. ಮೂರು ಸುತ್ತು ಸಿಡಿ ಹಾಡಿದ ಸಿಡಿಗಾರ ಬೇವಿನ ಸೊಪ್ಪು ಮತ್ತು ಭಂಡಾರವನ್ನು ನೆರೆದ ಭಕ್ತರಿಗೆ ಎರಚಿದನು. ಹೊತ್ತವರು ಪೂಜಾ ಕಾರ್ಯಗಳೊಂದಿಗೆ ಹರಕೆ ತೀರಿಸಿದರು. ಭಕ್ತರು ಚೂರು ಬೆಲ್ಲ ಸಮರ್ಪಿಸಿ ಭಕ್ತಿ ತೋರಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
