ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು—: ಮಕ್ಕಳ ಮಾರಾಟ ಹಾಗೂ ಕಳ್ಳ ಸಾಗಾಣಿಕೆ ತಡೆಕುರಿತು ಸಪ್ತಹ ಕಾರ್ಯಕ್ರಮ,–:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಯಕನಹಳ್ಳಿ.*
*ದಿನಾಂಕ 15 -01-2021 ನೇ ಶುಕ್ರವಾರ ನಡೆದ ಗ್ರಾಮ* *ಪಂಚಾಯಿತಿ ಗ್ರಂಥಾಲಯದ ವತಿಯಿಂದ ಓದುವಬೆಳಕು ಮತ್ತು ಮಕ್ಕಳ ಸ್ನೇಹಿ ಗ್ರಾಮ ಸಭೆ*
*ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಯಕನಹಳ್ಳಿ ಯಲ್ಲಿ*
*ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ತಡೆ ಕುರಿತು*
ಸಪ್ತಾಹ ನಡೆಸಲಾಯಿತು. ಶಾಲಾ ಮಕ್ಕಳಿಂದ ಮಕ್ಕಳ ಕಳ್ಳ ಸಾಗಾಣಿಕೆ, ಜಾಲದಲ್ಲಿ ಸಿಲುಕಿಕೊಂಡಿರುವ ಸ್ಥಿತಿಗತಿ ಮಕ್ಕಳು ಕಾಣೆಯಾದರೆ ತಕ್ಷಣ ದೂರು ನೀಡುವುದು,ಕುರಿತು
ಪ್ರೌಢ ಶಾಲಾ ಮಕ್ಕಳಿಂದ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕಿರುಚಿತ್ರ ಪ್ರದರ್ಶನ ನೀಡಲಾಯಿತು.
ಸಪ್ತಾಹದ ಸ್ವವಿವರವನ್ನು ಶಿಕ್ಷಕರಾದ ಗೋವಿಂದಪ್ಪ ಸರ್ ತಿಳಿಸಿದರು. ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ರಂಗಪ್ಪ ಸರ್ ಇವರು ಬಾಲ್ಯವಿವಾಹ ಮತ್ತು ಮಕ್ಕಳ ಸಾಗಾಣಿಕೆ ಬಗ್ಗೆ ತಿಳಿಸಿ, ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಪಡೆದು ಓದುವ ಬಗ್ಗೆ ಮಾಹಿತಿ ತಿಳಿಸಿದರು. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಮಹಂತೇಶ್ ಸ್ವಾಮಿ ಇವರು ಮಾನವ ಕಳ್ಳಸಾಗಣೆಕೆ ತಡೆ ಕಾಯ್ದೆ ಕುರಿತು ಮಾತನಾಡಿದರು. ಗ್ರಂಥಾಲಯ ಮೇಲ್ವಿಚಾರಕರಾದ ತುಡುಮ ಗುರುರಾಜ್ ಇವರು 6 ವರ್ಷದಿಂದ 18 ವರ್ಷದ ಒಳಗಿನ ಮಕ್ಕಳಿಗೆ ಗ್ರಂಥಾಲಯ ಸದಸ್ಯತ್ವ ನೋಂದಣಿ ಬಗ್ಗೆ ಮತ್ತು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಪಡೆದು ಓದಿ ಹಿಂದಿರುಗಿಸುವ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಾದ ಉಮೇಶ ಸರ್ ಇವರು ಸ್ವಾಗತಿಸಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಚಂದ್ರಪ್ಪ ಸರ್ ಮತ್ತು ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ ಹಾಗೂ ಸಿಬ್ಬಂದಿ ವರ್ಗದವರು ಹಾಗೂಎಲ್ಲಾ ಶಾಲಾ ಮಕ್ಕಳು ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿ ಆರ್ ಡಬ್ಲ್ಯೂ ಕುಮಾರಿ ಸಲ್ಮಾ ಹಾಗೂ ಊರಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಶಿಕ್ಷಕರಾದ ಮಾರುತಿ ಸರ್ ಇವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
