;

ಕೂಡ್ಲಿಗಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರ ಆಯ್ಕೆ….

ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ

ದಿನಾಂಕ 15.1. 2021 ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು,:— ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ≥–ಉದಯವಾಣಿ ಪತ್ರಕರ್ತ.ಕೆ ನಾಗರಾಜ್ಆಯ್ಕೆ:-
ಕೂಡ್ಲಿಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಈ ದಿನ ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಬಂಗ್ಲೆ ಮಲ್ಲಿಕಾರ್ಜುನ್ ರವರ ಅಧ್ಯಕ್ಷತೆಯಲ್ಲಿ ಶ್ರೀ ಕೆ ನಾಗರಾಜ್, ತಾಲೂಕು ಉದಯವಾಣಿ ಪತ್ರಕರ್ತಇವರನ್ನು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು, ಈ ಹಿಂದೆ ಪತ್ರಕರ್ತರ ಸಂಘದ ಸರ್ವ ಸದಸ್ಯರು 2020ನೇ ಸಾಲಿನಲ್ಲಿ ವಿಜಯವಾಣಿ ದಿನಪತ್ರಿಕೆಯ ವರದಿಗಾರರಾದ ವೀರೇಶ್ ಅಂಗಡಿಯವರನ್ನು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರನ್ನಾಗಿ ಮಾಡಿ 2021 ನೇ ಸಾಲಿಗೆ ಉದಯವಾಣಿ ದಿನಪತ್ರಿಕೆ ವರದಿಗಾರರಾದ ನಾಗರಾಜ ರವರನ್ನು ತಾಲೂಕು ಅಧ್ಯಕ್ಷರನ್ನಾಗಿ ಮಾಡಬೇಕೆಂದು ತೀರ್ಮಾನಿಸಲಾಗಿತ್ತು ಈ ಮಾತುಕತೆಯಂತೆ ಈ ದಿನ ನೂತನವಾಗಿ ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರನ್ನಾಗಿ ಉದಯವಾಣಿ ದಿನಪತ್ರಿಕೆ ವರದಿಗಾರರಾದ ನಾಗರಾಜರ ರವರನ್ನು ಅಧಿಕೃತವಾಗಿ,ಶ್ರೀ ಬಂಗ್ಲೆ ಮಲ್ಲಿಕಾರ್ಜುನ್ ರಾಜ್ಯ ಕಾರ್ಯದರ್ಶಿಗಳು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಯಿತು, ಈ ಸಂದರ್ಭದಲ್ಲಿ ಯು. ಡಬ್ಲ್ಯೂ. ಜೆ.ಜಿಲ್ಲಾ ಕಾರ್ಯದರ್ಶಿಗಳಾದ ಭೀಮಣ್ಣ ಗಜಾಪುರ, ಸಂಯುಕ್ತ ಕರ್ನಾಟಕ ಶಿವಪ್ಪ ಕಾವಲಿ ನಾಯಕ, ಸಂಜೆವಾಣಿ ಪತ್ರಿಕೆ ವರದಿಗಾರ ನಾಗರಾಜುರವರು, ವಿಜಯವಾಣಿ ವರದಿಗಾರ ಅಂಗಡಿ ವೀರೇಶ ರವರು, ಜನತಾವಾಣಿ ಯ ಮಯೂರ ಮಂಜುನಾಥ್, ಪ್ರಜಾಪ್ರಗತಿ ಬಾಳಪ್ಪ, ಪ್ರಜಾವಾಣಿ ಸೋಮಶೇಖರ ಆರಾಧ್ಯ, ಇನ್ನೂ ಅನೇಕ ಪತ್ರಿಕಾ ಬಳಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;