;

ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ, ಸಿ.ಪಿ.ಐ ಉಮೇಶ್ ನಾಯಕ್ ಉದ್ಘಾಟಿಸಿದರು.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಚಿಕೋಬನಹಳ್ಳಿ ಗ್ರಾಮದಲ್ಲಿ ಇಂದು ಜ-15-2021ರ ಶ್ರೀ ಜೈ ಭೀಮ್ ಯುವಕರ ಸಂಘ ಚಿಕೋಬನಹಳ್ಳಿ. ಡಾ” ಬಾಬಾ ಸಾಹೇಬ್ ಅಂಬೇಡ್ಕರರ ಜೀವನಾಧಾರಿತ ಕತೆಯಾದ ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಪಿ.ಐ ಉಮೇಶ ನಾಯಕ ಅವರು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲಿ ಮಹಾನಾಯಕ ಧಾರಾವಾಹಿಯನ್ನು ಬೆಂಬಲಿಸಿ ಬ್ಯಾನರ್ ಉದ್ಘಾಟನೆ ಕಾರ್ಯಕ್ರಮ ನಡೆಸುವ ಮೂಲಕ ನಾವೆಲ್ಲರು ಡಾ” ಬಾಬಾ ಸಾಹೇಬ್ ಅಂಬೇಡ್ಕರರನ್ನು ಸ್ಮರಿಸುವ ಕಾರ್ಯ ನಡೆಯಬೇಕಿದೆ. ಅಂಬೇಡ್ಕರರ ಜೀವನ ಮತ್ತು ಸಾಧನೆಯನ್ನು ತಿಳಿಯದೆ ಅಂಬೇಡ್ಕರರು ಅರ್ಥವಾಗಲಾರದು ಅಲ್ಲದೆ ಅಂಬೇಡ್ಕರರ ಅನುಯಾಯಿಗಳಾದವರು ಅಂಬೇಡ್ಕರರನ್ನು ಅರಿಯುವ ಅವಶ್ಯಕತೆ ತುಂಬಾ ಇದೆ, ಇದನ್ನು ಅರಿತು ಝೀ ಕನ್ನಡ ವಾಹಿನಿ ಹಾಗೂ ರಾಘವೇಂದ್ರ ಹುಣಸೂರವರು ಮಹಾನಾಯಕ ಧಾರಾವಾಹಿ ಮೂಲಕ ನಮಗೆಲ್ಲರಿಗು ಸಂವಿಧಾನ ಶಿಲ್ಪಿಯನ್ನು ತೋರಿಸುತ್ತಿದ್ದಾರೆ, ಅದಕ್ಕಾಗಿ ವಾಹಿನಿಗೆ ನಾವೆಲ್ಲರು ಧನ್ಯವಾದ ಅರ್ಪಿಸಲೆಬೇಕು ಎಂದರು.ಕಾರ್ಯಕ್ರಮ ಆರಂಭದಲ್ಲಿ ಡಾ” ಬಾಬಾ ಸಾಹೇಬ್ ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು. ನಂತರ ಮಹಾನಾಯಕ ಬ್ಯಾನರ್ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಾಗಭೂಷಣ್, ಕರಿಬಸಪ್ಪ, ಮೇಘರಾಜ, ಹೇಮಣ್ಣ, ಚನ್ನಪ್ಪ, ಲಕ್ಷ್ಮಕ್ಕ, ಭಾಗ್ಯಮ್ಮ, ಹಾಗೂ ಶ್ರೀ ಜೈ ಭೀಮ್ ಯುವಕರ ಸಂಘ ಚಿಕ್ಕೋಬನಹಳ್ಳಿ. ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗದವರು, ಊರಿನ ಗ್ರಾಮಸ್ಥರು ದಳಪತಿ ಸೂರಯ್ಯ ನಾಯಕ, ಶಿವಣ್ಣ, ರವಿ, ಮಲ್ಲಿಕಾರ್ಜುನ್, ಶರಣೇಶ್, ವಸಂತ ಶಿಕ್ಷಕರು, ಬಸಣ್ಣ, ಅಜ್ಜರ್ ತಿಪ್ಪೇಸ್ವಾಮಿ, ಒಕ್ಕ ಪುಡಿ ತಿಪ್ಪೇಸ್ವಾಮಿ, ಬಿ.ಓ ರಮೇಶ್, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;