;

ಜೊತೆಯಾಗಿ ಬದುಕುತ್ತೇವೆ ಬಿಟ್ಬಿಡಿ ಅಂದ್ರು, ಕೇಳಲಿಲ್ಲ.. ಕೊನೆಗೂ ನಡೆದೇ ಹೋಯ್ತು ದುರಂತ!

ಜೊತೆಯಾಗಿ ಬದುಕುತ್ತೇವೆ ಬಿಟ್ಬಿಡಿ ಅಂದ್ರು, ಕೇಳಲಿಲ್ಲ.. ಕೊನೆಗೂ ನಡೆದೇ ಹೋಯ್ತು ದುರಂತ!

ಪ್ರೀತಿ ಅನ್ನೋದೇ ಹಾಗೆ.. ಎರಡು ಹೃದಯಗಳ ಜೊತೆಗೆ ಹಲವು ಮನಸುಗಳನ್ನ ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ. ಆದ್ರೆ ಅದು ಅಷ್ಟು ಸುಲಭವಲ್ಲ. ಕೊಂಚ ಏರು ಪೇರು ಆದ್ರೂ ದುರಂತವೇ ನಡೆದು ಹೋಗಿಬಿಡುತ್ತೆ. ಇಲ್ಲೂ ಕೂಡ ಅದೇ ಆಗಿಬಿಟ್ಟಿದೆ.

ಹಾವೇರಿಯ ಮಂಜುನಾಥ್ ಅಗಡಿ ಯುವತಿಯೊಬ್ಬಳನ್ನ ಪ್ರೀತಿ ಮಾಡ್ತಿದ್ದ. ಆಕೆ ಕೂಡ ಮಂಜುನಾಥನಿಗೆ ಸರ್ವಸ್ವವನ್ನೇ ಅರ್ಪಿಸಿಕೊಂಡಿದ್ದಳು. ಪೋಷಕರ ತೀವ್ರ ವಿರೋಧದಿಂದಾಗಿ, ಇಬ್ಬರೇ ಜೀವನ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಇತ್ತೀಚೆಗಷ್ಟೇ ಇಬ್ಬರೂ ಓದು ಓಡಿ ಹೋಗಿ ಸ್ಥಳೀಯ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು .

ಇತ್ತ ಯುವತಿ ಪೋಷಕರು ಹಾವೇರಿ ಮಹಿಳಾ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಸಂಧಾನ ಕೂಡ ನಡೆದಿತ್ತು. ಆದ್ರೆ, ಯುವತಿ ಪೋಷಕರು, ಬಲವಂತವಾಗಿ ಯುವತಿಯನ್ನು ಮನೆಗೆ ಕರೆದೊಯ್ದಿದ್ದರು.

ಇದರಿಂದ ಮನನೊಂದ ಮಂಜುನಾಥ್, ಮುಂದಿನ ಜನ್ಮ ಅಂತ ಇದ್ದರೆ ನಾನು ನಿನ್ನವನಾಗಿ ಹುಟ್ಟಿಬರುವ ಅಂತ ಇನ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ತಮ್ಮ ಮನೆಯಲ್ಲೇ ಜೀವನ ಅಂತ್ಯ ಮಾಡಿಕೊಂಡುಬಿಟ್ಟಿದ್ದಾನೆ.

ಎಲ್ಲವೂ ಸುಗಮವಾದ್ರೆ ಪ್ರೀತಿ ಮಧುರ. ಇಲ್ಲದಿದ್ರೆ ಪ್ರೀತಿ ಪ್ರೇಮ ಅನ್ನೋದು ಒಂದು ದುರಂತ ಅಧ್ಯಾಯ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;