;

ಚಳ್ಳಕೆರೆಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ಆರೋಪ..! ಕಂಪನಿ ಮ್ಯಾನೇಜರ್‌ಗಳ ವಿರುದ್ಧ ಗಂಭೀರ ದೂರು..!

ಚಳ್ಳಕೆರೆಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ಆರೋಪ..!
ಕಂಪನಿ ಮ್ಯಾನೇಜರ್‌ಗಳ ವಿರುದ್ಧ ಗಂಭೀರ ದೂರು..!
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ NCR ದಾಖಲು..!
ಚಳ್ಳಕೆರೆ ರೈಲ್ವೆ ಸ್ಟೇಷನ್ ಬಳಿಯ ಮೈಸ್ ಪ್ಲಾಂಟ್ ಸಮೀಪ ನಡೆದಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಲಾರಿ ಲೋಡ್ ಮಾಡಲು ಬಂದಿದ್ದ ಚಾಲಕನ ಮೇಲೆ ಕಂಪನಿಯ ಮ್ಯಾನೇಜರ್‌ಗಳು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಮ್ಮತ್ತ ಮರಿಕುಂಟೆ ಗ್ರಾಮದ ಗೋವಿಂದರಾಜು ಎಂಬುವವರು ನೀಡಿರುವ ದೂರಿನ ಪ್ರಕಾರ, ಕಳೆದ ಒಂದೂವರೆ ತಿಂಗಳಿಂದ ಚಿತ್ರದುರ್ಗದ ಬಿ.ಎನ್.ಸಿ. ಕಂಪನಿಯಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಪ್ರತಿದಿನ ಚಳ್ಳಕೆರೆ ರೈಲ್ವೆ ಸ್ಟೇಷನ್ ಬಳಿಯ ಪ್ರಕಾಶ್ ಐರನ್ ಸ್ಪಾಂಜ್ ಕಂಪನಿಗೆ ಮೈನ್ಸ್ ಲೋಡ್ ಮಾಡಿಕೊಂಡು ಹೋಗುತ್ತಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಸೆಪ್ಟೆಂಬರ್ 12ರಂದು ಸಂಜೆ ಸುಮಾರು 6 ಗಂಟೆಯ ವೇಳೆಯಲ್ಲಿ ಲೋಡ್‌ಗಾಗಿ ಲಾರಿಯನ್ನು ಮೈಸ್ ಪ್ಲಾಂಟ್ ಬಳಿ ನಿಲ್ಲಿಸಿದ್ದ ಸಂದರ್ಭದಲ್ಲಿ, ಅಲ್ಲಿದ್ದ ಕಂಪನಿಯ ಮ್ಯಾನೇಜರ್‌ವೊಬ್ಬರು “ನೀನು ಕುಡಿದು ಲಾರಿಗೆ ಬಂದಿದ್ದೀಯಾ” ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ-ಕಾಲುಗಳಿಂದ ಮುಖ, ತಲೆ ಹಾಗೂ ಮೈಕೈ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಗೋವಿಂದರಾಜು ಆರೋಪಿಸಿದ್ದಾರೆ.
ಇಷ್ಟೇ ಅಲ್ಲ…
ಸ್ಥಳದಲ್ಲಿದ್ದ ಲಾರಿ ಕ್ಲೀನರ್ ಬಾಲಕನಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಕೇಳಿಬಂದಿದೆ.
ಹಲ್ಲೆಯಿಂದ ಗಾಯಗೊಂಡ ಗೋವಿಂದರಾಜು ತಮ್ಮ ಗ್ರಾಮಕ್ಕೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಆಟೋ ಮೂಲಕ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಆಸ್ಪತ್ರೆಯಿಂದ ಬಂದ ಮೆಮೊ ಆಧಾರದ ಮೇಲೆ ಸೆಪ್ಟೆಂಬರ್ 13ರಂದು ಸಂಜೆ ಸುಮಾರು 6 ಗಂಟೆಗೆ ಚಳ್ಳಕೆರೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗೋವಿಂದರಾಜು ಅವರ ಹೇಳಿಕೆ ಪಡೆದುಕೊಂಡಿದ್ದಾರೆ.
ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ನಡೆದಿದೆ ಎಂಬುದು ದೂರುದಾರರ ಆರೋಪವಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಲಾರಿ ಚಾಲಕನ ಮೇಲೆ ನಿಜವಾಗಿಯೂ ಹಲ್ಲೆ ನಡೆದಿತ್ತೇ?
ಹಲ್ಲೆಗೆ ಕಾರಣವೇನು?
ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳು ಎಷ್ಟರ ಮಟ್ಟಿಗೆ ಸತ್ಯ?
ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯೇ ಉತ್ತರ ನೀಡಬೇಕಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;