ಬಡೇಲಡಕು ಗ್ರಾಮದ ಸುಡುಗಾಡು ಸಿದ್ದರ ಯುವಕರ ಸಂಘ ಉದ್ಘಾಟಿಸಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ…
ಬಡೇಲಡಕು: ಗ್ರಾಮದಲ್ಲಿ ಸುಡುಗಾಡು ಸಿದ್ದರ ಯುವಕರ ಸಂಘ (ರಿ.) ವತಿಯಿಂದ ಆಯೋಜಿಸಲಾಗಿದ್ದ ಯುವಕರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಗಣೇಶ ಚತುರ್ಥಿ ಆಚರಣೆ ಕಾರ್ಯಕ್ರಮಕ್ಕೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರು ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, “ಯುವಕರು ಸಂಘಟಿತರಾಗಿ, ಶಿಕ್ಷಿತರಾಗಿ ಹಾಗೂ ಆರೋಗ್ಯವಂತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಮ್ಮ ಸಮುದಾಯವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕು. ಸುಡುಗಾಡು ಸಿದ್ದರ ಸಮಾಜವು ಸಣ್ಣ ಸಮುದಾಯವಾಗಿದ್ದರೂ, ಪ್ರತಿಯೊಂದು ಸಮುದಾಯದ ಹಿತಾಸಕ್ತಿಗಳನ್ನು ಗುರುತಿಸಿ ಸ್ಪಂದಿಸುವ ಸರ್ಕಾರ ನಮ್ಮದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ” ಎಂದು ಹೇಳಿದರು.
ತಮ್ಮ ಸೇವಾ ಬದ್ಧತೆಯನ್ನು ವ್ಯಕ್ತಪಡಿಸಿದ ಶಾಸಕರು, ಸುಡುಗಾಡು ಸಿದ್ದರ ಸಮುದಾಯದ ಅಗತ್ಯತೆಗಳು ಹಾಗೂ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಬಡೇಲಡಕು ಗ್ರಾಮದ ದಶಕಗಳ ಬೇಡಿಕೆಯಾಗಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸುಡುಗಾಡು ಸಿದ್ದರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ. ಚೌಡಪ್ಪ, ಉಪಾಧ್ಯಕ್ಷ ಕೆ. ರಾಜಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸತೀಶ್, ಎಂ. ಬಸವರಾಜ್, ಹಾಗೂ ಮುಖಂಡರಾದ ಶ್ರೀನಿವಾಸ್, ಕೊಟ್ರೇಶ್, ವಿರೂಪಾಕ್ಷಪ್ಪ, ಕುರಿ ಸಿದ್ದಪ್ಪ, ಕಾಟ್ರಳ್ಳಿ ಕನಕಪ್ಪ, ಕಾಶಿ ವಿಶ್ವನಾಥ್, ಜಿ. ಹುಸೇನಪ್ಪ, ಎ.ಜೆ. ಪ್ರಹ್ಲಾದ, ಹೊನ್ನೂರಪ್ಪ, ಯಮನೂರಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು, ಯುವಕರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
