;

ಗೋಕಾಕದಲ್ಲಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳ ಮನೆಗಳ ಮೇಲೆ ಪೊಲೀಸ್ ದಾಳಿ!!!

ಗೋಕಾಕದಲ್ಲಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳ ಮನೆಗಳ ಮೇಲೆ ಪೊಲೀಸ್ ದಾಳಿ!

ಗೋಕಾಕ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಡಿವೈಎಸ್‌ಪಿ ರವಿ ನಾಯ್ಕ್ ಅವರ ನೇತೃತ್ವದಲ್ಲಿ, ಸಿಪಿಐ ಶ್ರೀಶೈಲ್ ಬ್ಯಾಕೋಡ, ಗೋಕಾಕ ಶಹರ ಪಿ ಎಸ್‌ ಐ ಕಿರಣ್ ಮೋಹಿತೆ, ಗ್ರಾಮೀಣ ಪಿಎಸ್‌ಐ ಕೆ. ವಾಲಿಕರ ಸೇರಿದಂತೆ ಅಂಕಲಗಿ ಮತ್ತು ಕೂಲಗೊಡ ಪಿಎಸ್‌ಐ ಹಾಗೂ ಎ ಎಸ್ ಐ ಗಳು ಮತ್ತು ಸುಮಾರು 35 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಗೋಕಾಕ ನಗರದ 6 ಮಂದಿ ರೌಡಿ ಶೀಟರ್ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ನಗರದ ಕಾಡು ಸಿದ್ದೇಶ್ವರ ಮಠದ ಹತ್ತಿರ, ಉಪಾರಗಲ್ಲಿ, ಜಲಾಲಗಲ್ಲಿ ಹಾಗೂ ಜೈನಬಸ್ತಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ದಾಳಿ ನಡೆದಿದೆ.

ಮನೆಗಳಲ್ಲಿ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು ಹಾಗೂ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಇವೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ ಪೊಲೀಸ್ ಕಾರ್ಯಾಚರಣೆ ಇದೀಗ ಗೋಕಾಕ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;