;

ರುತು” ಹಾರರ್ ವೆಬ್ ಸಿರೀಸ್ ಪ್ರಥಮ ಭಾಗ ಬಿಡುಗಡೆ: ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಶುಭ ಹಾರೈಕೆ…!!!

ರುತು” ಹಾರರ್ ವೆಬ್ ಸಿರೀಸ್ ಪ್ರಥಮ ಭಾಗ ಬಿಡುಗಡೆ: ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಶುಭ ಹಾರೈಕೆ

​ಕೂಡ್ಲಿಗಿ: ತಾಲೂಕಿನ ಯುವ ಪ್ರತಿಭೆಗಳ ಪ್ರತಿಭಾವಂತ ಪ್ರಯತ್ನದಲ್ಲಿ ಮೂಡಿಬಂದಿರುವ “ರುತು” ಹಾರರ್ ವೆಬ್ ಸಿರೀಸ್‌ನ ಮೊದಲ ಎಪಿಸೋಡ್ ಅನ್ನು ಮಾನ್ಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಎನ್. ಟಿ. ಶ್ರೀನಿವಾಸ್ ಅವರು ಅಧಿಕೃತವಾಗಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಾಶಯ ಕೋರಿದರು.
​ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, “ನಮ್ಮ ತಾಲೂಕಿನ ಯುವಕ ರಾಜ್ ಉತ್ತಮ್ ಎ. ಟಿ. ಹುಡೇಂ ಅವರು ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿರುವುದು ನಮ್ಮ ಇಡೀ ತಾಲೂಕಿಗೆ ಹೆಮ್ಮೆ ಮತ್ತು ಸಂತಸ ತಂದಿರುವ ವಿಷಯವಾಗಿದೆ. ಈ ಸಿರೀಸ್‌ಗೆ ಶ್ರಮಿಸಿದ ನಿರ್ದೇಶಕ ರಾಜ್ ಉತ್ತಮ್, ನಟ ಹಾಗೂ ನಿರ್ಮಾಪಕರಾದ ಡಾ. ಜಿ.ಎಸ್. ಹೂಗಾರ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು” ಎಂದು
​ಮುಂದುವರಿದು ಮಾತನಾಡುತ್ತಾ, “ಈ ‘ರುತು’ ಹಾರರ್ ವೆಬ್ ಸಿರೀಸ್ ಅಪಾರ ಜನಪ್ರಿಯತೆ ಗಳಿಸಿ, ಯಶಸ್ಸಿನ ಸಖತ್ ಸದ್ದು ಮಾಡಲಿ. ಸಾರ್ವಜನಿಕರು ಹಾಗೂ ಪ್ರೇಕ್ಷಕರು ಈ ಯುವ ಪ್ರತಿಭೆಗಳನ್ನು ನೋಡಿ, ಬೆಂಬಲಿಸಿ ಆಶೀರ್ವದಿಸಬೇಕು. ಈ ಮೂಲಕ ಈ ತಂಡವು ಇನ್ನೂ ಉನ್ನತ ಎತ್ತರಕ್ಕೆ ಬೆಳೆದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾಗಳು ಹಾಗೂ ಸಿರೀಸ್‌ಗಳನ್ನು ನಿರ್ಮಿಸುವಂತಾಗಲಿ” ಎಂದು ಹಾರೈಸಿದರು.
​ಈ ಶುಭ ಸಂದರ್ಭದಲ್ಲಿ ಪ್ರಮುಖರಾದ ಮಂಜುನಾಥ್ ಮಾಳೆಹಳ್ಳಿ ಸೇರಿದಂತೆ ಸ್ಥಳೀಯ ಮುಖಂಡರು, ಚಿತ್ರತಂಡದ ಸದಸ್ಯರು ಹಾಗೂ ಅಪಾರ ಬೆಂಬಲಿಗರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;