ಭಾರತ್ ಜೋಡೋ ಸದಸ್ಯತ್ವಕ್ಕೆ ಜಾಗೃತಿ.
ಕೊಟ್ಟೂರು: 16 ರಿಂದ 35 ವರ್ಷದೊಳಗಿನ ಯುವ ಸಮೂಹ ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ನೋಂದಣಿಗೆ ಅರ್ಹರಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಹೇಳಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಶನಿವಾರ ಮನೆಮನೆಗೆ ತೆರಳಿ ಕರಪತ್ರ ವಿತರಿಸಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರ ರಾಜ್ಯದ ಯುವಜನರಲ್ಲಿ ನಾಯಕತ್ವ ಗುಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸೌಹಾರ್ದತೆ ಬೆಳೆಸಲು ಭಾರತ್ ಜೋಡೋ ಯುವ ಸಂಘ ಯೋಜನೆ ಜಾರಿಗೊಳಿಸಿದೆ. ಇದರ ಸದಸ್ಯತ್ವ ಪಡೆಯಲು ಜಾಗೃತಿ ಮೂಢಿಸಿದರು.
100 ಕ್ಕೂ ಹೆಚ್ಚು ಸದಸ್ಯತ್ವ ಹೊಂದಿರುವ ಯುವಕ, ಯುವತಿಯರನ್ನು ಒಂದು ಗೂಡಿಸಿ ಸಂಘ ರಚಿಸಲಾಗುವುದು ಅದರಂತೆ ಪ್ರತಿ ಸಂಘಕ್ಕೆ ವಾರ್ಷಿಕ ರೂ 10 ಲಕ್ಷ ಅನುದಾನ ನೀಡಲು ತೀರ್ಮಾನಿಸಿದೆ ಎಂದರು.
ಪಟ್ಟಣದಲ್ಲಿ 32 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಇದರ ಅನುಗುಣವಾಗಿ 8 ಸಂಘ ರಚಿಸಲು ಅವಕಾಶವಿದೆ ಹಾಗಾಗಿ ಅರ್ಹರು ಸದಸ್ಯತ್ವ ನೋಂದಣಿ ಮಾಡಿಸಿ ಎಂದರು.
ಚಿತ್ರ – ಕೊಟ್ಟೂರಿನ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ನೋಂದಣಿಗೆ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
