ಹ್ಯಾಳ್ಯಾ ಗ್ರಾಮದ ಪುಸ್ತಕ ಗೂಡು ರಾಜ್ಯಕ್ಕೆ ಮಾದರಿ – ಅಭಿಷೇಕ್.
ಕೊಟ್ಟೂರು: ಪುಸ್ತಕ ಗೂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರೆ ಪುಸ್ತಕ ಗೂಡುಗಳಿಗೆ ಮಾದರಿಯಾಗಿದೆ ಎಂದು ನೇಚರ್ ಕಂಜರ್ವೇಷನ್ ಪೌಂಡೇಷನ್ ಪ್ರೊಜೆಕ್ಟ್ ವ್ಯವಸ್ಥಾಪಕಿ ಅಭಿಷೇಕ್ ಪ್ರಂಸಸೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಹ್ಯಾಳ್ಯಾ ಗ್ರಾಮದಲ್ಲಿರುವ ಅರಿವು ಕೇಂದ್ರ ಹಾಗೂ ಪುಸ್ತಕ ಗೂಡಿಗೆ ಶನಿವಾರ ಭೇಟಿ ನೀಡಿ ಮಾತನಾಡಿ ಗ್ರಾಮೀಣ ಗ್ರಂಥಾಲಯಗಳ ಮೂಲಕ ಮಕ್ಕಳಿಗೆ ಪ್ರಕೃತಿಯೊಂದಿಗೆ ಸಂಪರ್ಕ ಬೆಳೆಸುವ ಉದ್ದೇಶದಿಂದ ಫೌಂಡೇಷನ್ ವತಿಯಿಂದ ಕಳೆದ ವರ್ಷ ರಾಜ್ಯದಾದ್ಯಂತ ಸುಮಾರು 5800 ಅರಿವು ಕೇಂದ್ರಗಳಿಗೆ ದೇಶ ವಿದೇಶಗಳಲ್ಲಿರುವ ವಿವಿಧ ನಮೂನೆಯ ಪಕ್ಷಿ ಸಂಕುಲಗಳ ಬಗ್ಗೆ ಮಾಹಿತಿ ಇರುವ ಪ್ರಕೃತಿಯ ಪೆಟ್ಟಿಗೆ ಕಿಟ್ ಗಳನ್ನು ವಿತರಿಸಲಾಗಿದ್ದು ಅವುಗಳ ಸದ್ಬಳಕೆಯನ್ನು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸುತ್ತಿದ್ದೇವೆ ಎಂದರಲ್ಲದೇ ಜಿಲ್ಲಾ ವ್ಯಾಪ್ತಿಯೊಳಗೆ ಗ್ರಂಥಪಾಲಕರಿಗೆ ಕಾರ್ಯಗಾರವನ್ನೂ ಸಹ ಏರ್ಪಡಿಸಿ ತರಬೇತಿ ನೀಡುತ್ತಿದ್ದೇವೆ ಎಂದರು.
ಪೌಂಡೇಷನ್ ಪ್ರೊಜೆಕ್ಟ್ ಹಿರಿಯ ಸಹಾಯಕಿ ದೀಪ್ತಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ಎಚ್.ಎಂ.ಗಂಗಾಧರ್, ಕಾರ್ಯದರ್ಶಿ ಶೇಖರ್ ನಾಯ್ಕ, ರಾಜೀವ್ ಗಾಂಧಿ ಫೆಲೋಷಿಪ್ ಸಮಂತ್ ಶೆಟ್ಟಿ, ಗ್ರಂಥಪಾಲಕ ಬಿ.ಲೋಕೇಶ್ ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.
ಚಿತ್ರ – ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಗ್ರಾಮದಲ್ಲಿರುವ ಅರಿವು ಕೇಂದ್ರ ಹಾಗೂ ಪುಸ್ತಕ ಗೂಡಿಗೆ ನೇಚರ್ ಫೌಂಡೇಷನ್ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
