;

ಕೂಡ್ಲಿಗಿ : ಕಂಪನಿಗಳಿಂದ ಕೋಟಿ ಕೋಟಿ ತೆರಿಗೆ ವಂಚನೆ.!?, ರೈತರಿಗೂ ಪಂಗನಾಮ…ತಾಲೂಕಾಡಳಿತ ಕೈವಾಡ.!? ಶಂಕೆ.. ಉನ್ನತ ಮಟ್ಟದ ತನಿಖೆಗೆ ಹೋರಾಟಗಾರರ ಆಗ್ರಹ…!!!

ಕೂಡ್ಲಿಗಿ : ಕಂಪನಿಗಳಿಂದ ಕೋಟಿ ಕೋಟಿ ತೆರಿಗೆ ವಂಚನೆ.!?, ರೈತರಿಗೂ ಪಂಗನಾಮ…ತಾಲೂಕಾಡಳಿತ ಕೈವಾಡ.!? ಶಂಕೆ.. ಉನ್ನತ ಮಟ್ಟದ ತನಿಖೆಗೆ ಹೋರಾಟಗಾರರ ಆಗ್ರಹ-

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದೆಲ್ಲೆಡೆಗಳಲ್ಲಿ ಸೋಲಾರ್ ವಿಂಡೋ ಪವರ್ ಪಂಜನಿಗಳ ಹಾವಳಿ ಮಿತಿ ಮೀರಿದೆ , ಬಹುತೇಕ ಕಂಪನಿಗಳಿಂದ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಕೋಟಿ ಕೋಟಿ ತೆರಿಗೆ ಹಣ ವಂಚನೆಯಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ . ಕಾರಣ ಜಿಲ್ಲಾಡಳಿತ ಹಾಗೂ ಲೋಕಾಯುಕ್ತ ಇಡಿ ಇಲಾಖೆಗಳಿಂದ ತನಿಖೆಯಾಗಬೇಕಿದೆ , ನಿರ್ಲಕ್ಷ್ಯ ತೋರಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವದಿ ಧರಣಿ ನಡೆಸಲಾಗುವುದೆಂದು ಹೋರಾಟಗಾರರು ತಿಳಿಸಿದ್ದಾರೆ.
ಅವರು ಪ್ರವಾಸಿಮಂದಿರದಲ್ಲಿ , ಪತ್ರಿಕಾಗೋಷ್ಠಿನಡೆಸಿ ಹೇಳಿಕೆ ನೀಡಿದ್ದಾರೆ.
ಬಹುತೇಕ ರೈತರಿಗೆ ಕಂಪನಿಗಳಿಂದ ವಂಚನೆಯಾಗಿದ್ದು , ತಾಲೂಕಾಡಳಿತ ಹಾಗೂ ಸ್ಥಳೀಯ ಆಡಳಿತಕ್ಕೆ ತೆರಿಗೆ ನೀಡದೇ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಆರ್ಭಟಿಸುತ್ತಿವೆ.
ಈ ಸಂಬಂಧಿಸಿದಂತೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದು , ಈವರೆಗೆ ಶಿಸ್ಥು ಕ್ರಮಗಳನ್ನು ಜರುಗಿಸಿಲ್ಲ ರೆೈತರಿಗೆ ಅನ್ಯಾಯವಾಗುತ್ತಿದ್ದರೂ ತಾಲೂಕಾಡಳಿತ ಮೌನವಾಗಿದೆ. ಇದು ಹತ್ತಾರು ಅನುಮಾನಗಳನ್ನು ಹುಟ್ಟುಹಾಕುತ್ತಿದ್ದು , ಸಂಬಂಧಿಸಿದಂತೆ ಲೋಕಾಯುಕ್ತರು ಈಡಿ ಇಲಾಖೆಗಳು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ , ತಾಲೂಕಾಡಳಿತದ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಹೋರಾಟಗಾರರು ತಿಳಿಸಿದ್ದಾರೆ. ಕ್ಷೇತ್ರದಲ್ಲಿನ ಅನೇಕ ಕಂಪನಿಗಳು ಅನಧೀಕೃತವಾಗಿ ತಲೆ ಎತ್ತಿವೆ , ಅವು ಕಾನೂನು ನಿಯಮಗಳನ್ನು ಗಾಳಿಗೆ ತೂರಿವೆ. ಮತ್ತು ನೂರಾರು ರೈತರಿಗೆ ಅನ್ಯಾಯ ಎಸಗಿದ್ದು , ಸರ್ಕಾರಕ್ಕೆ ಕೋಟಿ ಕೋಟಿ ತೆರಿಗೆ ಹಣ ವಂಚನೆಯಾಗುತ್ತಿದೆ. ಈ ಹಗರಣದಲ್ಲಿ ಅನೇಕ ಸ್ಥಳೀಯ ಆಡಳಿತ ಅಧಿಕಾರಿಗಳು , ತಾಲೂಕಾಡಳಿತದ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಿನ್ನಬಾರದ ಹೇಸಿಗೆ ತಿಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಡಿ ಇಲಾಖೆ , ಲೋಕಾಯುಕ್ತ ಇಲಾಖೆ , ಸಿಬಿಐ , ಸಿಒಡಿ ಇಲಾಖೆಗಳು, ಎಸಿಬಿ ಇಲಾಖೆಯ ಉನ್ನತಾಧಿಕಾರಿಗಳು. ಆದಾಯ ತೆರಿಗೆ ಇಲಾಖೆ ಸ್ವಯಂ ದೂರು ದ‍ಾಖಲಿಸಿಕೊಂಡು , ತನಿಖೆ ನಡೆಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಮೊದಲು ತಹಶಿಲ್ದಾರರು ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳ , ಅಧಿಕಾರಿಗಳ ಆದಾಯ ಕುರಿತು ತನಿಖ ನಡೆಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ತಾವು ಅಗತ್ಯ ಸಾಕ್ಷ್ಯಾಧಾರಗಳ ಸಮೇತ , ಕಾನೂನಾತ್ಮಕ ಹೋರಾಟ ನಡೆಲಾಗುವುದು. ಮತ್ತು ಎಲ್ಲಾ ಮಾಧ್ಯಮಗಳ ಹಾಗೂ ಪತ್ರಿಕೆಗಳ ಕೇಂದ್ರ ಕಚೇರಿಗಳಿಗೆ ದೂರು ನೀಡಲಾಗುವುದೆಂದು ಹೋರಾಟಗಾರರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ , ಹಾಗೂ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಸಂತೋಷಕುಮಾರ. ವಕೀಲರು ಹಾಗೂ ಹೋರಾಟಗಾರರಾದ , ಸೂಲದಳ್ಳಿ ಬಸವರಾಜಪ್ಪ. ರೈತ ಸಂಘದ ಯುವ ಮುಖಂಡ , ಬಾಣದ ಮಾರುತಿ. ಕ್ಷೇತ್ರದ ವಿವಿದ ಗ್ರಾಮಗಳ , ಹೋರಾಟಗಾರರು ಮುಖಂಡರು ರೈತರು ಉಪಸ್ಥಿತರಿದ್ದರು……

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend