ಕಡಪಲ ಕೆರೆ ಶ್ರೀ ಹನುಮಂತರಾಯಪ್ಪ ರವರ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ
ವರದಿ .ನಾಗರಾಜು ಕೆಎಂ ಪಾವಗಡ ಪಾವಗಡ ಹಳೆಯ ಅಂಬೇಡ್ಕರ್ ಭವನ ಆವರಣದಲ್ಲಿ ತಮಟೆ ಸಂಸ್ಥೆ ಹಾಗೂ ದಲಿತ ಸಂಘಟನೆಗಳು ಒಕ್ಕೂಟದಿಂದ ಕಡಪಲಕೆರೆ ಶ್ರೀ ಹನುಮಂತರಾಯಪ್ಪ ರವರ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹನುಮಂತ್ ರಾಯಪ್ಪ ರವರ ಬಗ್ಗೆ ತಮಟೆ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ಬಿ. ಓಬಳೇಶ್ ರವರು ಮಾತನಾಡಿ ನಾವು ಸುಮಾರು ವರ್ಷಗಳಿಂದ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವು ಒಂದೇ ಮನೆಯಲ್ಲಿ ಮದುವೆಯಾಗಿದ್ದೇವೆ. ಇವರು ನೇರವಾಗಿ ಮಾತನಾಡುತ್ತಿದ್ದರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮಾಜಿ ತಾಲೂಕ್ ಪಂಚಾಯತಿ ಸದಸ್ಯರು ಹಾಗೂ ತಾಲೂಕ್ ದಂಡೋರ ಅಧ್ಯಕ್ಷರಾದ ಕೃಷ್ಣಾಪುರ ಕೃಷ್ಣಪ್ಪ ರವರು ಮಾತನಾಡಿ ಕಡಪಲ ಕೆರೆ ಹನುಮಂತ ರಾಯಪ್ಪ ರವರು 20 ವರ್ಷಗಳಿಂದ ಒಡೆನಾಟ ವಿದ್ಯಾರ್ಥಿ ಯಾಗಿದ್ದನಿಂದಲೂ ಪರಿಚಯ ಇವರು ಜ್ಞಾನವಂತರು ಬುದ್ಧಿವಂತರು ಆಗಿದ್ದರು. ಹಾಸ್ಟೆಲ್ ನಲ್ಲಿ ಹುಡುಗಿ ಹುಡುಗಿಯರು ಗಲಾಟೆ ಮಾಡಿದಾಗ ರಾಜಿ ಮಾಡುವಂತೆ ನನಗೆ ಹೇಳುತ್ತಿದ್ದರು. ಹನುಮಂತ್ ರಾಯಪ್ಪ ಅವರ ಸಮುದಾಯವನ್ನು ಒಗ್ಗಟ್ಟು ಮಾಡಿ ಹೋರಾಟ ಮಾಡಬೇಕು ಕನಸು ಕಂಡಿದ್ದರು. ಈ ಕನಸನ್ನು ಎಲ್ಲರೂ ಸೇರಿ ಈಡೇರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರು ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರುಕೊಡಲಿ ಎಂದು ಹೇಳುತ್ತಾನೆ. ಸುಬ್ಬರಾಜು ರವರು ಮಾತನಾಡಿ ಛತ್ರ ಸೈನ್ಯ ಎಷ್ಟು ಇದ್ದರೂ ರಾಜಸೈನ್ಯ ಸಾಟಿ ಇದ್ದಂತೆ ಅವರ ಜೀವನ ಸಿದ್ಧಾಂತಗಳ ಬಗ್ಗೆ ಹಂಚಿಕೊಂಡಿದ್ದರು. ಸಿ.ಕೆ ಟಿ ತಿಪ್ಪೇಸ್ವಾಮಿ ಅವರು ಮಾತನಾಡಿ ಹನುಮಂತರಾಯಪ್ಪ ರವರು ನೇರವಾಗಿ ಮಾತನಾಡುತ್ತಿದ್ದರು ಚತುರ ರಾತ್ರಿ ರಾತ್ರಿನೇ ಡಮನೇಷನ್ ಮಾಡಿ ಅಂಬೇಡ್ಕರ್ ಭವನ ನಿರ್ಮಿಸಿದರು ಯಾವಾಗಲೂ ನಮ್ಮತ್ರ ಹಂಚಿಕೊಳ್ಳುತ್ತಿದ್ದರು. ನಮ್ಮ ಸಮುದಾಯಕ್ಕೆ ಅಡ್ಡಿಪಡಿಸಿದರೆ ನಮ್ಮ ಸಮುದಾಯಕ್ಕೆ ಅನುಕೂಲವಾದ ಜಾಗವನ್ನ ಕಬಳಿಸಿದರೆ ಆ ಸಮುದಾಯವನ್ನು ನೇರವಾಗಿ ಬೈತಿದ್ದರು. ಮಾದರ ಮಹಾಸಭಾ ಅಧ್ಯಕ್ಷರ ನರಸಿಂಹಪ್ಪರವರ ಮಾತನಾಡಿ. ಈ ಸಂಘಟನೆಗೆ ಬರಬೇಕೆಂದರೆ ಹನುಮಂತರಾಯಪ್ಪ ರವರ ಕಾರಣ. ಹುಟ್ಟು ಆಕಸ್ಮಿಕ ಸಾವು ಖಚಿತ ನಾನು ಹೊರಡುವ ಸಂದರ್ಭದಲ್ಲಿ ಕಡಪಲಕೆರೆ ಗೇಟ್ ಬಂದರೆ ಹನುಮಂತ ರಾಯಪ್ಪ ಜ್ಞಾಪಕಕ್ಕೆ ಬರುತ್ತಾನೆ ಇವರು ನೇರವಾಗಿ ಮಾತನಾಡುತ್ತಿದ್ದರು. ಇವರನ್ನು ಮರೆಯುವುದಕ್ಕೆ ಆಗುತ್ತಿಲ್ಲ. ಇಂತಹ ವ್ಯಕ್ತಿತ್ವ ಉಳ್ಳವರನ್ನು ನಮ್ಮ ಸಂಘಟನೆಯಲ್ಲಿ ಬಹಳಷ್ಟು ಜನರಿದ್ದಾರೆ ರೂಪಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ಇನ್ನು ಹಲವಾರು ವಿಚಾರಗಳನ್ನ ನುಡಿದರು.
ವಳ್ಳೂರು ನಾಗೇಶ್ ಮಾತನಾಡಿ ಹುಟ್ಟು ಹೋರಾಟಗಾರ ಚತುರ ಹಿರಿಯ ಧೀಮಂತ ವ್ಯಕ್ತಿ ಮಾದಿಗ ಸಮುದಾಯಕ್ಕೆ ಕೈಲಾದಷ್ಟು ಸಹಾಯ ಮಾಡಿದರು ಇವರು ದೈಹಿಕವಾಗಿ ಇಲ್ಲದಿದ್ದರೂ ಸಹ ಜೀವಂತವಾಗಿದ್ದಾರೆ ಎಂದು ಸಭೆಯಲ್ಲಿ ನೆನಪಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ತಮಟೆ ಸುಬ್ಬರಾಯಪ್ಪ ಬಿ.ಪಿ ಪೆದ್ದನ್ನ. ಕನ್ನಮೇಡಿ ಕೃಷ್ಣಮೂರ್ತಿ. ಎಸ್ ಹನುಮಂತರಾಯಪ್ಪ. ಸಿ.ಕೆ.ಪುರ ಹನುಮಂತರಾಯಪ್ಪ ಬಿ ಹೊಸಳ್ಳಿ ಮಲ್ಲಿಕಾರ್ಜುನ ಎಸ್ ನರಸಿಂಹ. ಮಂಗಳವಾಡ ಮಂಜುನಾಥ ಮಂಗಳವಾಡ ಹನುಮಂತರಾಯ ಪಳ್ಳವಳಿ ಗಂಗಾಧರ ಹಾಗೂ ತಮಟೆ ಸಿಬ್ಬಂದಿ ವರ್ಗದವರು ತಮಟೆ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
