ಸಿಂಧನೂರು ಹಾಗೂ ಲಿಂಗಸಗೂರು ಹೆಚ್ಚುವರಿ ಭೂಮಿ ಭೂಹೀನ ರೈತರಿಗೆ ಹಂಚಲು ಆರ್ ಮಾನಸಯ್ಯ ಆಗ್ರಹ
ಲಿಂಗಸುಗೂರ ಮತ್ತು ಸಿಂಧನೂರ ತಾಲೂಕಿನಲ್ಲಿರುವ ಹೆಚ್ಚುವರಿ ಭೂಮಿಯನ್ನು ಭೂಹೀನ ರೈತರಿಗೆ ಹಂಚಬೇಕು ಹಾಗೂ ಆಕ್ರಮ ಮಾರಾಟ ತಡೆಯಬೇಕೆಂದು ಶುಕ್ರವಾರ ಸಹಾಯಕ ಆಯುಕ್ತರ ಕಾರ್ಯಾಲಯದಲ್ಲಿ ಸಹಾಯಕ ಆಯುಕ್ತರು ಬಸವಣ್ಣೆಪ್ಪ ಕಲ್ಲಶೆಟ್ಟಿ ಅವರಿಗೆ ಪಾಲಿಟ್ ಬ್ಯುರೋ ಮೆಂಬರ್ ಸಿಪಿಐಎಂಎಲ್ ರೆಡ್ ಸ್ಟಾರ್ ಆರ್ ಮಾನಸಯ್ಯ, ಹಾಗೂ ಕರ್ನಾಟಕ ರೈತ ಸಂಘ(ಎಐಕೆಕೆಎಸ) ಲಿಂಗಸುಗೂರ ಹಾಗೂ ಮುದಗಲ್ ಮುಖಂಡರುಗಳು ಜಂಟಿ ಸಮೀಕ್ಷೆಯದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಒತ್ತಾಯಿಸಿದರು. ಲಿಂಗಸೂಗೂರ ನಲ್ಲಿ.
ತಾಲೂಕಿನ ಕಳೆದ 25-30 ವರ್ಷಗಳಿಂದ ಸಾಗುವಳಿ ಮಾಡಿದ 998 ಭೂಹೀನ ರೈತರು ಅಕ್ರಮ-ಸಕ್ರಮ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದನ್ನು ಪುನರ್ ಪರಿಶೀಲನೆ ಮಾಡಿ ಪಟ್ಟಾನೀಡಲು ಒತ್ತಾಯಿಸಿದರು.
ಸಿಂಧನೂರು, ಜವಳಗೇರ ನಾಡಗೌಡರ ಕಳೆದ. 44 ವರ್ಷಗಳಿಂದ ವಿಚಾರಣೆಗೆ ಕೈಗೆತ್ತಿಕೊಳ್ಳದೆ ಅಕ್ರಮ ಭೂ ಸುಧಾರಣೆ ಕಾಯ್ದೆ ವಿರೋಧಿ,
ನೆಲಗಳ್ಳರ ಪಾಲು ಮಾಡಿದ 1064 ಎಕರೆ ಹೆಚ್ಚುವರಿ ಭೂ ಪ್ರಕರಣವನ್ನು ಮರು ವಿಚಾರಣೆ ಮಾಡಿ ಭೂಹೀನರಿಗೆ ಹಂಚುವುದು ಹಾಗೆಯೇ ಸದರಿ 1064 ಎಕರೆಯಲ್ಲಿ ಮಾರಾಟ, ವೈವಟನ್ನು ನಡೆಸಿದ್ದನ್ನು ಪ್ರಶ್ನಿಸಿ.
ಕೂಡಲೇ ಭೂ ಸುಧಾರಣೆ ಕಾಯ್ದೆ 74 ಹಾಗೂ 75 ರ ಅಡಿಯಲ್ಲಿ ಸಿಂಧನೂರು ತಾಲೂಕಿನ 48 ಸರ್ವೆ ನಂ. ಗ್ರಾಮಗಳ,
1064 ಎಕರೆ ಅಕ್ರಮ ವಹಿವಾಟುದಾರರಿಗೆ ನೋಟೀಸ್ ವಿತರಿಸಲು ಸಭೆಯಲ್ಲಿ ಆಗ್ರಹಿಸಿದ್ದರು.
ಇಲ್ಲದೇ ವ್ಯಾಪಾರ-ವಹಿವಾಟು, ನಡೆಸಿದ್ದನ್ನು ಪ್ರಶ್ನಿಸಿ ಹೋದಲ್ಲಿ ಏಕಕಾಲದಲ್ಲಿ ಸಿಂಧನೂರು ಮತ್ತು ಲಿಂಗಸೂಗೂರು ತಾಲೂಕುಗಳಲ್ಲಿ ಹೋರಾಟ ನಡೆಸುವುದು ಹಾಗೂ 2026 ಜನವರಿ ಮೊದಲ ವಾರದಲ್ಲಿ ಸಿಂಧನೂರು ಅಂಬಾಮಠಕ್ಕೆ ಬರುವ ಸಿಎಂ, ಸಿದ್ದರಾಮಯ್ಯರನ್ನು ಅಡ್ಡಗಟ್ಟಿ ಚಳುವಳಿ ರೂಪಿಸುವುದಾಗಿ ಎಚ್ಚರಿಕೆಯನ್ನು.
ಸಭೆಯಲ್ಲಿ ಸಂಘದ ಮುಖಂಡರು ನೀಡಿದರು.
ಇದಕ್ಕೆ ಸ್ಪಂದಿಸಿದ ಮಾನ್ಯ ಸಹಾಯಕ ಆಯುಕ್ತರು ಸಿಂಧನೂರು ಭೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ ಬುಧವಾರ ಒಳಗಾಗಿ 48 ಗ್ರಾಮಗಳ 1064 ಎಕರೆಯಲ್ಲಿ ವ್ಯಾಪಾರ, ವಹಿವಾಟು ನಡೆಸಿದಕ್ಕೆ ಭೂ ನ್ಯಾಯ ಮಂಡಳಿಯಿಂದ ನೋಟೀಸ್ ಜಾರಿ ಮಾಡುವುದಾಗಿ,
ಹಾಗೆಯೇ ಭೂ ಪ್ರಕರಣ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಮತ್ತು ಲಿಂಗಸಗೂರು ತಾಲೂಕಿನ ಅಕ್ರಮ ಸಕ್ರಮ ಭೂ ಪಟ್ಟಾ ಕುರಿತು ಮುಂದಿನ ಶುಕ್ರವಾರದೊಳಗೆ ಸೂಕ್ತವಾಗಿ ಸರ್ವೆ ಮಾಡಿ,ಪರಿಶೀಲನೆ ನಡೆಸಿ, ಹಂಚುವ ಭಾರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ್, ಜಿಲ್ಲಾ ಸಮಿತಿಯ ಹೆಚ್ ಆರ್ ಹೊಸಮನಿ, ಆದೇಶ ಹಿರೇ ನಗನೂರ, ಕರ್ನಾಟಕ ರೈತ ಸಂಘದ ಲಿಂಗಸಗೂರು ತಾಲೂಕು ಅಧ್ಯಕ್ಷ, ವೀರಭದ್ರಪ್ಪ ತೊರಲಬೆಂಚಿ, ಕಾರ್ಯದರ್ಶಿ, ಬಸವರಾಜ ಮುದುಗಲ್, ಹನುಮಂತ ಗೋಡಿಹಾಳ, ಚಿದಾನಂದ, ತಿಪ್ಪಣ್ಣ ಚಿಕ್ಕಹೆಸರೂರ, ಎಂ ನಿಸರ್ಗ ಗುಂಡಪ್ಪ ದೇವರಭೂಪುರ, ತಿಮ್ಮಣ್ಣ ಪೂಜಾರಿ, ಪರಸಪ್ಪ ಸುಣಕಲ್, ಹನುಮಂತ ಪೂಜಾರಿ, ದ್ಯಾಮಣ್ಣ ಸುಣಕಲ್ ಸೇರಿದಂತೆ ಇತರರು ಇದ್ದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
