ಗೌಡೂರು ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಜಾತ್ರಾ
ಗುರುಗುಂಟಾ: ಸಮೀಪದ ಗೌಡೂರು ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ರಥೋತ್ಸವ ಕಾರ್ಯಕ್ರಮ 13 ಶನಿವಾರ ಸಂಜೆ 6.30 ಘಂಟೆಗೆ ಜರಿಗಿತ್ತು ಜಾತ್ರೆ ನಿಮಿತ್ತ ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಶನಿವಾರ ಮುಂಜಾನೆ 5.30ಕ್ಕೆ ದೇವರಿಗೆ ಮಹಾರುದ್ರಾಭಿಷೆಕ, ವಿಶೇಷ ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ನಂತರ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ತೇರಿನ ಕಲಶದೊಂದಿಗೆ ಗಂಗಾ ಸ್ಥಳಕ್ಕೆ ಪೂಜೆಗೆ ತೆರಳಿದ್ದರು.
ಗಂಗಾ ಪೂಜೆಯ ನಂತರ ಮರಳಿ ಬಂದು ರಥೋತ್ಸವದ ಕಳಸಾರೋಹಣವನ್ನು ವಾದ್ಯ ಮೇಳಗಳ ಸಮೇತ ನೆರವೇರಿಸಿದ್ದರು.
ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡಾ ಹೊಸ್ತಿಲ ಹುಣ್ಣಿಮೆಯ ಒಂಬತ್ತನೇ ದಿನ ಶನಿವಾರ ಸಂಜೆ 6:30 ಗಂಟೆಗೆ ರಥೋತ್ಸವ ಜರುಗಿತು.
ಇದಕ್ಕೂ ಮೊದಲು ಎತ್ತಿನ ಬಂಡಿಯನ್ನು ಸರ್ವ ರೀತಿಯಿಂದ ಶೃಂಗರಿಸಿ ದೇವರ ಮೂರ್ತಿಯನ್ನಿರಿಸಿ ರಥೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ನೂತನ ರಥೋತ್ಸವ ಅಮರೇಶ್ವರ ಗಜದಂಡ ಶಿವಯೋಗಿಗಳ ತೇರು ನಲ್ಲಿ ಕುಳಿತು ಉತ್ಸವ ನಡೆಯಿತು ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಚಾಲನೆ ಸಿಕ್ಕು ರಥೋತ್ಸವ ನಡೆಯಿತು
ರಥೋತ್ಸವ ದಿನದ ಸಾಯಂಕಾಲ ಗ್ರಾಮದ ರಾಜ ಮನೆತನದ ರಾಜಾ ವೆಂಕಟಪ್ಪ ನಾಯಕರ ದರ್ಬಾರಿನಿಂದ ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಬಾಜಾ ಭಜಂತ್ರಿ,
ಸಕಲ ವಾದ್ಯ ಮೇಳಗಳೊಂದಿಗೆ ಆಗಮಿಸಿ, ಅಮರೇಶ್ವರ ಗುರು ಶ್ರೀ ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು ರಥಾರೂಢರಾದ ಬಳಿಕ ಗ್ರಾಮದ ರಾಜ ಮನೆತನದವರು ಮಹಾ ಮಂಗಳಾರತಿ ನೆರವೇರಿಸಿದ್ದರು.
ಊರಿನ ರಾಜರಾದ ಶ್ರೀ ಸೋಮನಾಥ್ ನಾಯಕ್ ಸೀತಾರಾಮ್ ನಾಯಕ್ ಲಕ್ಷ್ಮಣಾಯಕ್. ವೀರನಗೌಡ. ಅಮರಗುಂಟೆಪಾ ಉದ್ದಾರ. ಅರ್ಚಕರಾದ ಕರಿಯೂರಯ್ಯ ಸ್ವಾಮಿ.ಮಲ್ಲಯ್ಯ ಸ್ವಾಮಿ. ರಾಥಯ್ಯ ಸ್ವಾಮಿ. ಪೋಲಿಸ್ ಸಿಬ್ಬಂದಿ ಅವರ ಸಮ್ಮುಖದಲ್ಲಿ. ಊರಿನ ಸಕಲ ಗುರುಹಿರಿಯರು ಹಾಗೂ ಸಕಲ ಭಕ್ತಾದಿಗಳು ಸಮುಖದಲ್ಲಿ ಪಾಲ್ಗೊಂಡಿದ್ದರು
ಸೋಮವಾರ ದಿನಾಂಕ 15 ರಂದು ಉಚ್ಛಾಯ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.
2022 ರಲ್ಲಿ ಶ್ರೀಮತಿ ರಾಣಿ ಶಾಂತಕುಮಾರಿದೇವಿ ಹಾಗೂ ಊರಿನ ದೈವದೊಂದಿಗೆ ಕಬ್ಬಿಣ ಉಚ್ಛಾಯ ನಿರ್ಮಾಣ ಮಾಡಿಸಲಾಗಿದ್ದು ಸಡಗರದಿಂದ ಉಚ್ಛಾಯ ಮಹೋತ್ಸವವೂ ನಡೆಯಲಿದೆ.
ಪ್ರದರ್ಶನ: ಜಾತ್ರಾ ಮಹೋತ್ಸವದಂಗವಾಗಿ ಗೌಡೂರು ಗ್ರಾಮದ ಹಿರಿಯ ಕಲಾವಿದ ಬಳಗದಿಂದ ಸೋಮವಾರ ರಾತ್ರಿ ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ ಎಂಬ ಸುಂದರ ಸಾಮಾಜಿಕ ನಾಟಕ ಪ್ರದೇಶನ ನಡೆಯಲಿದೆ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
